Clickable Image

Tuesday, September 10, 2024

ಸಂತ್ರಸ್ಥರ ಸಹಾಯಕ್ಕೆ ಧಾವಿಸುವಂತೆ ಅಧಿಕಾರಿಗಳಿಗೆ ಸೂಚನೆ - ಸಾಗರ ಖಂಡ್ರೆ*



ಕಳೆದ ಒಂದು ವಾರದ ಹಿಂದೆ ಸುರಿದ ಧಾರಾಕಾರ ಮಳೆಯಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಅನೇಕರ ಮನೆಗಳು ಬಿದ್ದು ನಷ್ಟಕೊಳಗಾದರೆ ಕೆಲವರ ಜಾನುವಾರುಗಳು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿವೆ ಇದರಿಂದ ಜನ ಸಾಮಾನ್ಯರು ಎಲ್ಲಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ ಕೂಡಲೇ ಅಧಿಕಾರಿಗಳು ಸಂತ್ರಸ್ಥರ ಸಹಾಯಕ್ಕೆ ಧಾವಿಸುವಂತೆ ಸೂಚಿಸಿದ್ದೇನೆಂದು ಸಂಸದ ಸಾಗರ ಈಶ್ವರ ಖಂಡ್ರೆ ತಿಳಿಸಿದರು



ಅವರು ನಗರದಲ್ಲಿ ಡಿಸಿಸಿ ಬ್ಯಾಂಕಿನ ನೂತನ ಶಾಖೆಯನ್ನು ಲೋಕಾರ್ಪಣೆಗೊಳಿಸಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು ತಾಲೂಕಿನಲ್ಲಿ ಅತಿವೃಷ್ಟಿಯಿಂದ ಅನೇಕ ನಷ್ಟಗಳಾಗಿವೆ ಈಗಾಗಲೇ ನಷ್ಟದ ಸರ್ವೆಕಾರ್ಯ ಸುಮಾರು 50% ಮುಗಿದಿದೆ ನಷ್ಟದ ಸಂಪೂರ್ಣ ವರದಿಯನ್ನು ಶೀಘ್ರದಲ್ಲಿ ಸರಕಾರಕ್ಕೆ ಸಲ್ಲಿಸಲು ತಹಸಿಲ್ದಾರರಿಗೆ ಸೂಚಿಸಿದ್ದೇನೆ ಎಂದರು


ಅತಿ ಮಳೆಯಿಂದ ರೈತರ ಹೊಲಗಳಲ್ಲಿ ಮಳೆ ನೀರು ನಿಂತು ಬೆಳೆಗಳು ಹಾಳಾಗಿವೆ ಸರ್ಕಾರ ಒಂದು ಹೆಕ್ಟರಿಗೆ ಎಂಟು ಸಾವಿರ ರೂ.ಗಳನ್ನು ನೀಡುವುದಾಗಿ ಘೋಷಿಸಿದೆ ಆದರೆ ಎಂಟು ಸಾವಿರದಿಂದ ರೈತರ ಹಿತ ಕಾಪಾಡುವುದು ಅಸಾಧ್ಯ ಆದುದರಿಂದ ಹೆಚ್ಚಿನ ಪರಿಹಾರಕ್ಕಾಗಿ ಸರಕಾರದ ಗಮನ ಸೆಳೆಯುವುದಾಗಿ ಖಂಡ್ರೆ ತಿಳಿಸಿದರು


ಈ ಭಾಗದ ಅಭಿವೃದ್ಧಿಗಾಗಿ ಕೆಕೆಆರ್ಡಿಬಿ ಯಿಂದ ಸುಮಾರು 5000 ಸಾವಿರ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ನನ್ನ ಅನುದಾನ ಹಾಗೂ ಈ ಹಣದಿಂದ ಈ ಭಾಗದ ಪ್ರಮುಖ ಸಮಸ್ಯೆಗಳನ್ನು ಹೋಗಲಾಡಿಸಲು ಪ್ರಯತ್ನಿಸಲಾಗುವುದು ಲೋಕಸಭಾ ಕ್ಷೇತ್ರದ ಜನರ ಸಮಸ್ಯೆಗಳನ್ನು ಅರಿಯಲು ಶೀಘ್ರದಲ್ಲಿ ನನ್ನ ಕಾರ್ಯಲಯದಲ್ಲಿ ಹೆಲ್ಪಲೈನ್ ಕೌಂಟರ್ ತೆರೆಯಲಾಗುವುದುಎಂದರು 


ಈ ಭಾಗದ ಅಭಿವೃದ್ಧಿ ದೃಷ್ಟಿಯಿಂದ ನಾನು ಚಿಕ್ಕವನಾಗಿ ಎಲ್ಲರ ಮಾರ್ಗದರ್ಶನ ಪಡೆಯುತ್ತೇನೆ ಚುನಾವಣಾ ಸಂದರ್ಭದಲ್ಲಿ ಮಾತ್ರ ನಾನು ರಾಜಕೀಯ ಮಾಡುತ್ತೇನೆ ಉಳಿದ ಸಮಯದಲ್ಲಿ ಪಕ್ಷತೀತವಾಗಿ ಎಲ್ಲರ ಸಲಹೆ ಪಡೆಯುತ್ತೇನೆ

ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ನನ್ನ ಮಾರ್ಗದರ್ಶಕರು ಅವರನ್ನು ಒಳಗೊಂಡು ಈ ಭಾಗಕ್ಕೆ ಕೇಂದ್ರ ಸರಕಾರದಿಂದ ಹೊಸ ಹೊಸ ಯೋಜನೆಗಳನ್ನು ತರುವುದಾಗಿ ಅವರು ತಿಳಿಸಿದರು


ಈ ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಶರಣಪ್ಪಾ ಮಟ್ಟೂರ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಸುಭಾಶ ರಾಠೋಡ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಸೋಮಶೇಖರ ಗೋನಾಯಕ ಮುಖಂಡ ನಾಗೇಶ್ವರ ಮಾಲಿ ಪಾಟೀಲ ಅಜೀತ ಪಾಟೀಲ ಬಸವರಾಜ ಮಲಿ ಶರಣು ಮೋತಕಪಳ್ಳಿ ಸೇರಿದಂತೆ ಇತರೆ ಮುಖಂಡರು ಉಪಸ್ಥಿತರಿದ್ದರು

Post a Comment

Whatsapp Button works on Mobile Device only