ಕಾನಿಪಾ ಧ್ವನಿ ಸಂಘ ಬೀದರ್ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಪತ್ರಕರ್ತರ ಸಮಾವೇಶ ಮತ್ತು ನ್ಯಾ ಸಂತೋಷ ಹೆಗ್ಡೆ ರವರಿಂದ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ
ಬೀದರ್ : ನಗರದ ಶಾಹೀನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಬೀದರ್ ವತಿಯಿಂದ ಜಿಲ್ಲಾ ಪತ್ರಕರ್ತರ ಸಮಾವೇಶ ಹಾಗೂ ವಿದ್ಯಾರ್ಥಿಗಳ ಜೊತೆಗೆ ಸುಪ್ರೀಂ ಕೋರ್ಟ್ ನಾ ನಿವೃತ್ತ ನ್ಯಾಯ ಮೂರ್ತಿ, ಲೋಕಾಯುಕ್ತ ರಾಗಿದ್ದ ಸಂತೋಷ ಹೆಗ್ಡೆ ರವರಿಂದ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ನಡೆಯಿತು,
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಸಂತೋಷ ಹೆಗ್ಡೆ ರವರು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯಧ್ಯಕ್ಷರು ಆಗುರುವ ಬಂಗ್ಲೆ ಮಲ್ಲಿಕಾರ್ಜುನ ರವರು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನ ಉದ್ಘಾಟಿಸಿದರು,
ಜಿಲ್ಲಾಧ್ಯಕ್ಷ ಸೈಯದ್ ಮೋಸಿನ ಅಲಿ ರವರು ಕಾರ್ಯಕ್ರಮದ ಸ್ವಾಗತ ಭಾಷಣ ಮೂಲಕ ಗಣ್ಯ ಮಾನ್ಯರಿಗೆ ಪತ್ರಕರ್ತರಿಗೆ, ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿದರು,
ಇದೆ ಸಂಧರ್ಭದಲ್ಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ರಾಜ್ಯಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ರವರು ಸರ್ಕಾರಗಳು ಪತ್ರಕರ್ತರಿಗೆ ಅನ್ಯಾಯ ಮಾಡುತ್ತಿವೆ ಯಾವ ಸರ್ಕಾರದಲ್ಲೂ ನಮಗೆ ನ್ಯಾಯ ಸಿಗುತ್ತಿಲ್ಲ ಅಕ್ರಿಡೇಷನ್ ಹೆಸರಲ್ಲಿ ಮೋಸ ಮಾಡಲಾಗುತ್ತಿದೆ ಸರ್ಕಾರ ಲಕ್ಷಾಂತರ ಸಂಖ್ಯೆಯಲ್ಲಿರುವ ಮಹಿಳೆಯರಿಗೆ ಉಚಿತ ಬಸ್ ಪಯಣ ನೀಡಿದೆ ಸಂತೋಷ ನಮ್ಮ ಅಕ್ಕ ತಂಗಿಯರೇ ಓಡಾಡ್ತಾರೆ ಆದರೆ ಕೇವಲ 12ಸಾವಿರ ರಷ್ಟು ಇರುವ ಪತ್ರಕರ್ತರಿಗೆ ಬಸ್ ಪಾಸ್ ನೀಡಲು ಕಠಿಣ ನಿಯಮಗಳನ್ನ ತಂದಿದ್ದಾರೆ ಇದು ಸರಿ ಇಲ್ಲ ನಮ್ಮ ಹೋರಾಟ ಕಾನೂನು ರೀತಿಯಲ್ಲಿ ಮುಂದುವರಿಯಲಿದೆ ವಾರ್ತಾ ಇಲಾಖೆ ಗಳಲ್ಲೂ ಭ್ರಷ್ಟಚಾರ ತಾಣವಾಡುತ್ತಿದೆ ಎಂದು ಕಿಡಿಕಾರಿದರು,
ಇದೆ ಸಂಧರ್ಭದಲ್ಲಿ ಮಾತನಾಡಿದ ನಿವೃತ್ತ ನ್ಯಾಯ ಮೂರ್ತಿ ಸಂತೋಷ ಹೆಗ್ಡೆ ರವರು ಇಲ್ಲಿವರೆಗೆ ಸಾವಿರಕ್ಕೂ ಹೆಚ್ಚು ಕಾರ್ಯಕ್ರಮ ಮಾಡಿದ್ದೇನೆ ಇಂತಹ ಅದ್ಭುತವಾದ ಕಾರ್ಯಕ್ರಮ ನೋಡಿಲ್ಲ ಎಂದು ಕನಿಪಾ ಧ್ವನಿ ಬೀದರ್ ವತಿಯಿಂದ ನಡೆದ ಕಾರ್ಯಕ್ರಮ ಕುರಿತು ಹರ್ಷ ವ್ಯಕ್ತಪಡಿಸಿ ತನ್ನ ಜೀವನದ ಅನುಭವ ಕುರಿತು ಮಾತನಾಡಿದರು,
ಹಿರಿಯ ಪತ್ರಕರ್ತ ಶಿವಶರಣಪ್ಪಾ ವಾಲಿ ಮಾತನಾಡಿ ಈಗಿನ ಪತ್ರಕರ್ತರೂ ತನನ್ನು ತಾನು ಮಾರಿಕೊಳ್ಳುತ್ತಿದ್ದಾರೆ ಒಂದೇ ರಾಜಕಾರಣಿ ಒಂದೇ ಪಕ್ಷದ ಪರ ಒಲವು ತೋರಿಸುತಿದ್ದಾರೆ ಅನ್ಯಾಯ ತಪ್ಪು ಕಂಡಾಗ ಅದನ್ನ ವಿರೋಧಿಸುತಿಲ್ಲ ಕಳಪೆ ಕಾಮಗಾರಿ ನಡೆದರೆ ಸುದ್ದಿ ಮಾಡದೆ ಸಂಬಂಧ ಪಟ್ಟ ಕಾಂಟ್ರಾಕ್ಟಾರ್ ಗೆ ಮಾತನಾಡಿ ಸೆಟಲ್ ಮೆಂಟ್ ಆಗುತ್ತಿದ್ದಾರೆ ಇಂತಹ ಪರಿಸ್ಥಿತಿ ಗೆ ಬಂದಿದೆ ನಮ್ಮ ವೃತ್ತಿ ಎಂದು ಕಳವಳ ವ್ಯಕ್ತಪಡಿಸಿದರು, ಪತ್ರಿಕಾ ಅಂಗ ಸಂವಿಧಾನದ ನಾಲ್ಕನೇ ಅಂಗ ಎಂದು ನಮನ್ನ ಮರಳು ಮಾಡುತ್ತಿದ್ದಾರೆ ಶಾಸಕ, ಕಾರ್ಯಾಂಗ, ನ್ಯಾಯಾಂಗ, ಇದ್ದಂತೆ ನಮಗೆ ಪ್ರತೇಕ ಪತ್ರಿಕಾ ಅಂಗ ಮಾಡಲಿ ನೋಡೋಣ ಇದು ಬರೀ ಹೇಳಲು ಮಾತ್ರ ಪತ್ರಕರ್ತರೆಂದರೆ ನಾವೇನು ದೊಡ್ಡವರಲ್ಲ ನಾವು ಕೂಡ ಸಾಮಾನ್ಯರಂತೆ ನಮ್ಮಲ್ಲಿ ಪೆನ್ನು ಅನ್ನೋ ಪಾವರ್ ಇದೆ ಅಷ್ಟೇ ಬಿಟ್ರೆ ಬೇರೇನೂ ಇಲ್ಲ ಅದರ ಬಳಕೆ ಮಾಡಬೇಕು ತಪ್ಪು ನಡೆದರೆ ಬರಿಯಬೇಕು ಯಾರಿಗೂ ಮುಲಾಜೆ ಇಡಬಾರದು ಎಂದರು, ಅಷ್ಟೇ ಅಲ್ಲದೆ DC, SP, ಇನ್ನೂ ಬೇರೆಬೇರೆ ಅಧಿಕಾರಿಗಳು ಬಂದರೆ ನಮ್ಮ ಪತ್ರಕರ್ತರು ಹೂ ಗುಚ್ಚ ಹಿಡಿದುಕೊಂಡು ಹೋಗಿ ಪರಿಚಯ ಮಾಡಿ ಕೊಳ್ತಾರೆ ನೀವೇಕೆ ಪರಿಚಯ ಮಾಡಿ ಕೊಳ್ಳೋದು ನೀವು ಅವರ ಎಜೇಂಟರಾ ಅಥವಾ ಅವರ ಹತ್ತಿರ ಕೆಲಸ ಮಾಡೋರಾ ಎಂದು ಆಕ್ರೋಶ ವ್ಯಕ್ತಪಡಿಸಿದರು ನಿಮ್ಮ ಕೆಲಸ ಅವರನ್ನ ನಿಮನ್ನು ಗುರುತಿಸಬೇಕು ಎಂದರು ನನಗೇನು 97ವಯಸ್ಸು ಆಗಿದೆ ಇನ್ನೂ ಕೆಲವು ವರ್ಷ ಅಷ್ಟೇ ನನ್ನ ಜೀವನ ಎಂದು ಹೇಳುತ್ತಾ ಪತ್ರಕರ್ತರಿಗೆ ತನ್ನ ಜೀವನದ ಕುರಿತು ಮಾತನಾಡಿ ಪ್ರೇರಣೆ ಮಾತು ಗಳನ್ನು ಹೇಳಿದರು,
ನಂತರ ಕಾನಿಪಾಧ್ವನಿ ಕಲ್ಯಾಣ ಕರ್ನಾಟಕ ವಿಭಾಗದ ಅಧ್ಯಕ್ಷ ಮಲ್ಲಿಕಾರ್ಜುನ್ ಪಗಡೆ ಮಾತನಾಡಿ ಪತ್ರಕರ್ತರಾಗಲು ಬಯಸುವವರು ಮೊದಲು ಜೀವನದಲ್ಲಿ ಸ್ವಾಭಿಮಾನಿಗಳಾಗಿರಬೇಕು ಯಾರ ಹಂಗಿನಲ್ಲಿ ಬದುಕಬಾರದು ಕಾಯಕದಲ್ಲಿರುವಾಗ ಒಂದು ಕಪ್ ಚಹಾ ಸಹ ಸೇವಿಸಬಾರದು ಯಾರು ಎಷ್ಟೇ ದೊಡ್ಡವರಾದರೂ ತಪ್ಪು ಮಾಡಿದಾಗ ನಿರ್ಭಯದಿಂದ ಸುದ್ದಿ ಪ್ರಸಾರ ಮಾಡಬೇಕು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ನಿಂಬುರೆ ಮಾತನಾಡಿ ಸಮಾಜಕ್ಕಾಗಿ ಕೆಲಸ ಮಾಡುವ ಪತ್ರಕರ್ತರಿಗೆ ಅಪಘಾತ ಅನಾಹುತ ಗಳಾದರೆ ಯಾರು ನೋಡಲ್ಲ ಸಂಘದ ಉಪಾಧ್ಯಕ್ಷ ಶ್ರೀಮಂತರಾವ್ ಇಂಚುರೇ ರವರಿಗೆ ಅಪಘಾತವಾಗಿ ಸುಮಾರು ದಿನಗಳಿಂದ ಬೆಡ್ ರೆಸ್ಟ್ ಮೇಲಿದ್ದಾರೆ ಅವರ ಆರೋಗ್ಯ ವಿಚಾರಿಸೋಕೆ ಒಬ್ಬ ರಾಜಕಾರಣಿ ಹೋಗಿಲ್ಲ ಸರ್ ಎಂದು ವೇದಿಕೆ ಮೇಲೆ ಕಳವಳ ವ್ಯಕ್ತಪಡಿಸಿದರು,
ಕಾರ್ಯಧ್ಯಕ್ಷ ಮಿರ್ಜಾ ರಹೇಮತುಲ್ಲಾ ಬೇಗ್ ರವರು ಮಾತನಾಡಿ ಇವತ್ತಿನ ನನ್ನ ದಿನ ಜೀವನದ ಅತ್ಯಂತ ಶುಭ ದಿನವಾಗಿದೆ ದಿನವಿಡೀ ಸಾಹೇಬರ ಜೊತೆಗೆ ಕಳೆದಿದ್ದೇನೆ ಒಳ್ಳೆಯ ಅನುಭವ ಸಾಕಷ್ಟು ಕಲಿಯೋಕೆ ಸಿಕ್ಕಿದೆ ಎಂದರು,
ಕಾರ್ಯಕ್ರಮ ನಂತರ ಭ್ರಷ್ಟಾಚಾರ, ಸಾಮಾನ್ಯ ಕೈದಿ ರಾಜಕಾರಣಿಗಳ ಮಗ ಅಥವಾ ಸೆಲೆಬ್ರಿಟಿ ಕೈದಿ ಯಾಗುವ ಕುರಿತು, ಅಸಮಾನತೆ, ಇಂದಿನ ಶಿಕ್ಷಣ ಅಲ್ಲದೆ ತನ್ನ ವೃತ್ತಿ ಜೀವನದಲ್ಲಿ ತಾವು ತೆಗೆದು ಕೊಂಡಿರುವ ನಿರ್ಣಯ ದೊಡ್ಡ ರಾಜಕಾರಣಿಗಳಿಗೆ ಅಲ್ಲದೆ ಮುಖ್ಯಮಂತ್ರಿ ಗಳಿಗೂ ಬಿಡದ ತಮಗೆ ಆಗಿರುವ ಅನುಭವ ಕುರಿತ ಮಕ್ಕಳ ಪ್ರಶ್ನೆ ಗಳಿಗೆ ಉತ್ತರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪೂರ್ಣಿಮಾ ಜಾರ್ಜ್, ಫೇರೋಜ್ ಖಾನ್, ಯುವ ವಕೀಲ ತಲಹಾ ಹಾಶ್ಮಿ, ಹಿರಿಯ ಪತ್ರಕರ್ತ ಶಿವಶರಣಪ್ಪಾ ವಾಲಿ, ಎಂ.ಎ ಜಬ್ಬಾರ್, ಸಂಘದ ಜಿಲ್ಲಾಧ್ಯಕ್ಷ ಸೈಯದ್ ಮೋಸಿನ ಅಲಿ, ಕಲ್ಯಾಣ ಕರ್ನಾಟಕ ಭಾಗದ ಅಧ್ಯಕ್ಷ ಮಲ್ಲಿಕಾರ್ಜುನ ಪಗಡೆ, ಕಾರ್ಯಧ್ಯಕ್ಷ ಮಿರ್ಜಾ ರಹೇಮತುಲ್ಲಾ ಬೇಗ್, ಉಪಾಧ್ಯಕ್ಷ ಎಂ.ಡಿ ಯಾಕೂಬ್ ಬಾಬಾ,ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ನಿಂಬುರೆ, ಕಾರ್ಯದರ್ಶಿ ಸಮೀರ್ ಖಾನ, ಪ್ರದೀಪ್ ಕುಮಾರ್ ದಾದನೂರ್, ಖುಸ್ರೋ ಅಹ್ಮದ್, ರಾಮಶೇಟ್ಟಿ ಮರ್ಖಲ್, ಸಜೀಶ್ ಲಂಬುನೂರ್, ಶಾಂತಕುಮಾರ್ ನಾಟಿಕಾರ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Post a Comment