ಇಂಡಿ .ಜಿಲ್ಲೆ ಮಳೆ ಇಲ್ಲದೆ ಬರಗಾಲ ಎದುರಿಸುತ್ತಿದ್ದು ಮೊದಲುಕೃಷ್ಣಾ ಕಾಲುವೆಯಿಂದ ಕುಡಿಯುವ ನೀರಿಗಾಗಿ ಕೆರೆ ತುಂಬಿ ನಂತರ ರೈತರ ಹೊಲಗಳಿಗೆ ನೀರು ಕೊಡುವ ವ್ಯವಸ್ಥೆ ಮಾಡುವದಾಗಿ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲರು ಹೇಳಿದರು.
ಅವರು ತಾಲೂಕಿನ ಹಂಜಗಿ ಕೆರೆ ವೀಕ್ಷಣೆ ಮಾಡುವ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾದ ರೈತರನ್ನು ಉದ್ದೇಶಿಸಿ ಮಾತನಾಡಿದರು.
ಈಗಾಗಲೇ ಸರಕಾರ ಬರ ಪರಿಸ್ಥಿತಿ ನಿವಾರಿಸಲು ಸ್ವಲ್ಪ ಹಣ ಬಿಡುಗಡೆ ಮಾಡಿದೆ.ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಇನ್ನೂ ಐವತ್ತು ಕೋಟಿ ರೂ ಬಿಡುಗಡೆಗೆ ಆಗ್ರಹಿಸಿದ್ದೇನೆ. ಬರ ಕುರಿತು ಮತ್ತು ಜನ ಜಾನುವಾರುಗಳಿಗೆ ನೀರಿನ ಕುರಿತು ಯಾವದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಮುಖ್ಯಮಂತ್ರಿಗಳು ತಿಳಿಸಿದ್ದಾರೆ ಎಂದರು.
ಇದೇ ವೇಳೆ ಸಚಿವರು ಹೊರ್ತಿ ಮತ್ತು ಸಾವಳಸಂಗ ಗುಡ್ಡಕ್ಕೆ ಹೋಗಿ ಅಲ್ಲಿ ಬೆಳೆ ವೀಕ್ಷಿಸಿದರು. ತಾಂಬಾ ಗ್ರಾಮದಲ್ಲಿ ಪಶು ಇಲಾಖೆಯಿಂದ ಮೇವಿನ ಬೆಳೆ ಬೀಜ ವಿತರಣೆ ಮತ್ತು ದನಗಳಿಗೆ ಅಹಾರ ಕಿಟ್ ವಿತರಣೆ ಮಾಡಿದರು.
ಇಂಡಿಯ ಶಾಸಕ ಯಶವಂತರಾಯಗೌಡ ಪಾಟೀಲ, ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಜಿಲ್ಲಾಧಿಕಾರಿ ಭೂಬಾಲನ್, ಸಿಇಒ ರಾಹುಲ್ ಶಿಂಧೆ, ಕೃಷ್ಣಾ ಮೇಲ್ದಂಡೆ ಅಧಿಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ,ಗ್ರಾಮೀಣ ನೀರು ಸರಬರಾಜು ಇಂಡಿಯ ಅಭಿಯಂತರ ಎಸ್.ಆರ್.ರುದ್ರವಾಡಿ, ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗಧ್ಯಾಳ, ತಹಸೀಲ್ದಾರ ಇಂಡಿ ಬಿ.ಎಸ್.ಕಡಕಬಾವಿ,ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ, ತಾಂಬಾ ಪಶು ಇಲಾಖೆ ವೈಧ್ಯಾಧಿಕಾರಿ ಡಾ|| ರವಿಶಂಕರ ಬಿರಾದಾರ,ಇಒ ಬಾಬು ರಾಠೋಡ ಮತ್ತಿತರಿದ್ದರು.
ಫೋಟೋ- ಇಂಡಿ ೦೩
ಇಂಡಿಯ ಹಂಜಗಿ ಕೆರೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ವೀಕ್ಷಿಸಿದರು.
Post a Comment