ಡೇರ ಡೆವಿಲ್ ರಾಜಕಾರಣಿ ಮಾಲೀಕಯ್ಯ ಗುತ್ತೇದಾರ ರಾಜಕೀಯಕ್ಕೆ ಕಪ್ಪುಚುಕ್ಕೆ ಇಡುವ ಹುನ್ನಾರ ಸಹಿಸೆವು-ಸಿದ್ದು ದಿಕ್ಸಂಗಿ
ಕಲಬುರಗಿ: ಜಿಲ್ಲೆಯಲ್ಲಿ ಹನಿಟ್ರ್ಯಾಪ್ ಹೆಸರಿನ ಸುದ್ದಿ ಸದ್ದು ಮಾಡುತ್ತಿದ್ದು,ಸುಮಾರು 40 ವರ್ಷಗಳ ತಮ್ಮ ಸುದಿರ್ಘ ರಾಜಕಾರಣದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಯಾವುದೇ ರಾಜಕೀಯ ರಾಜಿ ಮಾಡಿಕೊಳ್ಳದೆ ಡೆರ್ ಡೆವಿಲ್ ರಾಜಕಾರಣಿಯಾಗಿ ಜಿಲ್ಲೆ ಅಷ್ಟೆ ಅಲ್ಲದೇ ರಾಜ್ಯದಲ್ಲಿ ಸದ್ದು ಮಾಡಿದ ಹಿಂದುಳಿದ ವರ್ಗಗಳ ಆಶಾಕಿರಣ ಮಾಲೀಕಯ್ಯ ಗುತ್ತೇದಾರ ಅವರ ಹೆಸರಿಗೆ ಕಳಂಕ ತರುವ ನಿಟ್ಟಿನಲ್ಲಿ ಶೆಡ್ಯಾಂತರ ರೂಪಿಸಿ ಹನಿಟ್ರ್ಯಾಪ್ ಮಾಡುವ ಹುನ್ನಾರ ಮಾಲೀಕಯ್ಯ ಗುತ್ತೇದಾರ ಅವರ ಅಭಿಮಾನಿಗಳು ಸಹಿಸಲಾರೆವು ಎಂದು ದಲಿತ ಮುಖಂಡ ಸಿದ್ದು ದಿಕ್ಸಂಗಿ ಗುಡುಗಿದರು.
ಮಾತು ಮುಂದುವರೆಸಿದ ಅವರು ಅಫಜಲಪುರ ತಾಲೂಕಿನಿಂದ 6 ಬಾರಿ ಶಾಸಕರಾಗಿ ಸಚಿವರಾಗಿ ಅಧಿಕಾರ ನಡೆಸಿದ ಅವರು ಅಫಜಲಪುರ ತಾಲೂಕಿನ ಜನರಿಗೆ ನೀರಾವರಿ ಸೌಲಭ್ಯ ಒದಗಿಸಿದ ಭೀಮಾತೀರದ ಭಗೀರಥರಿವರು.ಹಂತವರ ಹೆಸರಿಗೆ ಮಸಿ ಮಳಿಯುವ ಹಿನ್ನಾರ ನಡೆಸುತ್ತಿರುವ ಕೆಟ್ಟ ಹುಳುಗಳಿಗೆ ಎಚ್ಚರಿಕೆಯನ್ನು ನೀಡುತ್ತಿದ್ದೆವೆ.ಮಾಲೀಕಯ್ಯ ಗುತ್ತೇದಾರ ಅವರ ಬಗ್ಗೆ ಈ ರೀತಿಯ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದರೆ ಮುಂದಿನ ದಿನಗಳಲ್ಲಿ ಹಿಂತಹ ದುಷ್ಟ ಮನಸ್ಥಿತಿಯ ಜನರಿಗೆ ಪ್ರತ್ತ್ಯುತ್ತರ ನೀಡಬೇಕಾಗುತ್ತದೆ. ಈಗಾಗಲೇ ಮಾಧ್ಯಮಗಲ್ಲಿ ಸುದ್ದಿ ಪ್ರಸಾರವಾಗುತ್ತಿದೆ.ಮಂಜುಳಾ ಪಾಟೀಲ ಅನ್ನುವ ಹೆಣ್ಣು ಪ್ರಭಾವಿ ನಾಯಕರು ಸೇರಿದಂತೆ 8 ಜನರ ಹನಿಟ್ರ್ಯಾಪ್ ಸಂಬಂಧಿತ ವಿಡಿಯೋಗಳು ಅವಳ ಮೊಬೈಲ್ ಪೋನಿನಲ್ಲಿ ಸಿಕ್ಕಿವೆ ಎನ್ನುವ ಮಾಹಿತಿ ತಿಳಿದು ಬಂದಿದೆ.ಹಿಂತವರಿಗೆ ಕಾನೂನಿನ ಬಲೆಯಲ್ಲಿ ಬಿಳಿಸಿದ್ದು ಕೂಡಾ ನಮ್ಮ ನಾಯಕರು.ಒಂದು ವೇಳೆ ಮಂಜುಳಾ ಪಾಟೀಲ ಅಂತಹ ದುಷ್ಟ ಮನಸ್ಸಿನವರನ್ನು ಬಂದಿಸದಿದ್ದರೆ ಇನ್ನೆಷ್ಟು ಅಮಾಯಕ ಮರ್ಯಾದಸ್ಥರ ಮಾನ ಹರಾಜುಗುತ್ತಿತ್ತೆನೋ.ಮಂಜುಳಾ ಪಾಟೀಲ ಹಾಗೂ ಅವರ ಪತಿಗೆ ಕುಮ್ಮಕ್ಕು ನೀಡುವವರಿಗೆ ಮಾಲೀಕಯ್ಯ ಗುತ್ತೇದಾರ ಅವರ ಅಭಿಮಾನಿ ಬಳಗ ಸುಮ್ಮನೆ ಬಿಡುವುದಿಲ್ಲ.ಕಾನೂನಿನ ಬಲೆಗೆ ಸಿಕ್ಕಿಕೊಳ್ಳುವಂತೆ ಮಾಡುತ್ತೆವೆ ಎಂದರು.ಯಾವುದೇ ಕಷ್ಟ ಬಂದರು ನಾವು ಮಾಲೀಕಯ್ಯ ಗುತ್ತೇದಾರ ಅವರ ಬೆನ್ನಿಗೆ ಇರುತ್ತವ
ಎಂದು ಅಲ್ಲಾ ಅಭಿಮಾನಿಗಳ ಪರವಾಗಿ ಗಾಢವಾದ ಧೈರ್ಯ ನೀಡಿದರು.
Post a Comment