*ಅಂತರಾಷ್ಟ್ರೀಯ ದತ್ತು ಮಾಸಾಚರಣೆ ಅಂಗವಾಗಿ ಜಿಲ್ಲಾಧಿಕಾರಿಗಳ ಬಿ. ಫೌಜಿಯ್ ತರನ್ನುಮ ರವರಿಂದ ಚಾಲನೆ.*
ಕಲಬುರಗಿ,ನ.0
9(ಕ.ವಾ)- ಗುರುವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಜಿಲ್ಲಾ ಮಕ್ಕಳ ಸಹಾಯವಾಣಿ 1098/12 ಮತ್ತು ಸರ್ಕಾರಿ ಹಾಗೂ ಸರ್ಕಾರೇತರ ಮಕ್ಕಳ ಪಾಲನಾ ಸಂಸ್ಥೆಗಳ ಇವರ ಅಂತರಾಷ್ಟ್ರೀಯ ದತ್ತು ಮಾಸಾಚರಣೆ ನವೆಂಬರ್ 2023 ರ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯಲ್ಲಿ ಅರಿವು ಹಾಗೂ ಜಾಥಾ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಬಿ.ಘೌಜಿಯ್ ತರನ್ನುಮ್ ಅವರು ಚಾಲನೆ ನೀಡಿದ್ದರು
ಜೆ.ಜೆ. ಕಾಯ್ಕೆ 20 ಸೆಕ್ಷನ್ 81 ರನ್ವಯ ಮಕ್ಕಳನ್ನು ಮಾರಾಟ ಮಾಡಿದವರಿಗೂ ಹಾಗೂ ಮಕ್ಕಳನ್ನು ಕೊಂಡುಕೊಂಡವರಿಗೆ 5 ವರ್ಷಗಳ ಕಠಿಣ ಸಜೆ ಹಾಗೂ ರೂ.1 ಲಕ್ಷ ದಂಡವನ್ನು ವಿಧಿಸಬಹುದು. ಒಂದು ವೇಳೆ ಅಂತಹ ಪ್ರಕರಣಗಳಲ್ಲಿ ಆಸ್ಪತ್ರೆ ಸಿಬ್ಬಂದಿಯವರು ಶಾಮಿಲಾಗಿದ್ದಲ್ಲಿ ಕಠಿಣ ಸಜೆಯನ್ನು 7 ವರ್ಷಗಳ ವರೆಗೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ ಕುಟುಂಬವಿಲ್ಲದ ಮಕ್ಕಳಿಗೆ ಕಾನೂನು ಬದ್ಧವಾಗಿ ಕುಟುಂಬವನ್ನು ಒದಗಿಸುವುದು. ಅನಾಥ, ಒಪ್ಪಿಸಲ್ಪಟ್ಟ, ನಿರ್ಗತಿಕ ಮತ್ತು ಪರಿತ್ಯಕ್ತ ಮಕ್ಕಳ ಕಂಡು ಬಂದಲ್ಲಿ ಮಕ್ಕಳ ಸಹಾಯವಾಣಿ 1098 ಗೆ ಕರೆ ಮಾಡುವುದರ ಮುಖಾಂತರ ಮಕ್ಕಳ ಭವಿಷ್ಯತಿನ ಹಿತಾಸಕ್ತಿಗಾಗಿ ಎಲ್ಲರೂ ಕೈ ಜೋಡಿಸಿ ಮಕ್ಕಳನ್ನು ಅನಾಥ ಪ್ರಜ್ಞೆಯಿಂದ ಕಾಪಾಡುವುದರೊಂದಿಗೆ ತಾಯಿತನದ ಹಂಬಲವನ್ನು ನಿಗಿಸೋಣ ಎಂದು ಈ ಮೂಲಕ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಿ. ಮಂಜುಳ ಅವರು ಪ್ರತಿಜ್ಞಾ ವಿಧಿ ಭೋಧಿಸಿದರು.
ಜಾಥವು ಮಿನಿ ವಿಧಾನಸೌಧದಿಂದ ಸರ್ದಾರವಲ್ಲಭಬಾಯಿ ಹೊರಟು ಮುಕ್ತಾಯವಾಯಿತು.
ಇದೇ ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತಾಲಯದ ಎಸಿಪಿ ಶ್ರೀ ಸಂತೋಷ ಬನ್ನಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯ ಉಪನಿರ್ದೇಶಕರು ನವೀನ ಕುಮಾರ , ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಮತ್ತು ಪರೀಕ್ಷಣಾಧಿಕಾರಿ ಭರತೇಶ ಶೀಲವಂತರ ರಕ್ಷಣಾಧಿಕಾರಿ ಅಸಾಂಸ್ತಿಕ ಸೇವೆ, ಬಸವರಾಜ, ಮಕ್ಕಳ ಪಾಲನ ಸಂಸ್ಥೆಗಳ ಅಧೀಕ್ಷಕರು ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು, ಮಕ್ಕಳ ಸಹಾಯವಾಣಿ ಸಿಬ್ಬಂದಿಗಳು, ಸಂಯೋಜಕರು ಶ್ರೀ ಬಸವರಾಜ್ ತೆಂಗಳಿ ಮತ್ತು ಇತರರು ಭಾಗವಹಿಸಿದ್ದರು.
Post a Comment