Clickable Image

Tuesday, July 9, 2024

ಮಕ್ಕಳೊಂದಿಗೆ ಕಾಣೆಯಾದ ಮಹಿಳೆ ಧರ್ಮಸ್ಥಳ ಮಂಜುನಾಥನ ಸನ್ನಿಧಿಯಲ್ಲಿ ಸುರಕ್ಷಿತವಾಗಿ ಪತ್ತೆ!

 


ಜುಲೈ 5 ರಂದು ಕಲ್ಬುರ್ಗಿ ನಗರದ ಸಂತೋಷ್ ಕಾಲೋನಿಯ ಸ್ವಾಮಿ ವಿವೇಕಾನಂದ ನಗರದ ನಿವಾಸಿ ಪೂರ್ಣಿಮಾ ಚಾರ್ಮ್ ವಯಸ್ಸು(31) ಎರಡು ಮಕ್ಕಳೊಂದಿಗೆ ಮಧ್ಯಾಹ್ನ 2 ಗಂಟೆ 30 ನಿಮಿಷಕ್ಕೆ ಕಾಣೆಯಾಗಿದ್ದರು. ಕಾಣೆಯಾದ ಮಹಿಳೆ ಮಕ್ಕಳೊಂದಿಗೆ ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಪತ್ತೆಯಾಗಿದ್ದಾಳೆ.

ಕಾಣೆಯಾದ ಮಾಹಿತಿ ಕಲ್ಯಾಣ ಕರ್ನಾಟಕ ಸುದ್ದಿ ವಾಹಿನಿಯ ಪತ್ರಿಕೆಯಲ್ಲಿ ಪ್ರಕಟವಾದ ಹಿನ್ನೆಲೆ ವ್ಯಕ್ತಿ ಒಬ್ಬ ಕುಟುಂಬಸ್ಥರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ, ಮಾಹಿತಿಯ ಬೆನ್ನಟ್ಟಿದ ಕುಟುಂಬಸ್ಥರು ಕೊನೆಗೂ ಮಹಿಳೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳೆ ಧರ್ಮಸ್ಥಳದ ಮಂಜುನಾಥನ ಸನ್ನಿಧಿಯ ಹೋಟೆಲ್ ಒಂದರಲ್ಲಿ ಪತ್ತೆಯಾಗಿದ್ದು ಸುರಕ್ಷಿತವಾಗಿದ್ದಾರೆ ಮತ್ತು ಮಕ್ಕಳೊಂದಿಗೆ ಮನೆಗೆ ಕರೆ ತರಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Post a Comment

Whatsapp Button works on Mobile Device only