*ಚಿಂಚೋಳಿ:ದಾವುಲ್ ಮಲೀಕ ದರ್ಗಾದ ಆಸ್ತಿ ವಖ್ಛಗೆ ಸಂಬಂಧಿಸಿದಲ್ಲ - ಸಂಗಪ್ಪಾ ಪಾಲಾಮೂರ*
ಚಿಂಚೋಳಿ ನಗರದ ಮಧ್ಯಭಾಗದಲ್ಲಿರುವ ಮಹಾಂತೇಶ್ವರ ಮಠದ ಪಕ್ಕದಲ್ಲಿರುವ ದಾವುಲ್ ಮಲಿಕ ದರ್ಗಾದ ಆಸ್ತಿ ವಖ್ಛಗೆ ಸೇರಿದಲ್ಲ ಅದು ಕೂಡ ಮಹಾಂತೇಶ್ವರ ಮಠದ ಆಸ್ತಿಯ ಒಂದು ಭಾಗವಾಗಿದೆ ಎಂದು ಶ್ರೀಮಠದ ಅಧ್ಯಕ್ಷ ಸಂಗಪ್ಪಾ ಪಾಲಾಮೂರ ತಿಳಿಸಿದರು
ಅವರು ಪುರಸಭೆಯ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸುತ್ತಾ ಮಾತನಾಡಿ ಮಹಾಂತೇಶ್ವರ ಮಠಕ್ಕೆ ಹೊಂದಿಕೊಂಡಿರುವ ದಾವುಲ ಮಲಿಕ ಆಶ್ರುಖಾನಾ ಆಸ್ತಿ ಸಂಖ್ಯೆ 3-2-209 ಇದು ವಖ್ಛ ಸಂಸ್ಥೆಗೆ ಸೇರಿದಲ್ಲ ಅದು ಮಠಕ್ಕೆ ಸೇರಿದ್ದು ವಿನಾಃಕಾರಣ ಈ ಆಶ್ರು ಖಾನಕ್ಕೆ ವಖ್ಛ ಆಸ್ತಿ ಎಂದು ನಮೂದು ಮಾಡಿದರೆ ಮಠದ ಭಕ್ತರು ಸುಮ್ಮನಿರುವುದಿಲ್ಲವೆಂದು ಅವರು ಎಚ್ಚರಿಕೆ ನೀಡಿದರು
ಈ ಸಂದರ್ಭದಲ್ಲಿ ಶ್ರೀಮಠದ ಭಕ್ತಾದಿಗಳಾದ ಗೌತಮ ಪಾಟೀಲ ಶಾಂತವೀರ ಸುಂಕದ ಸಂತೋಷ ಗಡಂತಿ ನಾಗರಾಜ ಮಲಕೂಡ ವಸಂತ ಇಟಗಿ ದತ್ತು ಕಳಸ್ಕರ ಶರಣು ಮೋತಕಪಳ್ಳಿ ಶಂಭುಲಿಂಗ ಶಿವಪುರಿ ವೀರೇಶ ಯಂಪಳ್ಳಿ ಶ್ರೀಹರಿ ಕಾಟಾಪೂರ ಮಹಾಂತೇಶ ಮಜ್ಜಗಿ ಸಚ್ಚಿದಾನಂದ ಸುಂಕದ ನೀಲಕಂಠ ಸೀಳಿನ್ ಶಂಕರ ಹೋಟಲ್ ದೇವೇಂದ್ರ ಜೋಗದ ಕಿರಣ ಪಂಚಾಳ ಕರ್ಣಕುಮಾರ ಶಿವಪುರಿ ಚಂದ್ರಶೇಖರ ಸುಂಕದ ಗೋಪಾಲ ರೆಡ್ಡಿ ಕೊಳ್ಳೂರ ಸಂತೋಷ ಸುಂಕದ ಶಿವುಕುಮಾರ ಕುದರಿ ಶಂಕರಗೌಡ ಅಲ್ಲಾಪೂರ ಸೇರಿದಂತೆ ಇತರೆ ಭಕ್ತರು ಹಾಜರಿದ್ದರು
Post a Comment