ಬೀದರ್ ನಲ್ಲಿ ಅಕ್ರಮ ಗಾಂಜಾ ಬೆಳೆಯ ಮೇಲೆ ಪೊಲೀಸರ ರೆಡ್
ಗಡಿ ಜಿಲ್ಲೆ ಬೀದರ್ ನಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಹೊಲದಲ್ಲಿ ಅಕ್ರಮವಾಗಿ ಬೆಳೆದಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಗಾಂಜಾ ಬೆಳೆಯನ್ನು ಪತ್ತೆಹಚ್ಚಿ ಜಪ್ತಿ ಮಾಡಿದ್ದಾರೆ.
ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮಹಾರಾಷ್ಟ್ರ- ಕರ್ನಾಟಕ ಗಡಿ ಅಂಚಿನ ಉಜಳಂಬ ಗ್ರಾಮದ ವ್ಯಾಪ್ತಿಗೆ ಬರುವ ಹೊಲವೊಂದರಲ್ಲಿ ಅಕ್ರಮವಾಗಿ 4 ಕ್ವಿಂಟಾಲ್ ಗಾಂಜಾ ಬೆಳೆದಿದ್ದನ್ನು ಸೀಜ್ ಮಾಡಲಾಗಿದೆ,
ಅಂದಾಜು 6 ಅಡಿಯ ಸುಮಾರು 700 ಗಾಂಜಾ ಗಿಡಗಳನ್ನು ಬೆಳೆದಿದ್ದರ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಮಹಾರಾಷ್ಟ್ರದ ಬಸಂತ್ ಎಂಬಾತ ಈ ಗಾಂಜಾ ಬೆಳೆ ಬೆಳೆದಿದ್ದ ಎಂದು ತಿಳಿದು ಬಂದಿದೆ. ಸದ್ಯ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಮಂಠಾಳ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಪ್ರದೀಪ್ ಗುಂಟಿ ಡಿವೈಎಸ್ಪಿ ನ್ಯಾಮೇಗೌಡ ಅವರ ಸಮ್ಮುಖದಲ್ಲಿ,
ಮಂಠಾಳ ಪೊಲೀಸ್ ಠಾಣೆ ಪಿಎಸ್ಐ ಸುವರ್ಣ ಮಲಶೆಟ್ಟಿ, ಸಿಪಿಐ ಕೃಷ್ಣಕುಮಾರ್ ಪಾಟೀಲ್, ಹಾಗೂ ಪೊಲೀಸರ ತಂಡ ಗಾಂಜಾ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
Post a Comment