ದಲಿತ ಸೇನೆಯ ಮುಖಂಡರು ಯುವತಿಯರಿಗೆ ಕೆಲಸ, ನ್ಯಾಯ ಕೊಡಿಸುತ್ತೇನೆ ಎಂದು ಅತ್ಮೀಯತೆ ಬೆಳೆಸಿಕೊಂಡು ಅತ್ಯಾಚಾರ ಎಸಗುವುದರ ಜತೆಗೆ, ಯುವತಿಯರನ್ನಿಟ್ಟುಕೊಂಡು ಶ್ರೀಮಂತರು, ಅಧಿಕಾರಿಗಳನ್ನು ಬ್ಲಾಕ್ ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಭೀಮ ಅರ್ಮಿ ಭಾರತ ಏಕತಾ ಮಿಷನ್ ಅಧ್ಯಕ್ಷ ಎಸ್.ಎಸ್.
ತಾವಡೆ ಆರೋಪಿಸಿದರು.
ದಲಿತ ಸೇನೆಯ ಕೆಲವು ಕ್ರಿಮಿನಲ್ ಕಾರ್ಯಕರ್ತರು ಹೆಣ್ಣು ಮಕ್ಕಳನ್ನು ಬಳಸಿ ಹನಿಟ್ರ್ಯಾಪ್ ಮಾಡಿಸಿ, ಪೊಲೀಸ್ ಪೇದೆ, ವ್ಯಾಪಾರಿ ಬಳಿ ಹಣ ವಸೂಲಿ ಮಾಡಿದ್ದಾರೆ. ಯುವತಿಯರ ಮೇಲೆ ಅತ್ಯಾಚಾರ ಮಾಡಿ ಅವಾಚ್ಯವಾಗಿ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಅತ್ಯಾಚಾರದ ವಿಡಿಯೋ ಬಹಿರಂಗ ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ಎಸ್.ಎಸ್.ತಾವಡೆ ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಮಹಾರಾಷ್ಟ್ರದ ಸಂತ್ರಸ್ತೆ ಮಾತನಾಡಿ, ಮುಂಬೈನ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ನನ್ನನ್ನು ಉದ್ಯೋಗ ಕೊಡಿಸುತ್ತೇನೆ ಎಂದು ಪ್ರಭುಲಿಂಗ ಹಿರೇಮಠ ಕಲಬುರಗಿಗೆ ಕರೆಸಿ, ವಿಭಾಗೀಯ ಅಧ್ಯಕ್ಷ ರಾಜು ಲೇಂಗಟಿಯನ್ನು ಪರಿಚಯಿಸಿದ್ದಾನೆ. ಯಳಸಂಗಿ ಹೇಳಿದ ಹಾಗೆ ಕೇಳಬೇಕೆಂದು, ಇಲ್ಲದಿದ್ರೆ ಖಲಾಸ್ ಎಂದು ಜೀವ ಬೆದರಿಕೆ ಹಾಕಿದ್ದಾರೆ
ಪೊಲೀಸರು ಕಾಲಿಗೆ ಬೀಳ್ತಾರೆ.
ದಲಿತ ಸೇನೆಯ ರಾಜು ಲೇಂಗಟಿ ಎಂಬಾತ ನಮ್ಮ ಬಾಸ್ ಹಣಮಂತ ಯಳಸಂಗಿ ಇದ್ದು, ಎಂಎಲ್ಎ, ಎಂಪಿ, ಪೊಲೀಸರು ಕಾಲಿಗೆ ಬೀಳುತ್ತಾರೆ. ನೀನಗೇನು ಆಗಲ್ಲ ಬಾ ಎಂದು ಕರೆಸಿ, ಲಾಡ್ಜ್ ನಲ್ಲಿ ಕೂಡಿ ಹಾಕಿ ಅತ್ಯಾಚಾರ ಮಾಡಿದ್ದಾರೆ. ನಿನಗೂ ಗಂಡ ಇಲ್ಲ, ವಯಸ್ಸಿನಲ್ಲಿ ಚಿಕ್ಕವಳಿದ್ದಿ ಸಹಕರಿಸು ಎಂದು ಯಳಸಂಗಿ ಹೇಳಿದ್ದು ಸ್ಟೇಷನ್ ಬಜಾರ್ ಪೊಲೀಸರು ದೂರು ಪಡೆಯಲಿಲ್ಲ ಎಂದು ಸಂತ್ರಸ್ತೆ ದೂರಿದರು.
ಎಂದು ಆರೋಪಿಸಿದರು.
ವ್ಯಾಪಾರಿ ಜತೆ ಲೈಂಗಿಕ ಸಂಪರ್ಕಕ್ಕೆ ಬೆದರಿಸಿ ಒತ್ತಾಯಿಸಿದ್ದು, ಆತನ ಜತೆಗಿದ್ದಾಗ ಫೋಟೋ, ವಿಡಿಯೋ ಸೆರೆ ಹಿಡಿದ್ದಾರೆ. ಬ್ಲಾಕ್ ಮೇಲ್ ಮಾಡಿ 35 ಲಕ್ಷ ರೂ. ವಸೂಲಿ ಮಾಡಿದ್ದಾರೆ. ಇದಲ್ಲದೆ ರಾಜು ಲೇಂಗಟ ಲಾಡ್ಜ್ನಲ್ಲಿ ನಿರಂತರವಾಗಿ ಅತ್ಯಾಚಾರ ಮಾಡಿದ್ದಾನೆ. ಅದ್ದರಿಂದ ಹಣಮಂತ ಯಳಸಂಗಿ, ಸಹಚರರಾದ ರಾಜು ಲೇಂಗಟಿ, ಮಂಜುನಾಥ ಭಂಡಾರಿ, ಉದಯಕುಮಾರ ಖಣಗೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಕಮಿಷನರ್ಗೆ ದೂರು ನೀಡಿದ್ದೇನೆ ಎಂದು ತಿಳಿಸಿದರು.
ಇನ್ನೋರ್ವ ಸಂತ್ರಸ್ತೆ ಮಾತನಾಡಿ, ನ್ಯಾಯ ಕೊಡಿಸಿ ಎಂದಾಗ ಅತ್ಯಾಚಾರಿ ಪರ ನಿಂತು ಗರ್ಭಿಣಿಯಾಗಿದ್ದರೂ ಅಬಾರ್ಷನ್ ಮಾಡಿಸಿದ್ದರು. ದಲಿತ ಸೇನೆ ಪದಾಧಿಕಾರಿಗಳು ಕೂಡಿ ನನ್ನ ಮೇಲೆ ಹಲ್ಲೆ ಮಾಡಿ, ಬೆದರಿಸಿ ಸಹಕರಿಸಲು ಒತ್ತಡ ಹೇರಿದ್ದಾರೆ. ಎಫ್ಐಆರ್ ಆದರೂ ಇದುವರೆಗೆ ಬಂಧನ ಆಗಿಲ್ಲ ಎಂದು ಕಿಡಿಕಾರಿದರು.
ಪೇದೆಗೆ ಟ್ರ್ಯಾಪ್ ಮಾಡಿ ಮೋಸ
ಪತಿಯ ಕಿರುಕುಳದಿಂದ ಬೇಸತ್ತು ಪತಿಯಿಂದ ಜೀವನಾಂಶಕ್ಕಾಗಿ ಕಮಲಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆ. ಆದರೆ ಅಲ್ಲಿನ ಪೇದೆ ಬಸವರಾಜ ಎಂಬಾತ ಬೆದರಿಕೆ ಒಡ್ಡಿ, ಪ್ರಕರಣ ದಾರಿ ತಪ್ಪಿಸಿದ್ದ. ಈ ವೇಳೆ ಪರಿಚಯವಾದ ರಾಜು ಲೇಂಗಟಿ ನ್ಯಾಯ ಕೊಡಿಸುತ್ತೇನೆ ಬಾ ಎಂದು ಹೇಳಿ ಮೋಸ ಮಾಡಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದಳು. ಹಣಮಂತ ಯಳಸಂಗಿ, ಶ್ರೀಕಾಂತ ರೆಡ್ಡಿ, ಪ್ರಭುಲಿಂಗ ಹಿರೇಮಠ, ಚನ್ನು (ಚಾಂದ್ ಪಾಷಾ) ಕೋರ್ಟ್ಗೆ ಕರೆಸಿದ್ದರು. ಈ ಮಧ್ಯೆ ಬ್ಲಾಕ್ಮೇಲ್ ಮಾಡಿದ್ದ ಪೇದೆ ಬಸವರಾಜನನ್ನು ಹನಿಟ್ನಾಪ್ ಮಾಡು ಎಂದು ಬೆದರಿಕೆ ಒಡ್ಡಿದ್ದರಿಂದ ಆತನ ಜತೆ ಇರುವ ಫೋಟೋ, ವಿಡಿಯೋ ಸೆರೆಹಿಡಿದಿದ್ದಾರೆ. ಆತನಿಂದ 7 ಲಕ್ಷ ರೂ. ವಸೂಲಿ ಮಾಡಿದ್ದಾರೆ. ನನಗೆ ನಿರಂತರ ಲೈಂಗಿಕ ಕಿರುಕುಳ ನೀಡಿದ್ದಾರೆ. ಹೀಗಾಗಿ ಪೊಲೀಸ್ ಕಮಿಷನರ್ಗೆ ದೂರು ನೀಡಿರುವುದಾಗಿ ತಿಳಿಸಿದರು.
ಮುಖಂಡ ರಾಜು ಲೇಂಗಟಿ ಬಂಧನ
ಕಲಬುರಗಿ: ಯುವತಿಯರನ್ನು ಬಳಸಿ ಉದ್ಯಮಿಗಳು, ಅಧಿಕಾರಿಗಳಿಗೆ ಬ್ಲಾಕ್
ಮೆಲ್ ಹಾಗೂ ಯುವತಿಯರ ಮೇಲೆ ಅತ್ಯಾಚಾರ ಆರೋಪದಲ್ಲಿ ದಲಿತ ಸೇನೆ ಮುಖಂಡ ರಾಜು ಲೇಂಗಟಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ದಲಿತ ಸೇನೆ ಮುಖಂಡರ ವಿರುದ್ಧ ಮಹಾರಾಷ್ಟ್ರ ಹಾಗೂ ಸ್ಥಳೀಯ ಯುವತಿಯರು ಅತ್ಯಾಚಾರ. ಮತ್ತು ಬ್ಲಾಕ್ಮೇಲ್ ಆರೋಪ ಮಾಡಿದ್ದರು. ಸಂತ್ರಸ್ತೆಯರ ದೂರಿನ ಬಳಕ ಅಲರ್ಟ್ ಆಗಿರುವ ಪೊಲೀಸರು, ಗುರುವಾರ ತಡರಾತ್ರಿ ವಿವಿಧ ಕಲಂಗಳಡಿ ಸ್ಟೇಷನ್ ಬಜಾರ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕಮಿಷನರ್ ಭೇಟಿ: ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಡಗೆ ಅವರು ಸಂತ್ರಸ್ತ
Post a Comment