ವಾಡಿ: ಪಟ್ಟಣ ಸಮೀಪದ ಸುಕ್ಷೇತ್ರ ಹಳಕರ್ಟಿ
ಶ್ರೀ ವೀರಭದ್ರೇಶ್ವರ ರಥೋತ್ಸವ ಶನಿವಾರ ಸಂಜೆ ಭಕ್ತ ಸಾಗರದ ನಡುವೆ ವೀರಾವೇಶದಿಂದ ಜರುಗಿತು. ಕಟ್ಟಿಮನಿ ಹಿರೇಮಠದ ಪೂಜ್ಯ ಶ್ರೀ ಮುನೀಂದ್ರ ಸ್ವಾಮೀಜಿ ರಥಕ್ಕೆ ಪೂಜೆ ಸಲ್ಲಿಸಿದ ಬಳಿಕ ಭಕ್ತರತ್ತ ಸಾಗಿತು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತಸಮೂಹ ತೇರಿಗೆ ಉತ್ತತ್ತಿ, ಕಾರಿಕಾಯಿ, ಬಾರೆಕಾಯಿ, ಬಾಳೆ ಹಣ್ಣು ಎಸೆದು ಹರಕೆ ತೀರಿಸಿದರು.
ಜಾತ್ರಾ ಮಹೋತ್ಸವದ ಸಂಪ್ರದಾಯದಂತೆ ಚೌಡಮ್ಮನ ಆಡುವಿಕೆ, ನಂದಿ ಕೋಲು ಕುಣಿತ, ಮೆರವಣಿಗೆ, ಶ್ರೀ ವೀರಭದ್ರೇಶ್ವರ ಮೂರ್ತಿಗೆ ಅಭಿಷೇಕ ನಡೆದವು. ಮೈಲಾರಲಿಂಗ ದೇವಸ್ಥಾನದಲ್ಲಿ ಕಳ್ಳ ಸರಪಳಿ ಹರಿಯುವ ಸಂಪ್ರದಾಯ ಸಾಹಸದ ಸಂಘರ್ಷದಂತಿತ್ತು. ಭಕ್ತರ ಹರಕೆಯ ಅಗ್ನಿ ಪ್ರವೇಶ ಜಾತ್ರಾ ಮಹೋತ್ಸವದ ವಿಶೇಷವಾಗಿತ್ತು.
ಐತಿಹಾಸಿಕ ವೀರಭದ್ರೇಶ್ವರ ದೇವಸ್ಥಾನಕ್ಕೆ ಮಾಡಲಾದ ವಿದ್ಯುತ್ ದೀಪಾಲಂಕಾರ ತಾರಾ ಲೋಕವೇ ಧರೆಗಿಳಿದಂತೆ ಕಂಗೊಳಿಸಿತು. ಮಠದ ಆವರಣದಲ್ಲಿ ಭಕ್ತರಿಗಾಗಿ ದಾಸೋಹ ವ್ಯವಸ್ಥೆ ಕಲ್ಪಿಸಕಾಗಿತ್ತು. ಚಿತ್ತಾಪುರ ಸಿಪಿಐ ಚಂದ್ರಶೇಖರ ತಿಗಡಿ ಹಾಗೂ ಕಾಳಗಿ ಸಿಪಿಐ ಜಗದೇವಪ್ಪ ಪಾಳಾ, ವಾಡಿ ಪಿಎಸ್ಐ ಕುಂಬಾರ ಬಿಗಿ ಕೈಗೊಂಡಿದ್ದರು. ತಿರುಮಲೇಶ ಬಂದೋಬಸ್ತ್
ಅಗ್ನಿ ಪ್ರವೇಶ ವೇಳೆ ಅವಘಡ: ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರಾಮಹೋತ್ಸವ ನಿಮಿತ್ತ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಎದುರು ಶನಿವಾರ ರಾತ್ರಿ ನಡೆದ ಮಹಾ ಅಗ್ನಿ ಪ್ರವೇಶ ವೇಳೆ ಅವಘಡ ಸಂಭವಿಸಿ ಆತಂಕ ಸೃಷ್ಟಿಸಿತು. ಹತ್ತಾರು ಜನ ಮಹಿಳಾ ಭಕ್ತರು ಒಟ್ಟಿಗೆ ಅಗ್ನಿಕುಂಡ ದಾಟಲು ಮುಂದಾದಾಗ ಸೊಲ್ಲಾಪುರ ಮೂಲದ ಮಹಿಳೆಯೊಬ್ಬರು ಕಾಲು ಜಾರಿ ಬೆಂಕಿಗೆ ಬಿದ್ದ ಘಟನೆ ನಡೆದಿದೆ. ನೂರಾರು ಜನ ಭಕ್ತರು ಹಾಗೂ ಪೊಲೀಸರ ಸಮ್ಮುಖದಲ್ಲಿ ಅಗ್ನಿ ಪ್ರವೇಶ ನಡೆದ ಪರಿಣಾಮ ತಕ್ಷಣ ಮಹಿಳೆಯನ್ನು ರಕ್ಷಿಸಿ ಉಪಚರಿಸಲಾಯಿತು. ಮಹಿಳೆ ಆರೋಗ್ಯವಾಗಿದ್ದಾರೆ ಎನ್ನಲಾಗಿದೆ.
Post a Comment