Clickable Image

Friday, November 10, 2023

ಅತಿಸಾರ ಭೇದಿ ನಿಯಂತ್ರಣ ಕುರಿತು ಸಮುದಾಯದ ಜಾಗೃತಿ ನೀಡಿ " CEO ಭಂವರ್ ಸಿಂಗ್ ಮೀನಾ.



 ಕಲಬುರಗಿ ನ.11 (ಕ.ವಾ)ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ 2023,(IDCF) ಸಮುದಾಯದ ಜನರಿಗೆ ಬಾಲ ನ್ಯೂಮೋನೀಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಾಗೂ ರಾಷ್ಟೀಯ ನವಜಾತ ಶಿಶು ಸಪ್ತಾಹ 2023 ಕುರಿತು ಜಾಗೃತಿ ಮೂಡಿಸಲು ನವೆಂಬರ್ 15 ರಿಂದ 28 ರವರೆಗೆ ಮನೆ - ಮನೆ ಭೇಟಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವಾಹಣಾಧಿಕಾರಿಗಳು ಮಾನ್ಯ ಭಂವರ್ ಸಿಂಗ್ ಮೀನಾ ಅವರು ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯಿಂದ ಸಭೆಯಲ್ಲಿ ಪಾಲ್ಗೊಂಡ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.


ನಗರದ ಹೊಸ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ತೀವ್ರತರ ಅತಿಸಾರ ಬೇಧಿ ನಿಯಂತ್ರಣ ಅಭಿಯಾನ *ನವಜಾತ ಶಿಶು‌ ಸಪ್ತಾಹ 2023ರ* ಕುರಿತು ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯನ್ನು ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಮನೆಗಳಿಗೆ ಭೇಟಿ ಕೈಗೊಳ್ಳುವ ಆರೋಗ್ಯ ಇಲಾಖೆಯ ತಂಡವು ಹುಟ್ಟಿನಿಂದ 5 ವರ್ಷದೊಳಗಿನ ಮಕ್ಕಳಿಗೆ ಜೀವ ಜಲ ಪೊಟ್ಟಣವನ್ನು ( ಓ ಆರ್ ಎಸ್ ) ಉಚಿತವಾಗಿ ನೀಡುವುದರ ಜೊತೆಗೆ ದ್ರಾವಣವನ್ನು ತಯಾರಿಸುವ ವಿಧಾನವನ್ನು ಪ್ರತಿಯೊಬ್ಬ ತಾಯಂದಿರಿಗೆ ಹಾಗೂ ಕುಟುಂಬದ ಇತರೆ ಸದಸ್ಯರಿಗೆ ತಿಳಿಸಿಕೊಡಬೇಕೆಂದು ಹಾಗೂ ಮನೆ ಭೇಟಿ ಸಂದರ್ಭದಲ್ಲಿ ಮಕ್ಕಳಿಗೆ ಅತಿಸಾರಭೇದಿ ಕಂಡು ಬಂದಲ್ಲಿ ಜಿಂಕ್ ಮಾತ್ರೆಯನ್ನು ನೀಡುವಂತೆ ಹೇಳಿದರು. 


ಜಿಲ್ಲೆಯಲ್ಲಿ ಹುಟ್ಟಿನಿಂದ 5 ವರ್ಷದೊಳಗಿನ ಒಟ್ಟು 259255 ಮಕ್ಕಳಿಗೆ ಓ ಆರ್ ಎಸ್ ಪೊಟ್ಟಣ ವಿತರಣೆ ಗುರಿ ಹೊಂದಿದ್ದು, ಮನೆಗಳ ಭೇಟಿ ಸಂದರ್ಭದಲ್ಲಿ ಭೇದಿಯಿಂದ ಬಳಲುತ್ತಿರುವ ಮಕ್ಕಳಿಗೆ 14 ದಿನಗಳ ಕಾಲ ಜಿಂಕ್ ಮಾತ್ರೆಯನ್ನು 171690 ಲಭ್ಯವಿದೆ ಇದು ಸಹ ವಿತರಿಸಬೇಕು ಎಂದು ಸೂಚಿಸಿದರು.

ಮನೆ ಭೇಟಿ ನೀಡುವ ವೈದ್ಯಕೀಯ / ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರು, ಆರೋಗ್ಯ ಕೇಂದ್ರದ ಸಿಬ್ಬಂದಿ ತಂಡವು ಕುಟುಂಬದ ಎಲ್ಲಾ ಸದಸ್ಯರಿಗೆ ಊಟದ ಪೂರ್ವದ ಪೂರ್ವದಲ್ಲಿ ಹಾಗೂ ಶೌಚಾಲಯದ ನಂತರ ಕೈಗಳನ್ನು ಸಾಬೂನಿಂದ ತೊಳೆದು ತೊಳೆಯುವಂತೆ ಜಾಗೃತಿ ಮೂಡಿಸಬೇಕು ಆಹಾರ ಪದಾರ್ಥ ತಯಾರಿಸಿದ ನಂತರ ಸರಿಯಾಗಿ ಮುಚ್ಚಳ ಮುಚ್ಚಬೇಕು ಮತ್ತು ಬಿಸಿಯಾದ ಆಹಾರ ಸೇವಿಸುವಂತೆ ತಿಳಿಸಬೇಕು. ಹಾಗೆ ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿ ಅಡಿಯಲ್ಲಿ ಮತ್ತು ಗ್ರಾಮ ಆರೋಗ್ಯ ಪೋಷ್ಠಿಕ ಆಹಾರ ಸಭೆ ಕಡ್ಡಾಯವಾಗಿ ನಡೆಸಬೇಕೆಂದು ಸೂಚಿಸಿದರು.

ಎಲ್ಲಾ ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳ ಹಾಗೂ ಸ್ಥಳೀಯ ಮುಖಂಡರನ್ನು ಕರೆದು ಎಲ್ಲಾ ಕಂದಾಯ ಗ್ರಾಮಗಳಲ್ಲಿ ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿ ಸಭೆಯಡಿಯಲ್ಲಿ ಕಾರ್ಯಕ್ರಮ ಚಾಲನೆಗೆ ಆಹ್ವಾನಿಸಬೇಕು ಅಭಿಯಾನದ ಭಾಗವಾಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಕಡ್ಡಾಯವಾಗಿ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ವಿಶೇಷ ಗ್ರಾಮ ಆರೋಗ್ಯ ಪೌಷ್ಟಿಕ ದಿನ ಆಚರಣೆಯನ್ನು ಮಾಡುವಂತೆ ಹಾಗೂ ಶಿಕ್ಷಣ ಇಲಾಖೆಯು ಎಲ್ಲಾ ಮಕ್ಕಳಿಗೆ ಕೈ ತೊಳೆಯುವ ವಿಧಾನ, ಶೌಚಾಲಯ ಬಳಕೆ, ವೈಯಕ್ತಿಕ ಸ್ವಚ್ಛತೆ, ಜಾಥಾ ಕಾರ್ಯಕ್ರಮದ ಮೂಲಕ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಟಿಕತೆ ಕುರಿತು ಅರಿವು ಮೂಡಿಸುವಂತೆ ಹಾಗೂ ಸಿಬ್ಬಂದಿಯವರು ಸಂಪೂರ್ಣ ಸಹಕಾರ ಪಡೆಯಬೇಕು ಯಾವುದೇ ನ್ಯೂನತೆಗಳಿಲ್ಲದೆ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವಂತೆ ಸೂಚಿಸಿದರು.


ಇದೇ ಸಂದರ್ಭದಲ್ಲಿ ಪ್ರಭಾರ ಡಿ ಹೆಚ್ ಓ, ಡಾ. ರಾಜಕುಮಾರ್ ಕುಲಕರ್ಣಿ ,

ಜಿಲ್ಲಾ ಆರ್‌ಸಿ ಹೆಚ್ ಅಧಿಕಾರಿ ಡಾ|| ಶರಣಬಸಪ್ಪ ಕ್ಯಾತನಾಳ ಅವರು ಮಾತನಾಡಿ ಅನೀಮಿಯ ಮುಕ್ತ ಪೌಷ್ಟಿಕ ಕರ್ನಾಟಕ ನವಜಾತ ಶಿಶು ಸಪ್ತಾಹ ಹಾಗೂ ಸಾಂಸ್ ಕಾರ್ಯಕ್ರಮಗಳ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರ ಮಾಹಿತಿ ಸಭೆಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಶಸ್ತ್ರಜ್ಞರು ಮತ್ತು ಅಧೀಕ್ಷಕರು ಡಾ|| ಅಂಬಾರಾಯ ರುದ್ರವಾಡಿ ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ|| ವಿವೇಕಾನಂದ ರೆಡ್ಡಿ, ಜಿಲ್ಲಾ ಎನ್ ಬಿಡಿಸಿ ಅಧಿಕಾರಿ ಡಾ|| ಬಸವರಾಜ‌ ಗುಳಗಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಶಿವಶರಣಪ್ಪ ಭೂಸನೂರ. ಜಿಲ್ಲಾ ಶಿಶು ಅಭಿವೃದ್ಧಿ ಅಧಿಕಾರಿ ನವೀನ ಕುಮಾರ, ತಾಲೂಕು ಆರೋಗ್ಯ ಅಧಿಕಾರಿಗಳು ಡಾ.‌ಮಾರುತಿ ಕಾಂಬಳೆ, ಡಾ|| ಸುಶೀಲ ಕುಮಾರ ಅಂಬೂರೆ, ಡಾ|| ರವೀಂದ್ರ ಬಿರಾದಾರ, ಡಾ|| ಸಿದ್ದು ಪಾಟೀಲ್, ಡಾ|| ದೀಪಕ್ ಪಾಟೀಲ್, ಡಾ|| ಮಹಮ್ಮದ್ ಗಾಫರ್, ಡಾ|| ಸಂಜು ಪಾಟೀಲ್. ಡಿ ಕ್ಯೂ ಎಸಿ, ಡಾ|| ವಿನೋದ ಕುಮಾರ,

ಜಿಲ್ಲಾ ಅರ್ ಸಿ ಹೆಚ್ ಓ ವಿಭಾಗದ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ವೀರೇಶ ಜವಳಕರ್, ಜಿಲ್ಲಾ ಕಾರ್ಯಕ್ರಮ ಸಂಯೋಜಕ ರವೀಂದ್ರ ಠಾಕೂರ್, ಜಿಲ್ಲಾ ಮೌಲ್ಯಮಾಪನ ವ್ಯವಸ್ಥಾಪಕ ವಿಶ್ವನಾಥ ಸಣ್ಣೂರ,ಅರ್ ಕೆ‌ ಎಸ್ ಕೆ, ಜಿಲ್ಲಾ ಸಂಯೋಜಕ ಶಿವಕುಮಾರ ಕಾಂಬಳೆ, ಜಿಲ್ಲಾ ಆಶಾ ಮೇಲ್ವಿಚಾರಕಿ ಬಸಮ್ಮ , ರಾಜೇಶ್ವರಿ ಗುಡ್ಡ. ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಇತರೆ ಆರೋಗ್ಯ ಸಿಬ್ಬಂದಿ ವರ್ಗದವರು ಸಭೆಯಲ್ಲಿ ಹಾಜರಿದ್ದರು


Post a Comment

Whatsapp Button works on Mobile Device only