Clickable Image

Thursday, November 9, 2023

ಚಿತ್ತಾಪುರ ಆಟೋ ಮತ್ತು ಟ್ಯಾಂಕರ್ ಡಿಕ್ಕಿ :ಆರು ಜನರ ಸಾವು


ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದ ಬಳಿ ಭೀಕರ ಅಪಘಾತ ಸಂಭವಿಸಿದು. ಟ್ಯಾಂಕರ್ ಆಟೋಗೆ ಡಿಕ್ಕಿಯಾದ ಪರಿಣಾಮ, 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಇಂದು ನಡೆದಿದೆ.




ಆಟೋಗೆ ಟ್ಯಾಂಕರ್ ಡಿಕ್ಕಿಯಾಗಿ ಸಂಭವಿಸಿದಂತ ಅಪಘಾತದಲ್ಲಿ ಮೃತಪಟ್ಟವರೆಲ್ಲರೂ ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದವರು ಎಂದು ಗುರುತಿಸಲಾಗಿದೆ. ನಸೀಮಾ ಬೇಗೆಂ. ಬೀಬಿ ಫಾತೀಮಾ. ಅಬೂಬಕರ್. ಬೀಬಿ ಮರಿಯಮ್ಮ. ಎಂ.ಡಿ.ಪಾಶಾ.ಹಾಗೂ ಆಟೋ ಡ್ರೈವರ್ ಬಾಬಾ ಎಂದು ತಿಳಿದುಬಂದಿದೆ


ಈ ವಿಷಯ ತಿಳಿದು ಸ್ಥಳಕ್ಕೆ ವಾಡಿ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಹೆಚ್ಚಿನ ಮಾಹಿತಿ ತಿಳಿದು ಬರಬೇ


ಕಿದೆ.

Post a Comment

Whatsapp Button works on Mobile Device only