Clickable Image

Monday, October 14, 2024

ರಿಪೋರ್ಟ್ ನೋಡದೆ ಹೆರಿಗೆ ಮಾಡಿಸಿದ ವೈದ್ಯೆಯಿಂದ 10 ಲಕ್ಷ ಬಿಲ್, ಅಧಿಕ ರಕ್ತಸ್ರಾವದಿಂದ ಬಾಣಂತಿ ಸಾವು

 .ರಿಪೋರ್ಟ್ ನೋಡದೆ ಹೆರಿಗೆ ಮಾಡಿಸಿದ ವೈದ್ಯೆಯಿಂದ 10 ಲಕ್ಷ ಬಿಲ್, ಅಧಿಕ ರಕ್ತಸ್ರಾವದಿಂದ ಬಾಣಂತಿ ಸಾವು.



ಯಾದಗಿರಿ : ಹಣದ ಆಸೆಗಾಗಿ ಸರ್ಕಾರಿ ವೈದ್ಯೇಯೊಬ್ಬರು ಬಾಣಂತಿಯ ಜೀವ ಪಡೆದ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ,ಯಾದಗಿರಿ ಜಿಲ್ಲೆಯ ಶಾಹಾಪೂರ ತಾಲೂಕಿನ ದೊರನ ಹಳ್ಳಿಯ ಬಾಣಂತಿ ಭವಾನಿ ಅತಿಯಾದ ರಕ್ತ ಸ್ರಾವದಿಂದ ಮೃತ ಪಟ್ಟಿರುವ ದುರ್ದೈವಿ, ತಪಾಸಣೆಗೆ ಎಂದು ಶಹಾಪುರ ತಾಲೂಕು ಸರ್ಕಾರಿ ಆಸ್ಪತ್ರೆಗೆ ಬಂದ ಭಾವನಿಗೆ ಹೆರಿಗೆ ನೋವು ಕಾಣಿಸುವದಕ್ಕಿಂತ ಮುಂಚಿತವಾಗಿ ರಕ್ತ ಪರೀಕ್ಷೆ ಮಾಡಿಸಿದ್ದರು, ಆದ್ರೆ ರಕ್ತ ಪರೀಕ್ಷೆಯ ರಿಪೋರ್ಟ್ ಬರುವದಕ್ಕಿಂತ ಮುಂಚಿತವಾಗಿ ಭಾವನಿಗೆ ಹೆರಿಗೆ ಮಾಡಿ ವೈದ್ಯೆ ಸರೋಜ ಯಡವಟ್ಟು ಮಾಡಿದ್ದಾರೆ, ಬಾಣಂತಿ ಭಾವನಿಗೆ ಕಾಮಾಲೆ ಇದ್ದು ಅಧಿಕ ರಕ್ತ ಸ್ರಾವ ಉಂಟಾಗಿದೆ, ತಕ್ಷಣವೆ ಕಲಬುರಗಿ ಖಾಸಗಿ ಆಸ್ಪತ್ರೆಗೆ ಧಾಖಲಿಸುವಂತೆ ಸರ್ಕಾರಿ ವೈದ್ಯೆ ಸರೋಜ ಸೂಚಿಸಿದ್ದರು, ಅಲ್ಲದೆ ಸ್ವತಃ ಕುದ್ದು ಖಾಸಗಿ ಆಸ್ಪತ್ರೆಗೆ ಬಂದು ಬಾಣಂತಿಯನ್ನು ಸರೋಜ ಧಾಖಲಿಸಿದರು. ಆದ್ರೆ ಖಾಸಗಿ ಆಸ್ಪತ್ರೆಯ ವೈದ್ಯರು ಮತ್ತೊಮ್ಮೆ ಆಪರೇಷನ್ ಮಾಡಬೇಕು ಎಂದರು ಅದ್ಯಾಗೂ ಆಪರೇಷನ್ ಮಾಡುವವರೆಗೂ ಅಲ್ಲೆಯೇ ಠಿಕಾಣಿ ಹುಡಿದ್ದ ವೈದ್ಯೆ ಸರೋಜ ಮತ್ತು ಖಾಸಗಿ ಆಸ್ಪತ್ರೆಯ ವೈದ್ಯರು ಬರೋಬ್ಬರಿ 10 ಲಕ್ಷ ಬಿಲ್ ಮಾಡಿದರು, ಇದರಿಂದ ಕಂಗಲಾದ ಬಾಣಂತಿ ಕುಟುಂಬ 10 ಲಕ್ಷ ಬಿಲ್ ಅನಿವಾರ್ಯವಾಗಿ ಪಾವತಿಸಿದರು ಎನ್ನಲಾಗಿದೆ. ಅಷ್ಟೇ ಅಲ್ಲದೆ 10 ಲಕ್ಷ ಪಾವತಿಸಿದರು ಕೂಡ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬಂದಿಲ್ಲ ಹಾಗಾಗಿ ತಕ್ಷಣವೇ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ಚಿಕಿತ್ಸೆಗೆ ಸೂಚಿಸಲಾಗಿದೆ ಆದ್ರೆ ಅಲ್ಲಿಯೂ ಕೂಡ ಚಿಕಿತ್ಸೆ ಫಲಿಸದೇ ಬಾಣಂತಿ ಸಾವನ್ನೊಪ್ಪಿದ್ದು ಇಡೀ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಸಧ್ಯ ಭವಾನಿ ಸಾವಿಗೆ ನ್ಯಾಯ ನೀಡುವಂತೆ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು ಶಹಾಪುರ ಸರ್ಕಾರಿ ಆಸ್ಪತ್ರೆ ವೈದ್ಯೆ ಸರೋಜ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಅವರನ್ನು ಇಡೀ ಸೇವೆಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು ಮತ್ತು, ಖಾಸಗಿ ಆಸ್ಪತ್ರೆಯ ವೈದ್ಯರ ವಿರುದ್ದವಿ ಕಿಡಿ ಕಾರಿದ ಕುಟುಂಬ ಆಸ್ಪತ್ರೆಯ ಬಿಲ್ 10 ಲಕ್ಷ ಪವತಿಸಬೇಕೆಂದು ಬಿಗಿ ಪಟ್ಟು ಹಿಡಿದ್ದಿದ್ದಾರೆ ಎನ್ನಲಾಗಿದೆ.


Post a Comment

Whatsapp Button works on Mobile Device only