*ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ನೀಡುವಂತೆ ಕೇಂದ್ರ ಸಚಿವರಿಗೆ ಮನವಿ*
*ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ ನೇತೃತ್ವದಲ್ಲಿ ನಿಯೋಗ*
*649 ದಿನಕೆ ಕಾಲಿಟ್ಟ ರೈತರ ಪ್ರತಿಭಟನೆ ಸ್ಪಂದಿಸಿದ ಕಾರ್ಖಾನೆಯ ಅಧಿಕಾರಿಗಳು*
ಕಲಬುರಗಿ : ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಶ್ರೀ ಸಿಮೆಂಟ್ ಕೊಡ್ಲಾ-ಬೆನಕನಳ್ಳಿ ಕಂಪನಿಯವರು ಭೂಸ್ವಾಧೀನ ಕಾಯ್ದೆ ಉಲ್ಲಂಘನೆ ಮಾಡಿ ಕಡಿಮೆ ದರದಲ್ಲಿ ಕೊಡ್ತಾ ಬೆನಕನಳ್ಳಿ, ಡೋಣಗಾಂವ, ರಾಜೋಳಾ ಗ್ರಾಮದ ರೈತರ ಜಮೀನುಗಳನ್ನು ಸರ್ಕಾರ ನಿಗಧಿಪಡಿಸಿದ ದರದಲ್ಲಿ ರೈತರಿಗೆ ಪರಿಹಾರ ಕೊಡದೇ ಮೀನಾಮೇಷ ಮಾಡುತ್ತಿರುವ ಕಂಪನಿಯ ಅಧಿಕಾರಿಗಳಿಗೆ ಹೆಚ್ಚಿನ ಮೊತ್ತದ ಪರಿಹಾರ ನೀಡುವಂತೆ ಶಿಫಾರಸ್ಸು ಮಾಡುವಂತೆ ಕೊಡ್ಲಾ,ಬೆನಕನಳ್ಳಿ ಡೋಣಗಾಂವ. ರಾಜೋಳಾ ರೈತರ ಸಂಘದ ಪದಾಧಿಕಾರಿಗಳು ಕಲಬುರಗಿ ಜಿಲ್ಲಾ ಜೆಡಿಎಸ ಪಕ್ಷದ ಅಧ್ಯಕ್ಷರಾದ ಬಾಲರಾಜ್ ಗುತ್ತೇದಾರ ಅವರ ನೇತೃತ್ವದಲ್ಲಿ ಉಕ್ಕು ಮತ್ತು ಬೃಹತ ಕೈಗಾರಿಕಾ ಇಲಾಖೆಯ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರ ಬಳಿ ನಿಯೋಗ ಹೋಗಿ ಮನವಿ ಪತ್ರ ಸಲ್ಲಿಸಿದರು.
ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರ ಸ್ವಾಮಿ ಅವರ ಬೆಂಗಳೂರಿನ ನಿವಾಸದಲ್ಲಿ ಮನವಿ ಪತ್ರ ಸಲ್ಲಿಸಿ ಶ್ರೀ ಸಿಮೆಂಟ್, ಕಂಪನಿ ಸ್ಥಾಪನೆ ಮಾಡುವ ಸಲುವಾಗಿ ಡೋಣಗಾಂವ, ರಾಜೋಳಾ, ಕೊಡ್ಲಾ,ಬೆನಕನಳ್ಳಿ ಗ್ರಾಮದ ರೈತರ ಜಮೀನುಗಳನ್ನು ಪ್ರತಿ ಎಕರೆಗೆ 11,68,000/- (ಹನ್ನೊಂದು ಲಕ್ಷ ಆರವತ್ತೆಂಟು ಸಾವಿರ ರೂಪಾಯಿ) ಯಂತೆ 2009 ಸರ್ವೆ ನಂ 293/1, 293/2 ಖರೀದಿ ಮಾಡಿರುತ್ತಾರೆ. ಆದರೆ ಎಲ್ಲಾ ಸರ್ವೆ ನಂಬರಗೆ 2,35,000/- ರೂಪಾಯಿ 2009ರಲ್ಲಿ ನೀಡಿರುತ್ತಾರೆ. ಮತ್ತೆ 3.65,000/- ರೂಪಾಯಿ 2012ರಲ್ಲಿ ಕೊಟ್ಟಿರುತ್ತಾರೆ. ಮತ್ತೆ 2016ರಲ್ಲಿ ರೂಪಾಯಿ 2,00,000/- ಹಾಗೂ ಒಂದು ಉದ್ಯೋಗ ಒಟ್ಟು 8,00,000/- (ಎಂಟು ಲಕ್ಷ) ಮಾತ್ರ ಕೊಟ್ಟಿರುತ್ತಾರೆ. ಇನ್ನು ಬಾಕಿ ಕೊಡಬೇಕಾದ 3.68.000/- ಕೊಟ್ಟಿಎರುವುದಿಲ್ಲ , ಬಾಕಿ ಹಣವನ್ನು ಕೊಡುವಂತೆ ಸತತವಾಗಿ ಪ್ರತಿಭಟನೆ ಮಾಡುತ್ತಾ ಬಂದಿರುತ್ತೇವೆ. ಇದರಲ್ಲಿ ಸಹ ತಾರತಮ್ಯ ಮಾಡಿರುತ್ತಾರೆ. ಆದರೆ ಇದರ ಕುರಿತು ಶ್ರೀ ಸಿಮೆಂಟ್ ಕಂಪನಿ ಕೊಡ್ಲಾ ದಲ್ಲಿ 1-12-2022ರಿಂದ ಇಲ್ಲಿಯವರೆಗೆ 648 ದಿನಗಳು ಕಳೆದರು ಸಹಿತ ಸತತವಾಗಿ ಪ್ರತಿಭಟನೆ ಮಾಡುತ್ತಾ ಬಂದಿರುತ್ತೇವೆ. ಇದರ ಕುರಿತು ಸಹಾಯಕ ಆಯುಕ್ತರು ಸೇಡಂ ಇವರಿಗೆ ಮನವಿ ಸಲ್ಲಿಸಿದಾಗ ಸಹಾಯಕ ಆಯುಕ್ತರು ಸೇಡಂ ಇವರ ಕಛೇರಿಯಲ್ಲಿ 3-4ಸಲ ಸಭೆ ಮಾಡಿದ್ದು ಸಭೆಯಲ್ಲಿ 3.68,000/- ಹೆಚ್ಚಿನ ಮೊತ್ತ ಕೊಡಲೇಬೇಕೆಂದು ಸಭೆಯ ನಡುವಳಿ ಪತ್ರದಲ್ಲಿ ಬರೆದುಕೊಟ್ಟಿರುತ್ತಾರೆ. ಹಾಗೂ ಪ್ರಾದೇಶಿಕ ಆಯುಕ್ತರು ಕೂಡ ಸಹ ಸಭೆ ನಡೆಸಿ. ಆ ಸಭೆಯಲ್ಲಿಯೂ 109 ಉಲ್ಲಂಘನೆಯಾಗಿದೆ ಹಾಗೂ ಹೆಚ್ಚಿನ ಮೊತ್ತದ ನೀಡಬೇಕೆಂದು ಆದೇಶ ಮಾಡಿರುತ್ತಾರೆ. ಹಾಗೂ ಜಿಲ್ಲಾಧಿಕಾರಿಗಳಿಗೆ 15ಸಲ ಮನವಿ ಪತ್ರ ಸಲ್ಲಿಸಿರುತ್ತೇವೆ. 1 ಸಲಮಾತ್ರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ 15 ದಿನಗಳ ಒಳಗಾಗಿ ಸಭೆಯನ್ನು ಕರೆದು ಸದರಿ ವಿಷಯದ ಕುರಿತು ನೀರ್ಣಯ ಮಾಡಿ ನ್ಯಾಯ ಒದಗಿಸಿಕೊಡುತ್ತೇವೆಂದು ಹೇಳಿ ಸುಮಾರು 6 ತಿಂಗಳು ಕಳೆದರು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
ಆದಕಾರಣ ರೈತರಿಗೆ ಆದ ಅನ್ಯಾಯವನ್ನು ಸರಿಪಡಿಸಿ ಪ್ರತಿ ಎಕರೆಗೆ ರೈತರಿಗೆ ಬರಬೇಕಾದ 3,68,000/- ಕೊಡುವಂತೆ ಕಂಪನಿಯ ಆಡಳಿತ ಮಂಡಳಿಯವರಿಗೆ ಆದೇಶ ಮಾಡಬೇಕೆಂದು ಕೇಂದ್ರ ಸಚಿವರಿಗೆ ಮನವಿ ಪತ್ರ ಸಲ್ಲಿಸಿದ್ದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಕಲಬುರಗಿ ಜಿಲ್ಲಾಧ್ಯಕ್ಷರಾದ ಬಾಲರಾಜ್ ಗುತ್ತೇದಾರ ,ಸುನೀತಾ ತಳವಾರ, ಶೇರ ಅಲಿ ಖಾನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬಾಕ್ಸ್ :
ಕಳೆದ 2 ವರ್ಷದಿಂದ ರೈತರು ಹೊರಾಟ ಮಾಡಿಕೊಂಡು ಬರುತ್ತಿದ್ದಾರೆ, ಕಾರ್ಖಾನೆ ಮುಂದೆ ರೈತರು ನಡೆಸುತ್ತಿರುವ ಧರಣಿ 649 ದಿನಕ್ಕೆ ಕಾಲಿಟ್ಟಿದೆ, ಪ್ರತಿಭಟನಾ ಧರಣಿಯಲ್ಲಿ ಒಬ್ಬ ರೈತನು ಮೃತಪಟ್ಟಿದ್ದು , ರೈತರ ಹೊರಾಟಕ್ಕೆ ಕಾರ್ಖಾನೆಯವರು ಹಾಗೂ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲಾ ,ಇದರ ಕುರಿತು ಕೇಂದ್ರ ಸಚಿವರಿಗೆ ಮನವರಿಕೆ ಮಾಡಲಾಗಿದೆ .
ಬಾಲರಾಜ್ ಗುತ್ತೇದಾರ
ಜೆಡಿಎಸ್ ಜಿಲ್ಲಾಧ್ಯಕ್ಷರು ಕಲಬುರಗಿ
.
Post a Comment