ಕಲಬುರಗಿ,ಆ.30-ರಿಯ ತಿ ಲ್ ಎಸ್ಟೇಟ್ ಉದ್ಯಮಿಯೊಬ್ಬ ರಿಗೆ ಪಿಸ್ತೂಲ್ ತೋರಿಸಿ ಜೀವ ಬೆದರಿಕೆ ಹಾಕಿ 1 ಲಕ್ಷ ರೂಪಾ ಯಿ ದೋಚಿದ ಆರೋಪದ ಮೇಲೆ ದಲಿತ ಸೇನೆ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ ಸೇರಿ 15-20 ಜನರ ವಿರುದ್ಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಿಯಲ್ ಎಸ್ಟೇಟ್ ಉದ್ಯ ಮಿ ಕರಬಸಪ್ಪ ದೇಶಮುಖ ಎಂಬುವವರು ಸಲ್ಲಿಸಿದ ದೂರಿ ನ ಮೇರೆಗೆ ಸ್ಟೇಷನ್ ಬಜಾರ್ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಗೊಂಡಿ ದ್ದಾರೆ.
ಕರಬಸಪ್ಪ ದೇಶಮುಖ ಅವರಿಗೆ ಕಲಬುರಗಿಯಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸಲು ತುಮಕೂರಿನ ಜ್ಯೋತಿ
ಎಂಬುವವರು 1.20 ಕೋಟಿ ಹಣ ನೀಡಿದ್ದರು. ಇದರಿಂದ ರಿಯಲ್ ಎಸ್ಟೇಟ್ ವ್ಯವಹಾರ ದಲ್ಲಿ ಜ್ಯೋತಿ ಅವರಿಗೆ ಬರಬೇ ಕಿದ್ದ ಲಾಭದ ಹಣವನ್ನು ದೇಶ ಮುಖ ಕೊಟ್ಟಿದ್ದಾರೆ. ತನಗೆ ಕೊಡಬೇಕಾಗಿರುವ ಹಣ ಇನ್ನೂ ಬಾಕಿ ಇದೆ ಎಂದು ಜ್ಯೋತಿ ಅವರು ಬೆಂಗಳೂರಿನ ನ್ಯಾಯಾಲಯದಲ್ಲಿ ದೇಶ ಮುಖ ಮೇಲೆ ಕೇಸು ಹಾಕಿ ದ್ದಾರೆ. ನ್ಯಾಯಾಲಯದ ಆದೇ ಶದಂತೆ ಜ್ಯೋತಿ ಅವರಿಗೆ ಬರಬೇಕಿರುವ ಹಣ ಮರಳಿ ನೀಡುವುದಾಗಿ ದೇಶಮುಖ ಒಪ್ಪಿಕೊಂಡಿದ್ದಾರೆ. ಆದರೆ ಜ್ಯೋತಿ ಅವರು ತುಮಕೂರಿ ನಿಂದ ಕಲಬುರಗಿಗೆ ಆಗಮಿಸಿ ದಲಿತ ಸೇನೆಯ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ ಅವ ರನ್ನು ಭೇಟಿ ಮಾಡಿ ಈ ವಿಷ
ಯವನ್ನು ಅವರಿಗೆ ತಿಳಿಸಿದ್ದಾರೆ. ಈ ವಿಷಯ ಮುಂದೆ ಮಾಡಿ ಕೊಂಡು ಹಣಮಂತ ಯಳ ಸಂಗಿ, ದಲಿತ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ, ಶ್ರೀ ಕಾಂತ ರಡ್ಡಿ, ಅರವಿಂದ ಕಮ ಲಾಪೂರ, ರಾಜು ಲೇಂಗಟಿ, ಸಂತೋಷ ಪಾಳಾ ಸೇರಿದಂತೆ 15-20 ಜನ ಖೂಬಾ ಪ್ಲಾಟ್ ನಲ್ಲಿರುವ ದೇಶಮುಖ ಅವರ ರಿಯಲ್ ಎಸ್ಟೇಟ್ ಕಚೇರಿಗೆ ಹೋಗಿ ಅವರಿಗೆ ಅವಾಜ್ ಹಾಕಿದ್ದಾರೆ. ಈ ವೇಳೆ ಅರ ವಿಂದ ಕಮಲಾಪೂರ ಪಿಸ್ತೂಲ್ ಹೊರತೆಗೆದು ದೇಶಮುಖ ಅವರ ತಲೆಗೆ ಇಟ್ಟು ಶೂಟ್ ಮಾಡುವುದಾಗಿ ಬೆದರಿಕೆ ಹಾಕಿ ದ್ದಾರೆ. ನಂತರ ದೇಶಮುಖ ಅವರನ್ನು ಇನ್ನೋವಾ ಕ್ರಿಸ್ಟಾ ಮತ್ತು ಕಿಯೋ ಕರೆನ್ಸಿ ವಾಹ ನದಲ್ಲಿ ಕೂಡಿ ಹಾಕಿ ಅವರ
ಬಳಿ ಇದ್ದ 1 ಲಕ್ಷ ರೂಪಾ ಯಿಯನ್ನು ಜಬರದಸ್ತಿಯಿಂದ ಕಿತ್ತುಕೊಂಡಿದ್ದಾರೆ. ಆ ನಂತರ ಜ್ಯೋತಿ ತುಮಕೂರ ಅವರಿಗೆ ಕೊಡಬೇಕಾಗಿರುವ ಹಣ ಕೊಡದೇ ಹೋದರೆ ನಾಳೆ ಮತ್ತೆ ಬರುತ್ತೇವೆ ಎಂದು ಹೇಳಿ ಧಮ ಕಿ ಹಾಕಿ ಹೋಗಿದ್ದಾರೆ ಎಂದು ದೇಶಮುಖ ದೂರಿನಲ್ಲಿ ತಿಳಿಸಿ ದ್ದಾರೆ.
ದೇಶಮುಖ ಅವರ ದೂರಿನ ಅನ್ವಯ ಜ್ಯೋತಿ ತುಮಕೂರ, ಹಣಮಂತ ಯಳ ಸಂಗಿ, ಮಂಜುನಾಥ ಭಂಡಾರಿ, ಶ್ರೀಕಾಂತ ರಡ್ಡಿ, ಅರವಿಂದ ಕಮ ಲಾಪೂರ, ರಾಜು ಲೇಂಗಟಿ, ಸಂತೋಷ ಪಾಳಾ ಸೇರಿದಂತೆ 15-20 ಜನರ ವಿರುದ್ಧ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆ ದಿದೆ.
Post a Comment