ಜೇವರ್ಗಿ: ವಿದ್ಯಾರ್ಥಿ ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗುವುದು ಸಹಜ , ಹೀಗೆ ಎದುರಾದ ಸಮಸ್ಯೆಗಳನ್ನು ಕೌಶಲ್ಯದಿಂದ ಪರಿಹರಿಸಿಕೊಳ್ಳುವ ಸಾಮರ್ಥ್ಯ ಹೊಂದಬೇಕು: ವಿದ್ಯಾರ್ಥಿಗಳು ಭವಿಷ್ಯವನ್ನು ಸುಂದರವಾಗಿ ರೂಪಿಸಿಕೊಳ್ಳಲು ಇಂಥ ಕಾರ್ಯಗಾರಗಳು ಸಹಕಾರಿಯಾಗುತ್ತವೆ ವಿದ್ಯಾರ್ಥಿಗಳು ಇದರ ಲಾಭವನ್ನು ಪಡೆದುಕೊಳ್ಳಬೇಕೆಂದು ಪ್ರಾಂಶುಪಾಲ ಡಾಕ್ಟರ್ ಕರಿ ಗೂಳೇಶ್ವರ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅವರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಿಮಾನ್ಸ್ ,ಕಲ್ಬುರ್ಗಿಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕಾಲೇಜಿನ ಐಕ್ಯೂಏಸಿ ಮತ್ತು ಎರಡು ಎನ್ಎಸ್ಎಸ್ ಘಟಕಗಳ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಯುವ ಸ್ಪಂದನ ಕೇಂದ್ರವು ಆಯೋಜಿಸಿದ್ದ ಒಂದು ದಿನದ ಜೀವನ ಕೌಶಲ್ಯ ಕಾರ್ಯಗಾರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಕಾರ್ಯಕ್ರಮದ ವೇದಿಕೆಯಲ್ಲಿ ನಿಮಾನ್ಸ್ ತರಬೇತುದಾರ ನಾಗರಾಜ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮಮತಾ, ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಡಾಕ್ಟರ್ ಕೃತೇಜ ನಸರಿನ್ ಸಾಂಸ್ಕೃತಿ ವಿಭಾಗದ ಸಂಚಾಲಕ ಪ್ರೊಫೆಸರ್ ಖಾಜಾವಲಿ ಈಚನಾಳ ಮತ್ತು ಗ್ರಂಥಪಾಲಕ ಡಾಕ್ಟರ್ ವಿನೋದ್ ಕುಮಾರ್ ಹಾಜರಿದ್ದರು ಎನ್ಎಸ್ಎಸ್ ಘಟಕದ ಸಂಚಾಲಕ ಅಮಿತ್ ಮಾಸಿಮಡಿ ಸ್ವಾಗತಿಸಿದರು ಇನ್ನೊಬ್ಬ ಏನ್ ಎಸ್ ಎಸ್ ಘಟಕ ಸಂಚಾಲಕರಾದ ಡಾಕ್ಟರ್ ಶರಣಪ್ಪ ಗುಂಡಗುರ್ತಿ ನಿರೂಪಿಸಿ ವಂದಿಸಿದರು ಕಾರ್ಯಗಾರದಲ್ಲಿ ಕಾಲೇಜಿನ ಸುಮಾರು 300 ಜನ ವಿದ್ಯಾರ್ಥಿಗಳು ಭಾಗವಹಿಸಿ ಸದುಪಯೋಗಪಡಿಸಿಕೊಂಡರು.
Post a Comment