Clickable Image

Monday, August 26, 2024

ಇಟಗಾ ಗ್ರಾಮದಲ್ಲಿ ಅಣ್ಣನನ್ನೇ ಕೊಲೆ ಮಾಡಿದ ತಮ್ಮ

 ಇಟಗಾ ಗ್ರಾಮದಲ್ಲಿ ಅಣ್ಣನನ್ನೇ ಕೊಲೆ ಮಾಡಿದ ತಮ್ಮ




 ಕಾಮಣ್ಣ                                    ಸುರೇಶ್ 

ಚಿತ್ತಾಪುರ: ತನ್ನ ಹೆಂಡತಿಯೊಡನೆ

ಸಲುಗೆಯಿಂದ ಇದ್ದ ತಮ್ಮನನ್ನು ಬೈದಿದ್ದಕ್ಕೆ ಸಿಟ್ಟಿಗೆದ್ದ ತಮ್ಮ ಅಣ್ಣನನ್ನೇ ಕೊಲೆ ಮಾಡಿದ ಘಟನೆ ತಾಲೂಕಿನ ಇಟಗಾ ಗ್ರಾಮದಲ್ಲಿ ನಡೆದಿದೆ.

ತಮ್ಮ ಸುರೇಶ ದೊಡ್ಡ ಹಣಮಂತ ತನ್ನ ಅಣ್ಣ ಕಾಮಣ್ಣ ದೊಡ್ಡ ಹಣಮಂತ (35) ಅವರನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಜು.5ರಂದು ಇಟಗಾ ಗ್ರಾಮದಲ್ಲಿ ಕಾಮಣ್ಣ ದೊಡ್ಡ ಹಣಮಂತ ಅವರ ಮೃತದೇಹ ಅವರ ಮನೆಯ ಸಂದಿಯಲ್ಲಿ ಬಿದ್ದಿತ್ತು. ಮನೆಯ ಛತ್ತಿನ ಮೇಲಿನಿಂದ ಬಿದ್ದು ಮೃತಪಟ್ಟಿರಬೇಕು ಎಂದು ಅಂತ್ಯಕ್ರಿಯೆ ಮಾಡಲಾಗಿತ್ತು.

ಮಗನ ಸಾವಿನ ಕುರಿತು ಸಂಶಯವಿದೆ ಎಂದು ಮೃತ ಕಾಮಣ್ಣನ ತಾಯಿ ಪಾರ್ವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ಸಂಶಯಾಸ್ಪದ ಸಾವು

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಹೂತಿದ್ದ ಕಾಮಣ್ಣನ ಶವವನ್ನು ತಹಶೀಲ್ದಾ‌ರ್ ನೇತೃತ್ವದಲ್ಲಿ ಹೊರಗೆ ತೆಗೆಸಿ ಮರಣೋತ್ತರ ಶವಪರೀಕ್ಷೆ ಮಾಡಿಸಿದ್ದರು.

ಶವ ಪರೀಕ್ಷೆ ವರದಿ ಬಳಿಕ ಕೊಲೆ ಆಗಿರುವ ಕುರಿತು ಖಚಿತಪಡಿಸಿಕೊಂಡು ಆ.23ರಂದು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು.

ಸೇಡಂ ತಾಲೂಕಿನ ತೊಲಮಾಮಡಿ ಗ್ರಾಮದಲ್ಲಿ ಹೊಲ ಖರೀದಿ ಮಾಡಿದ್ದು, ಮಾರಾಟ ಮಾಡುವುದು ಬೇಡ ಎಂದರೂ ಕೇಳದೆ ಎರಡು ತಿಂಗಳ ಹಿಂದೆ 56 ಲಕ್ಷ ರೂ.ಗೆ ಮಾರಾಟ ಮಾಡಲಾಗಿದೆ. ಹೊಲ ಮಾರಿದ ಸ್ವಲ್ಪ ಹಣವನ್ನು ಕಾಮಣ್ಣ ತಂದೆ-ತಾಯಿ ಹೆಸರಿನಲ್ಲಿ, ಇನ್ನೂ ಸ್ವಲ್ಪ ಹಣವನ್ನು ತನ್ನ ಹೆಸರಿನಲ್ಲಿ ಇಟ್ಟಿದ್ದ. ಆದರೆ ತಮ್ಮ ಸುರೇಶನ ಹೆಸರಿನಲ್ಲಿ ಹಣ ಇಟ್ಟಿರಲಿಲ್ಲ. ಕೇಳಿದರೂ ಕೊಟ್ಟಿರಲಿಲ್ಲ ಎಂದು ತಿಳಿದು ಬಂದಿದೆ.

ಎಸ್ಪಿ ಅಡ್ಡೂರು ಶ್ರೀನಿವಾಸಲು, ಹೆಚ್ಚುವರಿ ಎಸ್ಪಿ ಶ್ರೀನಿಧಿ, ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ಅವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು.

ತನಿಖಾ ತಂಡದ ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್‌ಐಗಳಾದ ಶ್ರೀಶೈಲ್ ಅಂಬಾಟಿ, ಚಂದ್ರಾಮ (ತನಿಖೆ), ಎಎಸ್ಐ ಲಾಲಾಹ್ಮದ್, ಸಿಬ್ಬಂದಿ ನಾಗೇಂದ್ರ, ಬಸವರಾಜ, ಚಂದ್ರಶೇಖರ, ಸವಿಕುಮಾರ, ಅಯ್ಯಣ್ಣ, ಸಿದ್ದರಾಮೇಶ, ಈರೇಶ, ವೀರಭದ್ರ ಇದ್ದರು.

Post a Comment

Whatsapp Button works on Mobile Device only