ಇಂಡಿ : ಕುಟುಂಬಸ್ಥರು ಮನೆಯಲ್ಲಿ ತಾಯಂದಿರಲ್ಲಿ ರಕ್ತಹೀನತೆ ಮತ್ತು ಅಪೌಷ್ಟಿಕತೆ ನಿವಾರಿಸಲು ‘ಅನೀಮಿಯಾ ಮುಕ್ತವಾಗಬೇಕು ಅನಿಮಿಯ ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಹಿರಿಯ ವೈದ್ಯಾಧಿಕಾರಿ ಡಾ.ಪ್ರಶಾಂತ ಧೋಮಗೊಂಡ ಹೇಳಿದರು.
ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜ ಹಾಗೂ ಚಿಕ್ಕ ಬೇವನೂರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಆರೋಗ್ಯ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಅನಿಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ ಎಂಬ ಆರೋಗ್ಯ ಕಾರ್ಯಕ್ರಮದಲ್ಲಿ ಅವರು ಸಸಿಗೆ ನೀರುಉಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿ ರಕ್ತಹೀನತೆ ಮತ್ತು ಅಪೌಷ್ಟಿಕತೆ ಪತ್ತೆ ಮಾಡಲು ಸಾಮೂಹಿಕವಾಗಿ ತಪಾಸಣೆ ಮಾಡಲು ಸರಕಾರ ಉತ್ತಮ ಯೋಜನೆಯನ್ನು ಜಾರಿಗೆ ತಂದಿರುತ್ತದೆ. ಸರಕಾರ ಆರೋಗ್ಯ ಇಲಾಖೆ ಮೂರು ವರ್ಷದೊಳಗಿನ ಮಕ್ಕಳಿಗೆ ವರ್ಷಕ್ಕೆ ಎರಡು ಬಾರಿ ವಿಟಮಿನ್ ‘ಎ’ ಪೂರೈಕೆಯ ಸಮಯದಲ್ಲಿ ರಕ್ತಹೀನತೆ ತಪಾಸಣೆ ಮಾಡುತ್ತಾರೆ . ಆದ್ದರಿಂದ ಕಬ್ಬಿಣಾಂಶ, ಫೋಲಿಕ್ ಆಮ್ಲ ನೀಡುವಿಕೆ ಮತ್ತು ಜಂತುಹುಳು ನಿವಾರಣೆಗೆ ಮಾತ್ರೆಗಳು ಪಡೆಯಬೇಕು ಎಂದರು.
ಡಾ. ಐ.ಎಂ.ಪಠ್ಯದ ಹಾಗೂ
ಹಿರಿಯ ಆರೋಗ್ಯ ಅಧಿಕಾರಿ ಎಸ್ ಎಚ್ ಅತನೂರ ಮಹಾರಾಜ್ .ರಾಮಗೊಂಡ ಬಡಿಗೇರ ಚೌಹಾಣ ಶಂಕರ ಪ್ರೀಯಾಂಕ ಪ್ರದೀಪ .ರಾಜು ದಶವಂತ ಮಾತನಾಡಿ ಅನಿಮಿಯಾ ಮಕ್ಕಳಿಗೆ ಹಸಿರು ತರಕಾರಿಗಳು ಮತ್ತು ಹಣ್ಣು ಹಂಪಲಗಣನ್ನು ತಿನ್ನಲು ಸೂಚಿಸಿ ಪ್ರತಿ ಜನಾಂಗವು ಸ್ವಚ್ಛತೆಯ ಬಗ್ಗೆ ಇರಲು ತಿಳಿಸಿದರು.
ಸಮಾರಂಭದಲ್ಲಿ ಶಿವಾನಂದ ಹಾಜರಿದ್ದರು ಆರೋಗ್ಯ ಇಲಾಖೆಯ ಸಿಬ್ಬಂದಿಗಳು
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೈ ಎಂ ಪೂಜಾರ ಸ್ವಾಗತಿಸಿದರು. ಅಪಾರ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಹಾಜರಿದ್ದರು.
Post a Comment