*ರೈತರ ಕಬ್ಬು ಸರಕಾರವೇ ಖರೀದಿಸಲಿ-ಅಬ್ದುಲ್ ಬಾಸೀತ*
ಚಿಂಚೋಳಿ ಹಾಗೂ ಕಾಳಗಿ ತಾಲೂಕಿನ ರೈತರು ಬೆಳೆದ ಕಬ್ಬನ್ನು ಸರಕಾರ ಮಧ್ಯಸ್ಥಿತಿಕೆ ವಹಿಸಿ ಬೆಂಬಲ ಬೆಲೆಯಲ್ಲಿ ಖರೀದಿಸಿ ಅನ್ನದಾತನಿಗೆ ಅನುಕೂಲ ಮಾಡಿಕೊಡಬೇಕೆಂದು ತಾಲೂಕಾ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅಬ್ದುಲ್ ಬಾಸೀತ ರಾಜ್ಯ ಸರಕಾರಕ್ಕೆ ಮನವಿ ಮಾಡಿಕೊಂಡರು
ಅವರು ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕಾ ಹಿತರಕ್ಷಣಾ ಸಮಿತಿಯ ವತಿಯಿಂದ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ ಕಾಳಗಿ ಹಾಗೂ ಚಿಂಚೋಳಿ ತಾಲೂಕುಗಳ ರೈತರು ಈಗಾಗಲೇ ಸುಮಾರು 2 ಸಾವಿರ ಹೆಕ್ಟರಿಗೂ ಹೆಚ್ಚು ಕಬ್ಬು ಬೆಳೆದು ಕಷ್ಟದಲ್ಲಿದ್ದಾರೆ ಇವರು ಬೆಳೆದ ಕಬ್ಬನ್ನು ಸರಕಾರ ಸೂಕ್ತ ಬೆಲೆಯಲ್ಲಿ ಖರೀದಿಸುವಂತೆ ಅವರು ತಿಳಿಸಿದರು
ಇದೇ ತಿಂಗಳ 29 ರಂದು ನಗರದ ಬಸವೇಶ್ವರ ವೃತ್ತದ ಹತ್ತಿರ ಎರಡು ತಾಲೂಕುಗಳ ರೈತರು ಜಮಾವಣೆಗೊಂಡು ರೈತರ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಸರಕಾರದ ಗಮನ ಸೆಳೆಯುವಂತೆ ಮಾಡಲಾಗುವುದು ಸರಕಾರಕ್ಕೆ ಈ ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಎರಡು ತಾಲೂಕುಗಳ ಅನ್ನದಾತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕೆಂದು ಬಾಸೀತ ಮನವಿ ಮಾಡಿಕೊಂಡರು
ಸುದ್ದಿ ಗೊಷ್ಠಿಯಲ್ಲಿ ವಿವಿದ ಪಕ್ಷಗಳ ಹಾಗೂ ಸಂಘಟನೆಗಳ ಮುಖಂಡರಾದ
ಲಕ್ಷ್ಮಣ ಆವುಂಟಿ
ಬಸವರಾಜ ಸಜ್ಜನ
ಶರಣು ಮೋತಕಪಳ್ಳಿ
ಮಾರುತಿ ಗಂಜಗಿರಿ
ನಂದಿಕುಮಾರ ಪಾಟೀಲ
ಮಲ್ಲಿಕಾರ್ಜುನ ಬುಶೆಟ್ಟಿ
ಚಿತ್ರಶೇಖರ ಪಾಟೀಲ
ಆರ್.ಗಣಪತರಾವ
ರೇವಣಸಿದ್ದ ಅಣಕಲ್
ಸೈಯದ ಶಬ್ಬೀರ
ನಾಗೇಶ ಗುಣಾಜಿ
ಶ್ರೀನಿವಾಸ ಬಂಡಿ
ಜಗನ್ನಾಥ ಗುತ್ತೆದಾರ
ಗುಂಡಯ್ಯ ಸ್ವಾಮಿ
ವೀರಭದ್ರಪ್ಪ ಕಟ್ಟೊಳ್ಳಿ
ಮತೀನ ಸೌದಾಗರ
ಶೇಖ್ ಫರೀದ ಅಬ್ಕಾರಿ
ನರೇಂದ್ರ ಪಾಟೀಲ
ಮಹ್ಮದ ನಾಯಿಕೊಡಿ
ಖಲೀಲ ಪಟೇಲ
ರಮೇಶ ವಾರಕರ
ನಾರಾಯಣ ಗುಣಾಜಿ ಸೇರಿದಂತೆ ಇತರೆ ರೈತ ಮುಖಂಡರು ಹಾಜರಿದ್ದರು
Post a Comment