Clickable Image

Friday, November 24, 2023

ಐ.ಟಿ.ಎಫ್ ಕಲಬುರಗಿ ಓಪನ್-2023 ಟೂರ್ನಿ ಹಿನ್ನೆಲೆ:* *ಚಂದ್ರಶೇಖರ್ ಪಾಟೀಲ ಕ್ರೀಡಾಂಗಣಕ್ಕೆ ಆರ್.ಸಿ., ಡಿ.ಸಿ. ಭೇಟಿ, ಸಿದ್ಧತೆ ಪರಿಶೀಲನೆ

 *ಐ.ಟಿ.ಎಫ್ ಕಲಬುರಗಿ ಓಪನ್-


ಕಲಬುರಗಿ,ನ.24(ಕ.ವಾ) ಕಲಬುರಗಿಯ ಚಂದ್ರಶೇಖರ್ ಪಾಟೀಲ ಕ್ರೀಡಾಂಗಣದಲ್ಲಿ ಇದೇ ನವೆಂಬರ್ 26 ರಿಂದ ಡಿಸೆಂಬರ್ 3ರ ವರೆಗೆ ಐ.ಟಿ.ಎಫ್. ಕಲಬುರಗಿ ಓಪನ್-2023 ಮೆನ್ಸ್ ಟೆನಿಸ್ ಟೂರ್ನಿ ಆಯೋಜನೆ ಹಿನ್ನೆಲೆಯಲ್ಲಿ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ ಮತ್ತು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶುಕ್ರವಾರ ಚಂಪಾ ಕ್ರೀಡಾಂಗಣಕ್ಕೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಅಂತಿಮ ಸಿದ್ಧತೆಗಳನ್ನು ಪರಿಶೀಲಿಸಿದರು.


ಕ್ರೀಡಾಂಗಣದಲ್ಲಿರುವ ಸಿಂಥೆಟಿಕ್ ಟೆನಿಸ್ ಕೋರ್ಟ್ ಅಂಗಣ, ಪ್ರೇಕ್ಷಕರ ಗ್ಯಾಲರಿ, ಐ.ಟಿ.ಎಫ್. ಸೂಪರ್‍ವೈಸರ್ ಕೋಣೆ, ಆಟಗಾರರ ಲಾಂಜ್, ಮೀಡಿಯಾ ಸೆಂಟರ್, ಫುಡ್ ಕೋರ್ಟ್ ಸ್ಥಳವನ್ನು ಖುದ್ದಾಗಿ ಪರಿಶೀಲಿಸಿದರು.


ಪಂದ್ಯಾವಳಿಯಲ್ಲಿ ಭಾಗವಹಿಸಲು ಈಗಾಗಲೆ ದೇಶ-ವಿದೇಶದಿಂದ ಆಟಗಾರರು ಆಗಮಿಸಿ ಅಭ್ಯಾಸದಲ್ಲಿ ನಿರತರಾಗಿದ್ದವರನ್ನು ಕುಶಲೋಪರಿ ವಿಚಾರಿಸಿದ ಕೃಷ್ಣ ಭಾಜಪೇಯಿ ಮತ್ತು ಬಿ.ಫೌಜಿಯಾ ತರನ್ನುಮ್ ಅವರು ಟೂರ್ನಿಗೆ ಶುಭ ಕೋರಿದರು. ಸಿಂಥೆಟಿಕ್ ಅಂಗಣ ಬಗ್ಗೆ ಅಭ್ಯಾಸದಲ್ಲಿ ನಿರತ ಟೆನಿಸ್ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದರು.


ದೇಶ-ವಿದೇಶದಿಂದ ಖ್ಯಾತನಾಮದ ಕ್ರೀಡಾಪಟುಗಳು ಆಗಮಿಸುವ ಕಾರಣ ಕ್ರೀಡಾಂಗಣ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶ ಸ್ವಚ್ಚತೆ ಕಾಪಾಡಬೇಕು. ಕ್ರೀಡಾಪಟುಗಳಿಗೆ, ಐ.ಟಿ.ಎಫ್. ಸಿಬ್ಬಂದಿಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂದರು.


ವಿಧಾನ ಪರಿಷತ್ ಶಾಸಕ ಶಶೀಲ ಜಿ. ನಮೋಶಿ, ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ ಸಂಸ್ಥೆಯ ಟೂರ್ನಾಮೆಂಟ್ ನಿರ್ದೇಶಕ ಪೀಟರ್ ವಿಜಯಕುಮಾರ, ಪ್ರೊಬೇಷನರ್ ಐ.ಎ.ಎಸ್. ಅಧಿಕಾರಿ ಗಜಾನನ್ ಬಾಳೆ, ಸಹಾಯಕ ಆಯುಕ್ತೆ ಮಮತಾ ಕುಮಾರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಗಾಯತ್ರಿ ಇದ್ದರು.

Post a Comment

Whatsapp Button works on Mobile Device only