Clickable Image

Monday, September 9, 2024

ನತದೃಷ್ಟೆ ಭಾಗ್ಯಶ್ರೀ ಹತ್ಯೆಗೆ ಚಿಂಚೋಳಿಯಲ್ಲಿ ಭಾರಿ ಖಂಡನೆ*

 *ನತದೃಷ್ಟೆ ಭಾಗ್ಯಶ್ರೀ ಹತ್ಯೆಗೆ ಚಿಂಚೋಳಿಯಲ್ಲಿ ಭಾರಿ ಖಂಡನೆ*


ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗುಂಡೂರ ವಾಡಿಯಲ್ಲಿ ಮೊನ್ನೆ ನಡೆದ ಕೋಲಿ ಸಮಾಜದ ಮುಗ್ದ ಯುವತಿ ಭಾವಶ್ರೀ ಪಂಡಿತ ಹತ್ಯೆಯನ್ನು ಖಂಡಿಸಿ ತಾಲೂಕಿನ ಕೋಲಿ ಸಮಾಜದ ವತಿಯಿಂದ ಅಧ್ಯಕ್ಷ ಅನೀಲಕುಮಾರ ಜಮಾದಾರ ಹೂಡದಳ್ಳಿ ನೇತೃತ್ವದಲ್ಲಿ ತಹಸಿಲ್ದಾರರ ಕಾರ್ಯಾಲಯದ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು



ಪ್ರತಿಭಟನಾಕಾರರು ದುರ್ದೈವಿ ಭಾಗ್ಯಶ್ರೀ ಹಾಗೂ ಅವಳ ಕುಟುಂಬಕ್ಕೆ ನ್ಯಾಯಾ ಒದಗಿಸಿ ಕೊಡುವಂತೆ ತಹಸಿಲ್ದಾರ ಸುಬ್ಬಣ್ಣಾ ಜಮಖಂಡಿ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ ಹತ್ಯೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮಕ್ಕಾಗಿ ಒತ್ತಾಯಿಸಿದರು


ಈ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಹೋರಾಟಗಾರರು ನಿರಪರಾಧಿ ಯುವತಿಯನ್ನು ಕಟುಕರು ಕ್ರೂರವಾಗಿ ಕೊಂದುಹಾಕಿ ಮನುಕುಲ ತಲೆ ತಗ್ಗಿಸುವಂತೆ ಮಾಡಿದ್ದಾರೆ ಇದೊಂದು ಹೇಯ ಕೃತ್ಯವಾಗಿದ್ದು ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ ಇಂತಹ ಹೇಯ ಕೃತ್ಯಗಳಿಗೆ ಕಾರಣವಾದ ಕಿಡಿಗೇಡಿಗಳನ್ನು ಮುಲಾಜಿಯಿಲ್ಲದೇ ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು


ಮುಖಂಡರು ಬೆಂಕಿ ಉಗುಳುತ್ತಾ ಮಾತನಾಡಿ ಈ ದೇಶದಲ್ಲಿ ಹಾಗೂ ನಮ್ಮ ರಾಜ್ಯದಲ್ಲಿ ಅಹಿಂದಾ ವರ್ಗಗಳ ಹೆಣ್ಣು ಮಕ್ಕಳನ್ನು ಗುರಿಯಾಗಿಟ್ಟುಕೊಂಡು ಕೆಲ ದುಶ್ಕರ್ಮಿಗಳು ಅತ್ಯಚಾರಗಳನ್ನು ಮಾಡಿ ಕೊಲೆ ಗೈಯುತ್ತಿದ್ದಾರೆ ಅಹಿಂದಾ ವರ್ಗಗಳ ಹೆಸರಿನಲ್ಲಿ ಅಧಿಕಾರಕ್ಕೇರಿದ ರಾಜ್ಯ ಸರಕಾರ ಇಂತಹ ಸಮಾಜ ಘಾತುಕರನ್ನು ಹೆಡೆಮುರಿ ಕಟ್ಟಿ ತಕ್ಕ ಶಿಕ್ಷೆಗೆ ಗುರಿಪಡಿಸಬೇಕೆಂದು ಹೋರಾಟಗಾರರು ಸರಕಾರಕ್ಕೆ ಒತ್ತಾಯಿಸಿದರು


ಮೃತ ದುರ್ದೈವಿಯ ಕುಟುಂಬಕ್ಕೆ ಸರಕಾರ ಸೂಕ್ತ ಭದ್ರತೆ ನೀಡಬೇಕು ಅವಳ ಕುಟುಂಬಕ್ಕೆ 25 ಲಕ್ಷ ರೂ.ಪರಿಹಾರ ನೀಡಬೇಕು ಅವಳ ಕುಟುಂಬದ ಒಬ್ಬ ಸದಸ್ಯನಿಗೆ ಸರಕಾರಿ ನೌಕರಿ ನೀಡಬೇಕು ಹಾಗೂ ಮೃತಳ ಕುಟುಂಬಕ್ಕೆ ಊಳುಮೆ ಮಾಡಲು ಐದು ಏಕರೆ ಭೂಮಿ ನೀಡಬೇಕು ಸೇರಿದಂತೆ ಇತರೆ ಬೇಡಿಕೆಗಳ ಪತ್ರವನ್ನು ಸರಕಾರಕ್ಕೆ ಸಲ್ಲಿಸಿ ಹಕ್ಕೋತ್ತಾಯಿಸಿದರು


ಈ ಸಂದರ್ಭದಲ್ಲಿ ಮುಖಂಡರಾದ ಗೋಪಾಲರಾವ ಕಟ್ಟಿಮನಿ ಶರಣು ಮೋತಕಪಳ್ಳಿ ಕೆ.ಎಮ್ ಬಾರಿ ಮಾರುತಿ ಗಂಜಗೇರಿ ಆರ್.ಗಣಪತರಾವ ಯಮರಾಜ ಪವಾರ ರೇವಣಸಿದ್ಧಪ್ಪಾ ಅಣಕಲ್ ಪಾಂಡುರಂಗ ಬುರುಜಿ ಲಕ್ಷ್ಮಣ ಅಂವುಟಿ ಜಗನ್ನಾಥ ಜಮಾದಾರ ಸೇರಿದಂತೆ ಇತರೆ ಮುಖಂಡರು ಸಮಾಜ ಘಾತುಕರ ವಿರುದ್ಧ ಹರಿಹಾಯ್ದರು


ಈ ಪ್ರತಿಭಟನೆಯಲ್ಲಿ ಮುಖಂಡರಾದ ರಾಜು ಪವಾರ ಗಂಗಾಧರ ಗಡ್ಡಿಮನಿ ಹಣಮಂತ ಪೂಜಾರಿ ಬಸವರಾಜ ಸುಲೇಪೇಟ ಅಭಿಷೇಕ ಮಲ್ಕನೂರ ರವಿ ಪಾಟೀಲ ಕೃಷ್ಣ ದಯಾಳ ವೈಜನಾಥ ದಾದಿ ಗೋಪಾಲ ಗಾರಂಪಳ್ಳಿ ಗುಂಡಪ್ಪಾ ಅವರಾದಿ ಶರಣು ನಾಟಿಕರ್ ನಾರಾಯಣ ನಾಟಿಕರ್ ರಾಮಣ್ಣಾ ಗೋಪನಪಳ್ಳಿ ಅನೀಲ ವಾಲಿಕರ್ ಜಗನ್ನಾಥ ಪೂಜಾರಿ ರಾಜು ತೋಡಿ ಚಂದು ಘಾಲಿ ದತ್ತು ಚಿಂಚೋಳಿ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ ವಿವಿಧ ಕೋಮಿನ ಮುಖಂಡರು ಹಾಜರಿದ್ದರು ಪ್ರತಿಭಟನಾಕಾರರಿಗೆ ಸಿಪಿಐ ಕಪಿಲದೇವ ಮಾರ್ಗದರ್ಶನದಲ್ಲಿ ಚಿಂಚೋಳಿ ಸಬ್ ಇನ್ಸಪೆಕ್ಟರ್ ಗಂಗಮ್ಮ ಹಾಗೂ ಪೊಲೀಸ್ ಸಿಬ್ಬಂದಿಗಳು ಸೂಕ್ತ ಬಂದು ಬಸ್ತವಹಿಸಿರು.



 ವರದಿ: ಶೇಕ್ ಭಕ್ತಿಯಾರ್ ಜಾಗೀರ್ದಾರ್ 

Post a Comment

Whatsapp Button works on Mobile Device only