Clickable Image

Tuesday, September 10, 2024

ಚಿಂಚೋಳಿ ಪುರಸಭಾ ಅಧ್ಯಕ್ಷರಾಗಿ ಆನಂದ ಟೈಗರ್ ಅವಿರೋಧ ಆಯ್ಕೆ*



ಕಳೆದ ಕೆಲವು ತಿಂಗಳುಗಳಿಂದ ನೆನೆಗುದಿಗೆ ಬಿದ್ದಿರುವ ಚಿಂಚೋಳಿ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗಳಿಂದು ಸಕಲ ಪೊಲೀಸ ಬಂದು ಬಸ್ತಗಳ ನಡುವೆ ಶಾಂತಿಯುತವಾಗಿ ನಡೆದವು



ಪರಿಶಿಷ್ಟ ಜಾತಿಗೆ ಮೀಸಲಿದ್ದ ಅಧ್ಯಕ್ಷ ಸ್ಥಾನದ ಖುರ್ಚಿಗೆ ಬಹಳಷ್ಟು ಜನ ಸದಸ್ಯರು ಟಾವಲು ಹಾಕಲು ಪ್ರಯತ್ನಿಸಿದರು ಆದರೆ ಕೊನೆಗಳಿಗೆಯಲ್ಲಿ ಕೈ ಹೈ ಕಮಾಂಡ್ ಸೂಚನೆಯಂತೆ ಅಧ್ಯಕ್ಷ ಗಾದಿ ಹಿಂದಿನ ಸ್ಥಾಯಿ ಸಮಿತಿ ಅಧ್ಯಕ್ಷ ಆನಂದ ಟೈಗರ ಅವರ ಪಾಲಾಯಿತು ಆನಂದ ಟೈಗರ ಅವರು ಒಂದನೇ ಬ್ಲಾಕ್ ನಿಂದ ಗೆಲವು ಸಾಧಿಸಿ ನಂತರ ಕಲಬುರ್ಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರ ನೇತೃತ್ವದಲ್ಲಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೇಸ್ ಸೇರಿದ್ದನ್ನು ಸ್ಮರಿಸಬಹುದು


ಅಧ್ಯಕ್ಷ ಸ್ಥಾನಕ್ಕೆ ಆನಂದ ಟೈಗರ್ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯವಾಗಿರುವುದರಿಂದ ಸುಲ್ತಾನಾ ಬೇಗಂ ಖಲೀಲ ಪಟೇಲ ಅವರು ನಾಮಪತ್ರ ಸಲ್ಲಿಸಿದರು ಕೇವಲ ಇವರಿಬ್ಬರೇ ನಾಮ ಪತ್ರ ಸಲ್ಲಿಸಿರುವುದರಿಂದ ಚುನಾವಣಾಧಿಕಾರಿ ಸುಬ್ಬಣ್ಣಾ ಜಮಖಂಡಿ ಇವರಿಬ್ಬರ ಆಯ್ಕೆಯನ್ನು ಅವಿರೋಧವೆಂದು ಘೋಷಿಸಿದರು


ಚಿಂಚೋಳಿ ಪುರಸಭೆ ಒಟ್ಟು 23 ಜನ ಸದಸ್ಯರನ್ನು ಒಳಗೊಂಡಿದೆ ಸ್ಥಳಿಯ ಶಾಸಕರು ಹಾಗೂ ಸಂಸದರ ಮತಗಳನ್ನು ಸೇರಿ 25 ಜನ ಸದಸ್ಯರಾಗಿದ್ದಾರೆ ಈ ಚುನಾವಣೆಯಲ್ಲಿ ಸಂಸದ ಸಾಗರ ಖಂಡ್ರೆ ಸೇರಿದಂತೆ 19 ಜನ ಸದಸ್ಯರು ಭಾಗವಹಿಸಿದರು ಸ್ಥಳಿಯ ಶಾಸಕರ ಡಾ.ಅವಿನಾಶ ಜಾಧವ ಹಾಗೂ ಬಿಜೆಪಿಯ 3 ಜನ ಹಾಗೂ ಕಾಂಗ್ರೇಸ್ಸಿನ ಇಬ್ಬರು ಸದಸ್ಯರು ಚುನಾವಣೆಯಿಂದ ಅಂತರ ಕಾಯ್ದಿಕೊಂಡಿದ್ದರು


ಚುನಾವಣಾ ಪ್ರಕ್ರಿಯ ಮುಗಿಯುತ್ತಿದ್ದಂತೆ ಅಧ್ಯಕ್ಷ ಆನಂದ ಟೈಗರ್ ಹಾಗೂ ಉಪಾಧ್ಯಕ್ಷೆ ಸುಲ್ತಾನಾ ಬೇಗಂ ಬೆಂಬಲಿಗರು ಪುರಸಭೆಯ ಆವರಣದಲ್ಲಿ ಪರಸ್ಪರ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು ಈ ಚುನಾವಣಾ ಪ್ರಕ್ರಿಯೆಯಲ್ಲಿ ಗ್ರೇಡ್-2 ತಹಸಿಲ್ದಾರ ವೆಂಕಟೇಶ ದುಗ್ಗನ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ ಉಪಸ್ಥಿತರಿದ್ದರು ಚುನಾವಣಾ ಸಂದರ್ಭದಲ್ಲಿ ಯಾವದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಡಿವಾಯ್ಎಸ್ಪಿ ಸಂಗಮನಾಥ ಹಿರೇಮಠ ಖುದ್ದು ಬಂದು ಬಸ್ತವಹಿಸಿದರು ಸಿಪಿಐ ಕಪಿಲದೇವ ಸಬ್ ಇನ್ಸಪೆಕ್ಟರ್ ಗಂಗಮ್ಮ ಸೇರಿದಂತೆ ಪೊಲೀಸ ಸಿಬ್ಬಂದಿಗಳು ಡಿವಾಯ್ಎಸ್ಪಿ ಅವರಿಗೆ ಸಾಥ ಕೊಟ್ಟರು

Post a Comment

Whatsapp Button works on Mobile Device only