*ಗಂಡ ಹೆಂಡತಿಯ ಜಗಳ ಮಕ್ಕಳಿಗೆ ವಿಷಯುಣಿಸಿ ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ ಮಹಿಳೆ*
ಕ್ಷುಲ್ಲಕ ಕಾರಣದಿಂದ ಗಂಡ ಹೆಂಡತಿ ಜಗಳವಾಡಿ ಮೂರು ಮಕ್ಕಳು ಸೇರಿದಂತೆ ತಾನು ವಿಷ ಸೇವಿಸಿ ಆತ್ಮ ಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ ಘಟನೆ ಚಿಂಚೋಳಿ ಠಾಣಾ ವ್ಯಾಪ್ತಿಯ ಜಂಗ್ಲಿಪೀರ್ ತಾಂಡಾದಲ್ಲಿ ರವಿವಾರ ರಾತ್ರಿ 8=00 ಗಂಟೆಗೆ ನಡೆದಿದೆ
ತಾಲೂಕಿನ ಸಾಲೆ ಬೀರನಳ್ಳಿ ಪಂಚಾಯತ ವ್ಯಾಪ್ತಿಯ ಜಂಗ್ಲಿಪೀರ ತಾಂಡದ ನಿವಾಸಿ ಗೀತಾಬಾಯಿ ಸಂತೋಷ ಚೌಹಾಣ(30) ಈತಳು ತನ್ನ ಗಂಡ ಸಂತೋಷ ಚೌಹಾಣ ಎಂಬುವವನ ಜೊತೆ ವಿನಾಃ ಕಾರಣ ಜಗಳವಾಡಿ ತನ್ನ ಗಂಡನನ್ನು ಹೆದರಿಸಲು ಹೋಗಿ ತಾನು ಸೇರಿದಂತೆ ತನ್ನ ಹಸು ಗೂಸುಗಳಾದ ಚೈತನ್ಯ (4) ಧನುಶ್ (3) ಹಾಗೂ ಲಕ್ಷ್ಮಿ 2 ತಿಂಗಳಿನ ಕೂಸಿಗೆ ವಿಷ ಹಾಕಿ ಸಾವಿನ ದವಡೆಗೆ ತಳ್ಳಲು ಪ್ರಯತ್ನಿಸಿದ್ದಾಳೆ
ವಿಷಯ ತಿಳಿಯುತ್ತಿದ್ದಂತೆ ಸಂತೋಷ ಚೌಹಾಣ ಹಾಗೂ ಆತನ ಸಂಬಂಧಿಕರು ವಿಷ ಸೇವಿಸಿದವರನ್ನು ಟಂ ಟಂ ಮೂಲಕ ಚಿಂಚೋಳಿ ಸರಕಾರಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿದರು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಸಂತೋಷ ಪಾಟೀಲ ಹಾಗೂ ಸ್ತ್ರೀ ತಜ್ಞೆ ಡಾ.ಅಶ್ವಿನಿ ಪಾಟೀಲ ನೇತೃತ್ವದ ವೈದ್ಯರ ತಂಡ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರ್ಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕಳುಹಿಸಿದರು
ಸುದ್ದಿ ತಿಳಿದ ತಕ್ಷಣ ಸಿಪಿಐ ಕಪಿಲದೇವ ಸೂಚನೆ ಮೇರೆಗೆ ಪಿಎಸ್ಐ ಗಂಗಮ್ಮ ಆಸ್ಪತ್ರೆಗೆ ಧಾವಿಸಿ ಘಟನೆಯ ವಿವರ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂದಿದ್ದಾರೆ
ವಿಷ ಸೇವಿಸಿದ ಹೆಂಡತಿಯ ಗಂಡ ಸಂತೋಷ ಚೌಹಾಣ ನಮ್ಮ ಸುದ್ದಿ ವಾಹಿನಿಯ ಜೊತೆ ಮಾತನಾಡಿ ನನ್ನ ಹೆಂಡತಿ ನನ್ನ ಮಗ್ಧ ಮಕ್ಕಳಿಗೆ ವಿನಾಕಾರಣ ಹೊಡೆಬಡಿ ಮಾಡುತ್ತಿದ್ದಳು ಏಕೆ ಹೊಡೆಯುತ್ತಿದ್ದಿ ಎಂದು ಕೇಳಿದ್ದಕ್ಕೆ ತಾನು ಸೇರಿದಂತೆ ನನ್ನ ಮೂರು ಜನ ಮಕ್ಕಳಿಗೆ ವಿಷ ಹಾಕಿ ಸಾವಿನ ದವಡೆಗೆ ತಳ್ಳಿದ್ದಾಳೆ ಎಂದು ಬೇಸರ ವ್ಯಕ್ತಪಡಿಸಿದನು
*ವರದಿ..... ಶೇಖ್ ಬಖ್ತಿಯಾರ ಜಾಗೀರದಾರ ಕಲ್ಯಾಣ ಕರ್ನಾಟಕ ನ್ಯೂಜ್ ಚಿಂಚೋಳಿ*
Post a Comment