ಯಡ್ರಾಮಿ:ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ನರೇಗಾ ಕಾಮಗಾರಿಯ ಕ್ರಿಯಾ ಯೋಜನೆ ಮಾಡಿಕೊಡಲು 20 ಸಾವಿರ ಲಂಚ ಪಡೆಯುತ್ತಿದ್ದ ಆರೋಪದಡಿ ಯಡ್ರಾಮಿ ತಾಲೂಕು ಪಂಚಾಯಿತಿ ಪ್ರಭಾರ ಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ಮಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಪ್ರಭಾರ ಇಓ ಮಹಾಂತೇಶ್ ಪುರಾಣಿಕ ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಅರವಿಂದ ಸಾಹು ಕುರಳಗೇರಾ ಲಂಚ ಪಡೆದ ಆರೋಪಿಗಳು. ಮಳ್ಳಿ ಗ್ರಾಮದ ನಬಿಲಾಲ್ ಅವರು ನೀಡಿದ ದೂರಿನ ಅನ್ವಯ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ . ನಬಿಲಾಲ್ ಅವರಿಗೆ ನರೇಗಾ ಕಾಮಗಾರಿಯ ಯೋಜನೆ ಮಾಡಿಕೊಡಲು ಸಾಕಷ್ಟು ಬಾರಿ ಅಲೆದಾಡಿಸಿದರು, 40,000 ಲಂಚ ಕೊಟ್ಟರೆ ಮಾಡಿ ಕೊಡಿಸುವುದಾಗಿ ಇ ಓ ಹಾಗೂ ಕಾರ್ಯದರ್ಶಿ ಬೇಡಿಕೆ ಇಟ್ಟಿದ್ದರು. ಮಂಗಳವಾರ ತಾಲೂಕ ಪಂಚಾಯಿತಿ ಕಚೇರಿಯಲ್ಲಿ 20,000 ಲಂಚದ ಹಣ ಪಡೆಯುವ ವೇಳೆ ಮಹಾಂತೇಶ ಹಾಗೂ ಅರವಿಂದ್ ಅವರನ್ನು ರೆಡ್
ಹ್ಯಾಂಡ್ ಆಗಿ ವಶಕ್ಕೆ ಪಡೆಯಲಾಗಿದೆ. ಇಬ್ಬರು ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಲೋಕಾಯುಕ್ತ ಡಿಎಸ್ಪಿ ಮಂಜುನಾಥ್ ಗಂಗಾಲ್, ಇನ್ಸ್ಪೆಕ್ಟರ್ ಧ್ರುವತಾರೆ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ..
Post a Comment