ಶಹಾಬಾದ : - ಲಿಂಗೈಕ್ಯ ಶ್ರೀ ಶರಣಬಸವ ಸ್ವಾಮಿಗಳ ಸಂಸ್ಮರಣೋತ್ಸವ ಹಾಗೂ ಗದ್ದುಗೆ ಶಿಲಾಮಂಟಪ ಶಿಲಾನ್ಯಾಸ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭೋವಿ ಜನಜಾಗೃತಿ ರಥಯಾತ್ರೆ ಕೈಗೊಳ್ಳಲಾಗಿದ್ದು, ಈ ಮೂಲಕ ಸಮಾಜವನ್ನು ಸಂಘಟಿಸಲು ಶ್ರಮಿಸಲಾಗುತ್ತಿದೆ ಎಂದು ಕನಕಪ್ಪ ದಂಡಗುಲಕರ ಅವರು ಹೇಳಿದರು.
ಅವರು ಮಂಗಳವಾರ ನಗರದ ಬಸವೇಶ್ವರ ವೃತ್ತದಲ್ಲಿ ಭೋವಿ ಜನಜಾಗೃತಿ ಡಿಜಿಟಲ್ ರಥ ಯಾತ್ರೆಗೆ ಸ್ವಾಗತಿಸಿ ಮಾತನಾಡಿದರು.
ನವೆಂಬರ್ 23ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಾಗಲಕೋಟೆಯ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠದ ಗುರುಕುಟೀರ ಉದ್ಘಾಟನೆ ನೇರವೇರಿಸಲಿದ್ದು ಕಾರ್ಯಕ್ರಮದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ಭಾಗವಹಿಸಲಿದ್ದು, ಕಾರ್ಯಕ್ರಮದ ಮೂಲಕ ಭೋವಿ ಸಮಾಜವನ್ನು ಸಂಘಟಿಸಲಾಗುತ್ತಿದೆ ಎಂದರು.
ಸಿದ್ರಾಮ ಕುಸಾಳೆ ಮಾತನಾಡಿ, ಶರಣಬಸವ ಶ್ರೀಗಳು ಸಮುದಾಯವನ್ನು ಮೌಢ್ಯತೆಯಿಂದ ವೈಚಾರಿಕತೆಯ ಪಥಕ್ಕೆ ತಂದವರು, ಮುಗ್ಧರನ್ನು ಪ್ರಬುದ್ಧರನ್ನಾಗಿಸಿದವರು, ಕಂದಾಚಾರ ಪರಂಪರೆಯಿಂದ ಶರಣ ಪರಂಪರೆಗೆ ಸೆಳೆದವರು, ಶ್ರಮಿಕ ವರ್ಗವನ್ನು ಅಕ್ಷರದ ವಾರಸುದಾರರನ್ನಾಗಿಸಿದ ಲಿಂಗೈಕ್ಯ ಶ್ರೀ ಶರಣಬಸವ ಸ್ವಾಮಿಗಳ ಸಂಸ್ಮರಣೋತ್ಸವ, ಗದ್ಗುಗೆ ಶಿಲಾಮಂಟಪ ಶಿಲಾನ್ಯಾಸ ನೇರವೇರಿಸಲಾಗುತ್ತದೆ, ಭೋವಿ ಜಗದ್ಗುರುಗಳ ದಿವ್ಯಸಾನಿಧ್ಯದಲ್ಲಿ ಸಮಾರಂಭ ಜರುಗಲಿದೆ ಎಂದು ಮಾಹಿತಿ ನೀಡಿದರು.
ಈ ಸಂಧರ್ಭದಲ್ಲಿ ಭೋವಿ ವಡ್ಡರ ಸಮಾಜ ಸೇವಾ ಸಂಘ ತಾಲ್ಲೂಕ ಅಧ್ಯಕ್ಷರಾದ ಶ್ರೀ ಕಳ್ಳೋಳಿ ಕುಸಾಳೆ, ರಮೇಶ ಮೇಲಗಿರಿ, ಜಯಕುಮಾರ ಚೌಧರಿ, ಭಗವಾನ ದಂಡಗುಲಕರ, ಬಾಬು ಪವಾರ, ರಾಮು ಕುಸಾಳೆ, ರಾಮಸ್ವಾಮಿ ದೇವಕರ, ಸಂಜಯ ವಿಟ್ಕರ, ರಮೇಶ ಪವಾರ, ಯಲ್ಲಪ್ಪ ದಂಡಗುಲಕರ, ಶ್ರಿನಿವಾಸ ನೇದಲಗಿ, ಉಮೇಶ ನಿಂಬಾಳಕರ, ಸಮಾಜದ ಬಂದುಗಳು ಹಾಗೂ ಯುವಕರು ಭಾಗವಹಿಸಿದ್ದರು.
Post a Comment