Clickable Image

Tuesday, October 29, 2024

ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಆರೋಪ ಬಿಜೆಪಿ ಮುಖಂಡ ಮಣಿಕಂಠ ಪೊಲೀಸ್ ವಶಕ್ಕೆ !

 ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಮಣಿಕಂಠ ಪೊಲೀಸ್ ವಶಕ್ಕೆ 








ಚಿತ್ತಾಪುರ: ಕಾಗಿಣಾ ನದಿ ಹತ್ತಿರ ಕೆ.ಆರ್.ಐ.ಡಿ.ಎಲ್ ವ್ಯಾಪ್ತಿಯ ಮರಳು ಅಡ್ಡೆಯಿಂದ ಅಕ್ರಮ ಮರಳು ಸಾಗಣೆ ನಡೆಯುತ್ತಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅಕ್ರಮ ಮರಳು ಟಿಪ್ಪರ್ ಗಳನ್ನು ತಡೆಹಿಡಿದು ಸ್ಥಳದಲ್ಲಿಯೇ ಧರಣಿ ನಡೆಸಿದ ಪ್ರಸಂಗ ಸೋಮವಾರ ರಾತ್ರಿ ನಡೆದಿದೆ.

ತಾಲೂಕಿನ ಭಾಗೋಡಿ ಗ್ರಾಮದ ಕಾಗಿಣಾ ನದಿಯಲ್ಲಿ ಪರವಾನಿಗೆ ಇಲ್ಲದೆ ರಸ್ತೆ ನಿರ್ಮಾಣ ಮಾಡಿ ನದಿಯಲ್ಲಿನ ಅಕ್ರಮ ಮರಳು ಸಾಗಣೆ ಮಾಡುತ್ತಿರುವುದರಿಂದ ಕಾಗಿಣಾ ನದಿಯ ಸಂಪತ್ತು ನಾಶವಾಗಿ ಕುಡಿಯುವ ನೀರಿನ ಅಭಾವ ಉಂಟಾಗುವ ಸಾಧ್ಯತೆ ಇದೆ ಅಲ್ಲದೆ ಟಿಪ್ಪರ್ ಗಳ ಓಡಾಟದಿಂದ ಗ್ರಾಮಗಳ ಮುಖ್ಯ ರಸ್ತೆಗಳು ಸಂಪೂರ್ಣವಾಗಿ ಹಾಳಾಗುತ್ತವೆ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ದೂರು ನೀಡಿದ್ದೇನೆ ಹಾಗೂ ಗಣಿ ಇಲಾಖೆಗೆ ಸಾಕಷ್ಟು ಬಾರಿ ಹೇಳಿದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಈ ಕೂಡಲೇ ಅಕ್ರಮ ಮರಳುಗಾರಿಕೆಯಲ್ಲಿದ್ದ 6 ಟಿಪ್ಪರ್, 4 ಹಿಟಾಚಿ ಹಾಗೂ 2 ಟ್ರ್ಯಾಕ್ಟರ್ ಗಳನ್ನು ಸೀಜ್ ಮಾಡಿ ಗೇಟ್ ಬಂದ್ ಮಾಡಬೇಕು ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅವರು ಪಟ್ಟು ಹಿಡಿದರು, ಅಲ್ಲದೇ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ ಮತ್ತು ಕೈಗೊಂಡ ವರದಿ ನೀಡಬೇಕು ಎಂದು ಸ್ಥಳದಲ್ಲಿದ್ದ ಗಣಿ ಇಲಾಖೆಯ ಇಂಜಿನಿಯರ್ ಧನರಾಜ್ ಅವರ ಮೇಲೆ ಜಿದ್ದು ಸಾಧಿಸಿದರು.

 ಈ ಮದ್ಯೆ ಇಂಜಿನಿಯ ಮತ್ತು ಮಣಿಕಂಠ ರಾಠೋಡ ನಡುವೆ ಕೆಲಹೊತ್ತು ಮಾತಿನ ಚಕಮಕಿ ನಡೆಯಿತು, ವರದಿ ನೀಡುವುತನಕ ಇಲ್ಲಿಂದ ಹೋಗುವುದಿಲ್ಲ ಎಂದು ಹೇಳಿ ಇಂಜಿನಿಯರ್ ಸರ್ಕಾರಿ ವಾಹನದ ಮುಂದೆ ಅಡ್ಡಗಟ್ಟಿ ಕುಳಿತುಕೊಂಡು ಧರಣಿ ನಡೆಸಿದರು.


ಇಲ್ಲಿನ ವಾಸ್ತವಾಂಶ ಕುರಿತು ಮೇಲಾಧಿಕಾರಿಗೆ ವರದಿ ನೀಡಲಾಗುವುದು ನಿಮಗೆ ವರದಿ ನೀಡಲು ಬರುವುದಿಲ್ಲ ಎಂದು ಎಷ್ಟೇ ಹೇಳಿದರೂ ಮಣಿಕಂಠ ಮಾತ್ರ ಜಾಗ ಬಿಟ್ಟು ಕದಲಲಿಲ್ಲ ಇದು ಇಂಜಿನೀಯರ್ ಗೆ ತುಂಬಾ ತಲೆನೋವಾಗಿ ಕೊನೆಗೆ ಮಾಡಬೂಳ ಪೊಲೀಸ್ ಠಾಣೆಯ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ ಕೆಲ ಹೊತ್ತಿನಲ್ಲೇ ಕಾಳಗಿ ಸಿಪಿಐ ಜಗದೇವಪ್ಪ ಪಾಳಾ ಸ್ಥಳಕ್ಕಾಗಮಿಸಿ ಮಣಿಕಂಠ ಗೆ ಎಷ್ಟೇ ಸಮಜಾಯಿಷಿ ನೀಡಿದರೂ ಸಹಿತ ಜಾಗ ಬಿಟ್ಟು ಏಳದೇ ಇರುವುದರಿಂದ ಪೊಲೀಸ್ ಸಿಬ್ಬಂದಿಗಳ ಸಹಾಯದಿಂದ ಸರ್ಕಾರಿ ವಾಹನದ ಮುಂದೆ ಕುಳಿತಿದ್ದ ಸ್ಥಳದಿಂದ ಎತ್ತಿ ರಸ್ತೆ ಬದಿ ಕುಳ್ಳರಿಸಿದರು.


ಸರ್ಕಾರಿ ವಾಹನಕ್ಕೆ ಅಡ್ಡಗಟ್ಟಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ದೂರು ನೀಡೀದ ಅನ್ವಯ ಸಿಪಿಐ ಜಗದೇವಪ್ಪ ಪಾಳಾ ಅವರು ಮಣಿಕಂಠ ರಾಠೋಡ್ ಅವರನ್ನು ನೋಟಿಸ್ ನೀಡಿ ನ್ಯಾಯಾಂಗ ಬಂಧನಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

Post a Comment

Whatsapp Button works on Mobile Device only