Clickable Image

Tuesday, October 15, 2024

ಮಾನಸಿಕ ರೋಗಿಗಳಿಗೆ ಸಮಾಲೋಚನೆ ಅಗತ್ಯ-ಮಾಡಲಗಿ

 ಮಾನಸಿಕ ರೋಗಿಗಳಿಗೆ ಸಮಾಲೋಚನೆ ಅಗತ್ಯ-ಮಾಡಲಗಿ



ಚಿತ್ತಾಪುರ:- ಮಾನಸಿಕ ರೋಗಿಗಳಿಗೆ ಚಿಕಿತ್ಸೆಯ ಜೊತೆಗೆ ಆಪ್ತ ಸಮಾಲೋಚನೆ ಅಗತ್ಯವಾಗಿದೆ ಎಂದು ಹಿರಿಯ ಸಿವಿಲ ನ್ಯಾಯಾಧಿಶ ಮತ್ತು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಕಿಶನ್ ಮಾಡಲಗಿ ಅವರು ತಿಳಿಸಿದ್ದಾರೆ.

ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ ತಾಲೂಕು ಕಾನೂನು ಸೇವಾ ಸಮಿತಿ ತಾಲೂಕು ನ್ಯಾಯವಾದಿಗಳ ಸಂಘ,ತಾಲೂಕು ಆರೋಗ್ಯ ಇಲಾಖೆ ಚಿತ್ತಾಪುರ ಇವರ ಸೈತಸರದಲ್ಲಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಸಸಿಗೆ ನಿರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಸಾರ್ವಜನಿಕರಿಗೆ ಪ್ರತಿದಿನದ ಕೆಲಸದ ಮತ್ತು ಸಂಸಾರದ ಒತ್ತಡ ಇರುವುದರಿಂದ ಪ್ರತಿಯೊಬ್ಬರಲ್ಲಿ ಮಾನಸಿಕ ಲಕ್ಷಣಗಳು ಇರೀತ್ತವೆ ಆದರೆ ಆ ಲಕ್ಷಣಗಳು ಅತಿರೇಕಕ್ಕೆ ಹೋದಾಗ ಮಾತ್ರ ಮಾನಸಿಕ ರೋಗಿಗಳಾಗುತ್ತಾರೆ,ರೋಗಿಗಳಾದ ನಂತರ ರಸ್ತೆಯ ಮೇಲೆ ಬಾರ್ವಜನಿಕರಿಗೆ ತೊಂದರೆ ಕೊಡುವುದು, ಏಕಾಂಗಿಯಾಗಿ ಮಾತನಾಡುವುದು ಮತ್ತು ಇನ್ನಿತರ ವಿಚಿತ್ರ ಮನೋಭಾವನೆಗಳು ಹುಟ್ಟಿಕೊಳ್ಳುತ್ತವೆ ಇಂತಹ ರೋಗಿಗಳಿಗೆ ಚಿಕಿತ್ಸೆಯ ಜೊತೆಗೆ ಆಪ್ತ ಸಮಾಲೋಚನೆ ಮಾಡುವ ಅಗತ್ಯವಿದೆ.

ಇಂತಹ ರೋಗಿಗಳ ಹಿತರಕ್ಷಣೆಗಾಗಿ ಕಾನೂನಿನ ಚೌಕಟ್ಟಿನಲ್ಲಿ ಕಾಯ್ದೆಗಳಿದ್ದು ನ್ಯಾಯಾಲಯದಿಂದ ಆದೇಶ ನೀಡಿದ ನಂತರ ಚಿಕಿತ್ಸೆ ನೀಡಲು ಅವಕಾಶವಿದೆ ಎಂದು ಹೇಳಿದರು.

ತಾಲೂಕ ದಂಡಾಧಿಕಾರಿ ಹಾಗೂ ತಾ.ಕಾ.ಸೇ.ಸಮಿತಿಯ ಸದಸ್ಯ ನಾಗಯ್ಯ ಸ್ವಾಮಿ ಹಿರೇಮಠ ಅವರು ಮಾತನಾಡಿ ಕರೋನಾ ಸಂದರ್ಭದಲ್ಲಿ ಅತಿ ಹೆಚ್ಚು ವೈದ್ಯಕೀಯ ತಂಡದ ಜೊತೆಗೆ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸುವ ನೌಕರರು ಕರೋನಾ ಸೊಂಕಿತರಿಗೆ ಮತ್ತು ನಿಗಾ ಘಟಕದಲ್ಲಿ ವ್ಯವಸ್ಥೆ ಮಾಡುವ ಸಂಧರ್ಬದಲ್ಲಿ ಅತಿಹೆಚ್ಚು ಜನರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು,ಅಲ್ಲದೆ ಪ್ರತಿದಿನ ತಮ್ಮ ಕಛೇರಿಯ ಕೆಲಸ ಕಾರ್ಯಗಳಿಂದ ಸರಿಯಾದ ಸಮಯಕ್ಕೆ ಊಟ ನಿದ್ದೆ ಆಗದೇ ಇರುವುದರಿಂದಲೂ ಸಹಿತ ಮಾನಸಿಕವಾಗಿ ಕುಗ್ಗುವಂತಹ ಪರಿಸ್ಥಿತಿ ಉಂಟಾಗುತ್ತದೆ ಇದೆಲ್ಲದರ ಬಗ್ಗೆ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಅಭಿವೃದ್ಧಿ ಯೋಜನೆಯ ಅಧಿಕಾರಿ ಆರತಿ ತುಪ್ಪದ ಅವರು ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಕಾನೂನಿನ ಅರಿವು ಮೂಡಿಸುವುದರ ಜೊತೆಗೆ ಮಾನಸಿಕ ಕಾಯಿಲೆಗಳ ಬಗ್ಗೆ ಅರಿವು ಮೂಡಿಸಬೇಕು,ಒಂದು ವೇಳೆ ಅಂತಯ ಲಕ್ಷಣಗಳು ಕಂಡು ಬಂದರೆ ಅಂಥವರನ್ನು ಆಪ್ತ ಸಮಾಲೋಚನೆಯ ಮೂಲಕ ಗುಣಪಡಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದ ಕುರಿತು ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಸಂತೋಷಕುಮಾರ ದೈವಜ್ಞ ,ತಾಲೂಕ ವೈದ್ಯಾಧಿಕಾರಿ ಸೈಯದ್ ರಜಿವುಲ್ಲಾ ಖಾದ್ರಿ, ಅತಿಥಿ ಉಪನ್ಯಾಸಕರಾಗಿ ಆಗಮಿಸಿದ ಜೀಮ್ಸ ಆಸ್ಪತ್ರೆಯ ಮನೋವೈದ್ಯ ಡಾ ಚಂದ್ರಶೇಖರ ಹುಂಡೆಕರ್ ಮಾತನಾಡಿದರು.

ಈ ಸಂದರ್ಭದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕ ಅಂಜನಾದೇವಿ ಆರ್, ವಕೀಲರ ಸಂಘದ ಅಧ್ಯಕ್ಷ ನಾಗರಾಜ ಕಡಬೂರ, ಎಪಿಡಿ ಸಂಸ್ಥೆಯ ಜಿಲ್ಲಾ ಸಂಯೋಜಕಿ ಅಲ್ಪಾ, ಶ್ರೀಮಂತ್ ಸಂಗಾಬಿ ಹರಿದಾಸ್ ಡಾ. ಮೊಯಿದ್ದಿನ ಮುಭಾಶಿರ್ ಸೇರಿದಂತೆ ಅನೇಕರು ಇದ್ದರು.

ಕಾರ್ಯಕ್ರಮವನ್ನು ಸುನಂದಾ ಅವರು ಸ್ವಾಗತಿಸಿದರು ನಾಗರಾಜ್ ಅವರು ನಿರೂಪಿಸಿದರು ಕಾಳಮ್ಮ ಮಠಪತಿ ಪ್ರಾರ್ಥಿಸಿದರು.

Post a Comment

Whatsapp Button works on Mobile Device only