Clickable Image

Tuesday, September 10, 2024

ಅರ್ಥಪೂರ್ಣ ವಿಶ್ವ ಆತ್ಮ ಹತ್ಯೆ ತಡೆಗಟ್ಟುವ ದಿನ ಆಚರಣೆ



 ಜೇವರ್ಗಿ: ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ "ವಿಶ್ವ ಆತ್ಮಹತ್ಯೆ" ತಡೆಗಟ್ಟುವ ದಿನಾಚರಣೆ ಅಂಗವಾಗಿ ಆರೋಗ್ಯ ಇಲಾಖೆ ಡಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೇಬಿಲಿಟಿ ಎ ಪಿ ಡಿ ಸಂಸ್ಥೆ ಕಲಬುರ್ಗಿ ಮತ್ತು ವಿಕಲಚೇತನರ ಕಲ್ಯಾಣ ಇಲಾಖೆ ವಿ ಆರ್ ಡಬ್ಲ್ಯೂ ಹಾಗೂ ಆರೈಕೆದಾರರ ಸಹ ಯೋಗದಲ್ಲಿ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು.




ಈ ಕಾರ್ಯಕ್ರಮದಲ್ಲಿ ಡಾಃ ಶಾಂತನಗೌಡ ಮಾತನಾಡಿ ಸಮುದಾಯದಲ್ಲಿ ಆತ್ಮಹತ್ಯೆ ತಡೆಗಟ್ಟುವುದು ಬಹಳ ಪ್ರಮುಖವಾದದ್ದು ಏಕೆಂದರೆ ಮಾನವನಿಗೆ ಆತ್ಮಹತ್ಯೆ ಇಂದ ಸಮಸ್ಯೆಗಳು ಪರಿಹಾರ ಆಗೋದಿಲ್ಲ, ಈಜಬೇಕು ಇದ್ದು ಜಯಿಸಬೇಕು ಎನ್ನುವಂತೆ ಯಾವುದೇ ಕಷ್ಷ -ಕಾರ್ಪಣ್ಯಗಳು ಬಂದರು ಹೆದರಿಸಿಕೊಂಡು ಬದುಕುವುದೇ ಮನುಷ್ಯನ ಧರ್ಮ ಎಂದರು ವಿಶ್ವ ಆತ್ಮಹತ್ಯೆ ದಿನಾಚರಣೆ ತಡೆಗಟ್ಟುವ ಸಂಬಂಧ ಎಲ್ಲರೂ ಪ್ರತಿಜ್ಞೆ ಮಾಡಬೇಕಾಗಿದೆ ಜೀವನದಲ್ಲಿ ಕಷ್ಟ -ಕಾರ್ಪಣ್ಯಗಳು ಹಾಗೂ ಸಮಸ್ಯೆಗಳನ್ನು ನಿಭಾಯಿಸುವ ಶಕ್ತಿ ಮಾನವನಿಗೆ ಇದೆ ನನ್ನನ್ನು ಮಾನವನನ್ನಾಗಿ ಹುಟ್ಟಿಸಿದ್ದಕ್ಕಾಗಿ ಆ ದೇವರಲ್ಲಿ ಅನಂತ ವಂದನೆಗಳುನ್ನು ಅರ್ಪಿಸುತ್ತೇನೆ. ಸ್ವಾಭಾವಿಕವಾಗಿ ಮರಣವು ಬರುವವರೆಗೂ ಸಮಸ್ಯೆಗಳನ್ನು ನಿಭಾಯಿಸಿ ಉತ್ತಮ ಜೀವನ ನಡೆಸಿ ಸಮಾಜಕ್ಕೆ ಕೊಡಿಗೆ ನೀಡಬೇಕೆಂಬುದೇ ಪ್ರಮುಖವಾಗಿದೆ ಸ್ವಾಭಾವಿಕ ಮರಣ ಬರುವವರೆಗೆ ಆ ದೇವರು ಸೃಷ್ಟಿಸಿದಂತೆ ಜೀವಿಸುವುದು ನನ್ನ ಕರ್ತವ್ಯವಾಗಿದೆ ಸಂವಿಧಾನವು ನನಗೆ ಜೀವಿಸುವ ಹಕ್ಕನ್ನು ಕೊಟ್ಟಿದೆ ಸಮಸ್ಯೆಗಳಿಗೆ ಜವಾಬ್ದಾರಿಗಳಿಗೆ ಹೆದರಿ ಆತ್ಮಹತ್ಯೆ ಯೋಚನೆ ಮಾಡಿಕೊಳ್ಳುವುದು ಅಪರಾಧವೆಂದು ಸಂವಿಧಾನ ತಿಳಿಸುತ್ತದೆ ಆತ್ಮಹತ್ಯೆ ಮಹಾ ಅಪರಾಧವೆಂದು ಎಲ್ಲಾ ಧರ್ಮಗಳು ಬೋಧಿಸುತ್ತವೆ.

ಜೀವನದಲ್ಲಿ ಬರುವ ಯಾವುದೇ ಸಮಸ್ಯೆಗಳಿಗೆ ಪಲಾಯನ ಹೇಳದೆ ಸಮಾಜಕ್ಕೆ ಕೊಡಿಗೆ ನೀಡುತ್ತಾ ಜೀವಿಸುತ್ತೇನೆ ಹಾಗೂ ಯಾವುದೇ ಸಂದಿಗ್ಧ ಪರಿಸ್ಥಿತಿ ಬಂದರೂ ಸಹ ನಾನು ಆತ್ಮಹತ್ಯೆ ಪ್ರಯತ್ನ ಮಾಡುವುದಿಲ್ಲ ವೆಂದು ಈ ಸಮುದಾಯದಲ್ಲಿ ಪ್ರತಿಜ್ಞೆ ಮಾಡುತ್ತೇನೆ.

 ಆಕಸ್ಮಿಕವಾಗಿ ಆತ್ಮಹತ್ಯೆ ಯೋಚನೆ ಬಂದಲ್ಲಿ ಅದರಿಂದ ಪಾರಾಗಲು ಸಹಾಯವನ್ನು ಮಾನಸಿಕ ಆರೋಗ್ಯ ಸಲಹೆಗಾರರನ್ನು ಮತ್ತು ಕುಟುಂಬದವರಿಂದ ಇಲ್ಲವೆ ಹಿರಿಯರಿಂದ ಸಲಹೆ ಪಡೆಯುತ್ತೇನೆ ಒಂದು ವೇಳೆ ಯಾರಾದರೂ ಆತ್ಮಹತ್ಯೆ ಮಾಡಿಕೊಳ್ಳುವರು ಬಂದರೆ ಅವರನ್ನು ಸಹ ತಡೆಯುತ್ತೇನೆ ಆತ್ಮಹತ್ಯೆ ತಡೆಯಲು ನಾನು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇನೆ ಮತ್ತು ಆತ್ಮಹತ್ಯೆಗಳನ್ನು ಮಾಡಿಕೊಳ್ಳುವುದಿಲ್ಲವೆಂದು ಪ್ರತಿಜ್ಞೆ ಮಾಡುತ್ತೇನೆ ಎಂದು ಈ ಸಮಯದಲ್ಲಿ ಭಾಗವಹಿಸಿದ ಎಲ್ಲಾ ಭಾಗಾರ್ಥಗಳು ಹಾಗೂ ವೇದಿಕೆ ಮೇಲಿರುವಂತಹ ಎಲ್ಲಾ ಗಣ್ಯರು ಮತ್ತು ಕಾರ್ಯಕ್ರಮದಲ್ಲಿ ಭಾಗಿಯಾಗಿರುವವರೆಲ್ಲರೂ ಎದ್ದು ನಿಂತು ತಮ್ಮ ಬಲಗೈಯನ್ನು ಮುಂದೆ ಚಾಚಿ ಪ್ರತಿಯೊಬ್ಬರೂ ಪ್ರತಿಜ್ಞೆಯನ್ನು ಮಾಡೋಣ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಡಿ ಅಸೋಸಿಯೇಷನ್ ಆಫ್ ಪೀಪಲ್ ವಿಥ್ ಡಿಸೇಬಿಲಿಟಿ ಎಪಿಡಿ ಸಂಸ್ಥೆ ಕಲಬುರಗಿ,ವಿಕಲಚೇತನರ ಕಲ್ಯಾಣ ಇಲಾಖೆಯ ವ್ಹಿ ಆರ್ ಡಬ್ಲ್ಯೂ,ಆರೈಕೆದಾರರು ಹಾಗು ಇತರರಿದ್ದರು.


ವರದಿ: ಚಂದ್ರಶೇಖರ ಪಾಟೀಲ್(ಜೇವರ್ಗಿ)

Post a Comment

Whatsapp Button works on Mobile Device only