*ಸುಲ್ತಾನೋವ್ ಆಟದೆದುರು ಮಣಿದ ದೇವ್ ಜಾವಿಯಾ:*
*ಡಬಲ್ಸ್ ಚಾಂಪಿಯನ್ಸ್ ಪಟ್ಟವೇರಿದ ರಷ್ಯಾ ಜೋಡಿ ಆಗಾಫೋನೋವ್,ಬೊಬ್ರೊವ್*
ಕಲಬುರಗಿ,ನ.23(ಕ.ವಾ) ಐಟಿಎಫ್ ಕಲಬುರಗಿ ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್ ಪಂದ್ಯ ಕಣದಲ್ಲಿ ಕುತೂಹಲದ ಕ್ಷಣಗಳಿಗೆ ಸಾಕ್ಷಿಯಾಯಿತು.
ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ದೇವ್ ಜಾವಿಯಾ ಮೊದಲ ಸೆಟ್ ನಲ್ಲಿ ಅವಿಸ್ಮರಣೀಯ ಆಟ ಪ್ರದರ್ಶಿಸಿದರು. ಉಜ್ಬೇಕಿಸ್ಥಾನದ ಖುಮೊಯುನ್ ಸುಲ್ತಾನೋವ್ ಭಾರತೀಯ ಆಟಗಾರನಿಗಿಂತ 450 ರ್ಯಾಂಕ್ ಮುಂದಿದ್ದರು, ಕಠಿಣ ಹೋರಾಟದ ಬಳಿಕ 7-6, (7-5), 6-2 ಅಂತರದ ಗೆಲುವು ದಾಖಲಿಸಿದರು ಈ ಮೂಲಕ ರಷ್ಯಾದ ಬೊಗ್ಡಾನ್ ಬೊಬ್ರೋವ್ ಅವರೊಂದಿಗೆ ಹಣಾಹಣಿ ನಡೆಸಲು ಸನ್ನದ್ಧರಾದರು.
ದೇವ್ ಜಾವಿಯಾ ತಮ್ಮ ಎಡಗೈ ಆಟದ ವೈಕರಿ ಮೂಲಕವೇ ಕಳೆದ ವಾರ ಮುಂಬೈ ಸೋಲನನ್ಉ ಲೆಕ್ಕಿಸದೇ ಇಂದಿನ ಪಂದ್ಯದಲ್ಲಿ ಒಂದು ಗಂಟೆ ಐವತ್ತು ನಿಮಿಷ ಸತತ ಸೆಣಸಾಟ ನಡೆಸಿದರು. ಶಾಟ್ ಮೇಕಿಂಗ್ಸ್ ನಲ್ಲಿ ಉತ್ತಮ ಶ್ರೇಯಾಂಕ ಪಡೆದಿದ್ದ ಜಾವಿಯಾ ಮೊದಲ ಎರಡು ಪಂದ್ಯಗಳಲ್ಲಿ ಆರಾಮವಾಗಿ ಸರ್ವ್ ಪ್ರಯೋಗಿಸಿದರೂ, ಆರನೇ ಗೇಮ್ ನಲ್ಲಿನ ಕಳಪೆ ಸರ್ವ್ ಆಟವನ್ನು ಏಕಮುಖವಾಗಿಸಿತು. ಏಳನೇ ಗೇಮ್ ನಲ್ಲಿ ಜಾವಿಯಾ ಬ್ರೇಕ್ ಪಾಯಿಂಟ್ ನಲ್ಲಿ ಡಬಲ್ಸ್ ಫಾಲ್ಟ್ ಮಾಡಿದ ಸುಲ್ತಾನೋವ್ ಮಣಿಸಿದರು.
22 ವರ್ಷದ ದೇವ್ ಜಾವಿಯಾ ಎದುರಾಳಿ ಸುಲ್ತಾನೋವ್ ಕೆಲವು ಲೋಪಗಳನ್ನು ವರವಾಗಿ ಪರಿವರ್ತಿಸಿಕೊಂಡು ಮೂರು ಬ್ರೇಕ್ ಪಾಯಿಂಟ್ ಪಡೆದರು. ಸುಲ್ತಾನೋವ್ ನೆಟ್ ಗೆ ಹೊಡೆದ ಓವರ್ ಹೆಡ್ ಅನ್ನು ರಿಟರ್ನ್ ಮಾಡಿದ ಪರಿ ಅಧ್ಬುತವಾಗಿತ್ತು.
ಪಂದ್ಯದಲ್ಲಿ ಮುನ್ನಗ್ಗುತ್ತಿದ್ದ ಜಾವಿಯಾಗೆ ಹತ್ತನೇ ಗೇಮ್ ನಲ್ಲಿ ಎಡವಲು ಆರಂಭಿಸಿದರು, ಅಗ್ರ ಶ್ರೇಯಾಂಕದ ಯಶಸ್ಸಿನ ಖುಷಿಯಲ್ಲಿದ್ದ ಜಾವಿಯಾಗೆ ಹಿನ್ನಡೆಯಾಗತೊಡಗಿತು. ಟೈಬ್ರೇಕ್ ನಲ್ಲೂ ಇದು ಸಮ ಸ್ಟೀವನ್ಸ್ ಆಗಿತ್ತು, ಸುಲ್ತಾನೋವ್ ಮುನ್ನುಗ್ಗಿದರು. 5-5 ಅಂಕದಲ್ಲಿದ್ದ ಪಂದ್ಯದ ವೇಳೆ ಎರಡು ಅಚಾತುರ್ಯದ ತಪ್ಪುಗಳಿಗೆ ಬೆಲೆ ತೆತ್ತ ಜಾವಿಯಾ ಸುಲ್ತಾನೋವ್ ಅವರಿಗೆ ಆರಂಭಿಕ ಸೆಟ್ ದೊರೆಯಲು ಕಾರಣವಾದರು.
ಉಜ್ಬೇಕ್ ಆಟಗಾರನ ಮಣಿಸಲು ಜಾವಿಯಾ ಮಾಡಿದ ತಂತ್ರವೆಲ್ಲವೂ ತಪ್ಪುಗಳೇ ಆಗಿ ಸುಲ್ತಾನೋವ್ ಕಡೆಗೆ ಗೆಲುವು ಸನ್ನಿಹಿತವಾಯಿತು. ಖುಮೊಯುನ್ ಸುಲ್ತಾನೋವ್ ಮೂರು ಮತ್ತು ಐದನೇ ಗೇಮ್ ಗಳಲ್ಲಿ ಜಾವಿಯಾ ವಿರುದ್ಧ 6-2 ರಿಂದ ಸೆಮಿಫೈನಲ್ ಪಂದ್ಯವನ್ನು ಗೆದ್ದುಕೊಂಡರು.
ಇನ್ನೊಂದು ಸೆಮಿಫೈನಲ್ ಕದನದಲ್ಲಿ ರಷ್ಯಾದ ಬೊಗ್ಡಾನ್ ಬೊಬ್ರೋವ್ ಅಮೆರಿಕದ ನಿಕ್ ಚಾಪೆಲ್ ವಿರುದ್ಧ ಸಹಜ ಕೌಶಲದೊಂದಿಗೆ 6-3, 6-0 ಅಂತರದಲ್ಲಿ ಗೆದ್ದು ವಿಜಯದ ನಗೆ ಬೀರಿದರು.
ಡಬಲ್ಸ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಎಗೋರ್ ಆಗಾಪೋನೊವ್ ಮತ್ತು ಬೊಬ್ರೊವ್ ಜೋಡಿ ನಿಕ್ ಚಾಪೆಲ್ ಮತ್ತು ನಿತಿನ್ ಕುಮಾರ್ ಸಿನ್ಹಾ ಇಂಡೋ-ಅಮೆರಿಕನ್ ಜೋಡಿಯನ್ನು 7-5, 6-2 ಅಂತರದಲ್ಲಿ ಮಣಿಸಿದರು.
ಭಾರತ ನೆಲದಲ್ಲಿ ಗೆಲುವಿನ ಲಯ ಕಂಡುಕೊಂಡಿರುವ ರಷ್ಯನ್ ಆಟಗಾರರು ಮೊದಲ ಸೆಟ್ ನಲ್ಲಿ ವೇಗಕ್ಕೆ ಅವಕಾಶ ಕೊಡದೆ ಆಟವನ್ನು ನಡೆಸಿದರು, ಆದರೆ ಎರಡನೇ ಸೆಟ್ ನಲ್ಲಿ ಆಟವನ್ನು ಸೀಲ್ ಮಾಡುವುದರ ಮೂಲಕ ಗೆಲುವಿನ ಕಡೆ ನಡೆದರು. ಬೊಬ್ರೋವ್ ಸರಣಿಯಲ್ಲಿ ನಾಲ್ಕನೇ ಡಬಲ್ಸ್ ಪ್ರಶಸ್ತಿ ಪಡೆದುಕೊಂಡರೇ ಭಾರತದ ನೆಲದಲ್ಲೇ ಎರಡನೇ ಪ್ರಶಸ್ತಿ ಗೆದ್ದು ಬೀಗಿದರು. ಎಗೋರ್ ಆಗಾಫೋನೋವ್ ಭುವನೇಶ್ವರದಲ್ಲಿ ನಡೆದಿದ್ದ ಪಂದ್ಯದಲ್ಲಿ ಪ್ರಶಸ್ತಿ ಎತ್ತಿಹಿಡಿದ್ದರು.
*ಫಲಿತಾಂಶಗಳು ( ಉಲ್ಲೇಖಿಸದ ಹೊರತು ಭಾರತೀಯರು):*
ಸಿಂಗಲ್ಸ್ ( ಸೆಮಿಫೈನಲ್): ಉಜ್ಬೇಕಿಸ್ಥಾನದ ಖುಮೊಯುನ್ ಸುಲ್ತಾನೊವ್ ಭಾರತೀಯ ದೇವ್ ಜಾವಿಯಾ ವಿರುದ್ಧ 7-6 (7-5), 6-2 ಅಂತರದ ಗೆಲುವು ಸಾಧಿಸಿದರು. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ರಷ್ಯಾದ ಬೊಗ್ಡಾನ್ ಬೊಬ್ರೊವ್ ಎದುರಾಳಿ ಅಮೆರಿಕದ ನಿಕ್ ಚಾಪೆಲ್ ವಿರುದ್ಧ 6-3, 6-0 ಅಂತರದಲ್ಲಿ ಜಯದ ಪತಾಕೆ ಹಾರಿಸಿದರು.
ಡಬಲ್ಸ್ (ಅಂತಿಮ) : 1- ಎಗೋರ್ ಆಗಾಫೋನೋವ್ ಮತ್ತು ಬೊಗ್ಡಾನ್ ಬೊಬ್ರೊವ್ ಜೋಡಿ ಅಮೆರಿಕದ ನಿಕ್ ಚಾಪೆಲ್ ಹಾಗೂ ನಿತಿನ್ ಕುಮಾರ್ ಸಿನ್ಹಾ ಜೋಡಿಯನ್ನು 7-5, 6-2 ಅಂತರದಲ್ಲಿ ಮಣಿಸಿ ವಿಜಯ ಬರೆದರು.
ಐಟಿಎಫ್ ಕಲಬುರಗಿ ಪುರುಷರ ಓಪನ್ ಟೆನಿಸ್ ಪಂದ್ಯವಾಳಿಯಲ್ಲಿ ಚಾಂಪಿಯನ್ನರಿಗೆ 1550 ಅಮೆರಿಕನ್ ಡಾಲರ್ ಮೊತ್ತದ ಪ್ರಶಸ್ತಿ ಹಾಗು ರನ್ನರ್ ಅಪ್ ಗಳಿಗೆ 900 ಅಮೆರಿಕನ್ ಡಾಲರ್ ಪ್ರಶಸ್ತಿ ಮೊತ್ತ ನಿಗಧಿಪಡಿಸಲಾಗಿದೆ.
ಕ್ಯಾಪ್ಷನ್
ಚಿತ್ರ -1 ಐಟಿಎಫ್ ಕಲಬುರಗಿ ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತೀಯ ದೇವ್ ಜಾವಿಯಾ ವಿರುದ್ಧ ಖುಮುಯುನ್ ಸುಲ್ತಾನೋವ್ ಪ್ರಯೋಗಿಸಿದ ಫೋರ್ ಹ್ಯಾಂಡ್ ರಿಟರ್ನ್.
ಚಿತ್ರ -2 ತೊಗರಿ ಕಣಜ ಕಲಬುರಗಿ ಅಂಕಣದಲ್ಲಿ ಡಬಲ್ಸ್ ಜಯಭೇರಿ ಭಾರಿಸಿದ ರಷ್ಯಾದ ಎಗೋರ್ ಆಗಾಫೋನೊವ್ (ಎಡ) ಮತ್ತು ಬೊಗ್ಡಾನ್ ಬೊಬ್ರೊವ್ ಗೆಲುವಿನ ಪತಾಕೆ ಹಾರಿಸಿದರು.
ಚಿತ್ರ -3 ಐಟಿಎಫ್ ಕಲಬುರಗಿ ಓಪನ್ ಟೆನಿಸ್ ಟೂರ್ನಿಯ ಡಬಲ್ಸ್ ಚಾಂಪಿಯನ್ ಗಳಾದ ಎಗೋರ್ ಆಗಾಫೋನೋವ್ (ಎಡ) ಮತ್ತು ಬೊಗ್ಡಾನ್ ಬೊಬ್ರೊವ್ ಎದುರಾಳಿ ಜೋಡಿ ನಿಕ್ ಚಾಪೆಲ್ (ಬಲದಿಂದ 2ನೇ ಯವರು) ಮತ್ತು ನಿತಿನ್ ಕುಮಾರ್ ಸಿನ್ಹಾ (ಬಲ) .
ಚಿತ್ರ-4 ಶನಿವಾರ ನಡೆದ ಐಟಿಎಫ್ ಕಲಬುರಗಿ ಓಪನ್ ಡಬಲ್ಸ್ ವಿಭಾಗದಲ್ಲಿ ವಿಜೇತರಾದ ಎಗೋರ್ ಆಗಾಫೋನೊವ್ ( ಎಡದಿಂದ ಐದನೇಯವರು) ಮತ್ತು ಬೊಗ್ಡಾನ್ ಬೊಬ್ರೊವ್ ಮತ್ತು ರನ್ನರ್ ಅಪ್ ನಿಕ್ ಚಾಪೆಲ್ (ಬಲದಿಂದ ನಾಲ್ಕನೇಯವರು) ಮತ್ತು ಭಾರತದ ನಿತಿನ್ ಕುಮಾರ್ ಸಿನ್ಹಾ (ಬಲದಿಂದ ಮೂರನೇಯವರು) ಪಂದ್ಯಾವಳಿ ಬಳಿಕ ಐಟಿಎಫ್ ಅಧಿಕಾರಿಗಳು ಹಾಗೂ ಕರ್ನಾಟಕ ಸರ್ಕಾರದ ಪ್ರತಿನಿಧಿಗಳೊಂದಿಗೆ ಇರುವುದು.
Post a Comment