ಕಲ್ಬುರ್ಗಿ ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಭಾನುವಾರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಮಿಂಚಿನ ಸಂಚಾರ ನಡೆಸಿ ಅಧಿಕಾರಿಗಳು ಸ್ಥಳೀಯರು ಹಾಗೂ ವಾಹನ ಸವಾರರಿಂದ ಮಾಹಿತಿ ಪಡೆದರು. ಎಡಗಡೆ ಸಂಚಾರ ಮುಕ್ತ ವಾಹನ ನಿಲುಗಡೆ ಆಟೋ ಸ್ಟ್ಯಾಂಡ್ ರಚನೆ ಆಟೋದವರ ನಿಯಂತ್ರಣ ಸೇರಿ ವಿವಿಧ ಮಾಹಿತಿ ಪಡೆದರು. ಇನ್ನು ರೈಲ್ವೆ ನಿಲ್ದಾಣದಲ್ಲಿ ಆಟೋ ಚಾಲಕರೊಂದಿಗೆ ಚರ್ಚಿಸಿ ಸಮಸ್ಯೆ ಆಲಿಸಿ ಸೂಕ್ತ ರೀತಿಯಲ್ಲಿ ವಾಹನ ನಿಲುಗಡೆ ಮಾಡಬೇಕು ಪ್ರಯಾಣಿಕರೊಂದಿಗೆ ಉತ್ತಮವಾಗಿ ವರ್ತಿಸಬೇಕು ಎಂದು ಸೂಚಿಸಿದರು. ಕೆಲವು ದಿನಗಳ ಹಿಂದೆ ಕಲ್ಯಾಣ ಕರ್ನಾಟಕ ಸುದ್ದಿವಾಹಿನಿ ಕಲ್ಬುರ್ಗಿ ನಗರದಲ್ಲಿ ವಾಹನ ದಟ್ಟಣೆ ಕುರಿತು ವಿಶೇಷ ವರದಿ ಬಂದು ಪ್ರಸ್ತುತ ಪಡಿಸಿತು ನಂತರ ನೂತನ ಪೊಲೀಸ್ ಆಯುಕ್ತ ಡಾ.ಶರಣಪ್ಪ ಢಗೆ ಅವರು ವಿಶೇಷ ಕಾಳಜಿ ವಹಿಸಿ ನಗರದ ಸುತ್ತ ತಿರುಗಾಡಿ ಮಾಹಿತಿ ಕಲೆಹಾಕಿ ಪರಿಹಾರ ಕಂಡುಕೊಳ್ಳುವ ವಿಶ್ವಸಾವ್ಯಕ್ತಪಡಿಸಿದರು , ನಂತರ ವೃತ ಜೇವರ್ಗಿ ಕ್ರಾಸ್, ಅರ್ಚೀದ್ ಮಾಲ್ ಲಾಹೌಟ್ ವಿರುದ್ಧ ಜಿಲ್ಲಾ ನ್ಯಾಯಾಲಯ ಸರ್ದಾರ್ ವಲ್ಲಭಾಯಿ ಪಟೇಲ್ ವೃತ್ತ ರೈಲ್ವೆ ಸ್ಟೇಷನ್ ರಸ್ತೆ ಮೋಹನ್ ವೃತ್ತ ಹೈಕೋರ್ಟ್ ಉದನೂರು ವೃತ್ತ, ರಾಮ ಮಂದಿರವೃತ್ತ ಶಾಬಾದ್ ರಸ್ತೆ ಸೇಡ ಮೃತ ಸೇರಿ ಸಂಚಾರ ನಡೆಸಿ ಸ್ಥಳೀಯರಿಂದ ಮಾಹಿತಿ ಪಡೆದರು. ಇನ್ನು ಹಿರಪುರ್ ಕ್ರಾಸ್ ನಿಂದ ಕೇಂದ್ರ ಬಸ್ ನಿಲ್ದಾಣಕ್ಕೆ ಬರುವ ಬಸ್ಸುಗಳನ್ನು ಮುಖ್ಯ ರಸ್ತೆಯಲ್ಲಿರುವ ಕಣ್ಣಿ ಮಾರ್ಕೆಟ್ ನೇರವಾಗಿ ನಿಲ್ದಾಣಕ್ಕೆ ಬರುವಂತೆ ಮಾಡುವ ಸಾಧ್ಯತೆಗಳ ಕುರಿತು ಚರ್ಚಿಸಿದರು. ಸಂಚಾರ ದಟ್ಟಣೆಯ ಗಂಭೀರತೆ ತಿಳಿಯಲು ಇಡೀ ಬಸ್ ನಿಲ್ದಾಣದ ಸುತ್ತು ಹಾಕಿದ ಡಾ: ಶರಣಪ್ಪ ಡಗೆ, ಆಟೋ ಮಾರ್ಗ ಬದಲಾವಣೆಯ ಹೊಸ ನಿಲ್ದಾಣವನ್ನ ವೀಕ್ಷಿಸಿ. ಬೈಪಾಸ್ ಮಾರ್ಗ ಬಿಟ್ಟು ನಗರ ಮಧ್ಯದಿಂದ ಕೇಂದ್ರ ನಿಲ್ದಾಣಕ್ಕೆ ಬಸ್ಸುಗಳು ಬರುವ ಕುರಿತು ಚರ್ಚಿಸಿ ನೀಡಲಾಗುವುದು ನಂತರವೂ ಬಂದರೆ ಚಾಲಕರಿಗೆ ದಂಡ ವಿಧಿಸುವ ಎಚ್ಚರಿಕೆ ನೀಡಿದರು. ಹೈ ಕೋರ್ಟ್ ಆವರಣಕ್ಕೆ ಭೇಟಿ ನೀಡಿ ಭದ್ರತೆ ವಾಹನ ಸಂಚಾರ ಅಪರಾಧ ಪ್ರಕರಣಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು ಡಿಸಿಪಿ ಪ್ರವೀಣ್ ನಾಯಕ್ ಎಸಿಪಿ ಇಸ್ಮಾಯಿಲ್ ಸಂಚಾರ ಎರಡು ಠಾಣೆ ಸಿಪಿಐ ಖಾಜಾ ಹುಸೇನ್ ಅಶೋಕ್ ನಗರ ಠಾಣೆ ಸಿಪಿಐ ಅರುಣ್ ಕುಮಾರ್ ವಿವಿ ಠಾಣೆ ಸುಶೀಲ್ ಕುಮಾರ್ ಉಪಸ್ಥಿತರಿದ್ದರು.
Post a Comment