ಕಲಬುರಗಿ :
ಕಾಂಗ್ರೆಸ್ ಮಾಜಿ ಸಚಿವರನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಬೀಳಿಸಿ, 20 ಲಕ್ಷ ರೂ. ಸುಲಿಗೆಗೆ ಯತ್ನಿಸಿದ್ದ ಅವರದ್ದೇ ಪಕ್ಷದ ಕಾರ್ಯಕರ್ತೆ, ನಲಪಾಡ್ ಬ್ರಿಗೇಡ್ ಕಲಬುರಗಿ ಜಿಲ್ಲಾಧ್ಯಕ್ಷೆ ಮತ್ತು ಪತಿಯನ್ನು ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಹಣ ಮಾಡಲು ಹೊರಟ ದಂಪತಿ ಕಂಬಿ ಎಣಿಸುವಂತಾಗಿದೆ. ಮಂಜುಳಾ ಪಾಟೀಲ್ ಮತ್ತು ಪತಿ ಶಿವರಾಜ ಪಾಟೀಲ್ ಸಿಸಿಬಿ ಪೊಲೀಸರ ಬಲೆಗೆ ಬಿದ್ದವರು, ಜಿಲ್ಲೆಯಲ್ಲಿ ದಲಿತ ಸೇನೆ ಕಾರ್ಯಕರ್ತರು ಪೊಲೀಸರು, ಉದ್ಯಮಿಗಳನ್ನು ಹನಿಟ್ರ್ಯಾಪ್ ಮಾಡಿ ಹಣ ಸುಲಿಗೆ ಮಾಡಿದ ಪ್ರಕರಣ ಮರೆಮಾಚುವ ಮುನ್ನವೇ ಮತ್ತೊಂದು ಹನಿಟ್ರ್ಯಾಪ್ ಕೇಸ್ ಬೆಳಕಿಗೆ ಬಂದಿದೆ.
ಅಫಜಲಪುರದಿಂದ 6 ಬಾರಿ ಶಾಸಕರಾಗಿದ್ದ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಮಾಲೀಕಯ್ಯ ಗುತ್ತೇದಾರ್ ಪುತ್ರ ರಿತೇಶ ಗುತ್ತೇದಾರ್ ಅವರಿಗೆ ಹಲವಾರು ಸಲ ಮಂಜುಳಾ ಮತ್ತು ಶಿವರಾಜ ಕರೆ ಮಾಡಿ ನಿಮ್ಮ ತಂದೆ ನನಗೆ ನಿಂದನೆ ಮಾಡುವಂತ ಸಂದೇಶ * ಕಳಿಸಿದ್ದಾರೆ. ಅವನ್ನು ಡಿಲೀಟ್ ಮಾಡಲು ಮತ್ತು ಮಾಧ್ಯಮಗಳಿಗೆ
- ಬಿಡುಗಡೆ ಮಾಡದಂತಿರಲು 20 ಲಕ್ಷ ರೂ. ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಅನೇಕ ಸಲ ಮಂಜುಳಾ ಕರೆ ಮಾಡಿ ಹಣ ಕೊಡುವಂತೆ ಕಾಡಿಸಿದ್ದರು. ಬೆಂಗಳೂರಿನ ಕೋಡಿಗೆಹಳ್ಳಿ ಕ್ರಾಸ್ ಬಳಿಯ ಹೋಟೆಲ್ಗೆ ಕರೆಸಿಕೊಂಡು ಎರಡು ದಿನಗಳ ಹಿಂದೆ ರಿತೇಶ್ ಮಾತನಾಡಿದ್ದ. ಅಷ್ಟೊಂದು ಹಣ ಕೊಡಲು ಆಗಲ್ಲ ಎಂದಿದ್ದ. ಆದರೂ ಕಮ್ಮಿ ಆಗಲ್ಲ ಎಂದು ಮಂಜುಳಾ ಮತ್ತು ಶಿವರಾಜ ಕಡ್ಡಿ ಮುರಿದಂತೆ ಹೇಳಿದ್ದರು. 20 ಲಕ್ಷ ರೂ. ಸುಲಿಗೆ ಮಾಡಲು ಯತ್ನಿಸುವುದರ ಜತೆಗೆ ತಂದೆ ಮಾಲೀಕಯ್ಯ ವಿರುದ್ಧ ಸುಳ್ಳು ಆರೋಪ ಮಾಡುವ ಮೂಲಕ ಮಂಜುಳಾ ಪಾಟೀಲ್ ಹಾಗೂ ಆಕೆಯ ಪತಿ ಸೇರಿಕೊಂಡು ಸಂಚು ನಡೆಸಿದ್ದಾರೆ ಎಂದು ದೂರಿನಲ್ಲಿ ರಿತೇಶ್ ಉಲ್ಲೇಖಿಸಿದ್ದಾರೆ. 8 ದಿನ ಪೊಲೀಸ್ ಕಸ್ಟಡಿಗೆ: ಇಬ್ಬರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು. ವಿಚಾರಣೆ ನಡೆಸಿ ನ್ಯಾಯಾಧೀಶರು ಆರೋಪಿಗಳನ್ನು 8 ದಿನಗಳ ಕಾಲ ಪೊಲೀಸ್
ಕಸ್ಟಡಿಗೆ ನೀಡಿದ್ದಾರೆ.
Post a Comment