Clickable Image

Friday, November 1, 2024

ಕಬ್ಬಿನ ಹೊಲದಲ್ಲಿ ಗಾಂಜಾ ಪತ್ತೆ, ಅಧಿಕಾರಿಗಳು ಶಾಕ್!

 ಕಬ್ಬಿನ ಹೋಲದಲ್ಲಿ ಗಾಂಜಾ ಪತ್ತೆ! ಗಾಂಜಾ ಬೆಳೆದ ಗಂಭೀರತೆಗೆ ಅಧಿಕಾರಿಗಳೇ ಶಾಕ್...



ಅಫಜಲಪುರ: ಪ್ರಕರಣ ಸಂಬಂಧಿತ ವಿಷಯ ಹಂಚಿಕೊಂಡ ಆಳಂದ ವಲಯ ಕಛೇರಿಯ ಅಬಕಾರಿ ನಿರೀಕ್ಷಕರಾದ ಶ್ರೀ ಶ್ರೀಧರ ನಿರೋಣಿ ದಿನಾಂಕ 31/10/2024 ರಂದು ಸಮಯ ಬೇಳಿಗ್ಗೆ 10:30 ಗಂಟೆಗೆ ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲ್ಲೂಕಿನ ಗೊಬ್ಬುರ್(ಬಿ) ಗ್ರಾಮದ ಸರ್ವೆ ನಂ. 484/2 ಜಮೀನಿನ ಮೇಲೆ ದಾಳಿ ಮಾಡಿದಾಗ ಅಕ್ರಮವಾಗಿ ಕಬ್ಬಿನ ಬೆಳೆ ಮಧ್ಯದಲ್ಲಿ ಗಾಂಜಾ ಗಿಡಗಳು ಬೆಳೆದಿರುವುದು ಕಂಡುಬಂದಿರುತ್ತದೆ. ಅವುಗಳನ್ನು ಏಣಿಕೆ ಮಾಡಿ ನೋಡಿದಾಗ ಹೂ, ತೆನೆಭರಿತ ಎಲೆಗಳಿಂದ ಕೂಡಿದ 15 ಹಸಿ ಗಾಂಜಾದ ಗಿಡಗಳು ಇರುತ್ತವೆ. ಹಸಿ ಗಾಂಜಾ ಗಿಡಗಳನ್ನು ತೂಕ ಮಾಡಿ ನೋಡಿಗಾದ ಒಟ್ಟು 57.7 Kg. ತೂಕ ಇರುತ್ತದೆ. ಜಮೀನಿನ ಮಾಲೀಕರ ವಿರುದ್ದ ಎನ್.ಡಿ.ಪಿ.ಎಸ್ ಕಾಯ್ದೆ-1985 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. 


ಅದೆ ಗ್ರಾಮದ ಇನ್ನೊಂದು ಕಡೆ ದಾಳಿ ಮಾಡಿದ ಅಬಕಾರಿ ಅಧಿಕಾರಿಗಳು, ದಿನಾಂಕ: 30-10-2024 ರಂದು ರಾತ್ರಿ ಅಬಕಾರಿ ಜಂಟಿ ಆಯುಕ್ತರು ಮತ್ತು ಅಬಕಾರಿ ಉಪ ಆಯುಕ್ತರು ಕಲಬುರಗಿ ರವರ ನಿರ್ದೇಶನದಂತೆ ರವೀಂದ್ರ ಪಾಟೀಲ್ ಪ್ರಾಪ್ತಾಂಕಿತ ಅಧಿಕಾರಿಗಳು ಹಾಗೂ ಅಬಕಾರಿ ಉಪ ಅಧೀಕ್ಷಕರು ಉಪ ವಿಭಾಗ ಚಿತ್ತಾಪುರ ರವರ ನೇತೃತ್ವದಲ್ಲಿ, ನರೇಂದ್ರ ಹೊಸಮನಿ ಅಬಕಾರಿ ನಿರೀಕ್ಷಕರು, ಶರಣಪ್ಪ ಮೇದ ಅಬಕಾರಿ ಉಪ ನಿರೀಕ್ಷಕರು ಹಾಗೂ ಸಿಬ್ಬಂದಿಗಳಾದ ಮೊಹಮ್ಮದ್ ಮುಬಿನ್, ಮಲ್ಲಿಕಾರ್ಜುನ ನಟಿಕರ ಇವರುಗಳ ತಂಡ ಕಲಬುರಗಿ ಜಿಲ್ಲೆ ಅಫಜಲಪೂರ ತಾಲ್ಲೂಕಿನ ಗೊಬ್ಬುರ (ಬಿ)ಗ್ರಾಮದಲ್ಲಿ ದತ್ತು ಸುತಾರ(ಬಡಿಗೇರ) ಎಂಬುವವನಿಗೆ ಸೇರಿದ ಟಿನ್‌ ಶೆಡ್‌ ಮಲೆ ಅಬಕಾರಿ ದಾಳಿ ರಾತ್ರಿ 9:25 ಗಂಟೆಗೆ ಅಬಕಾರಿ ದಾಳಿ ಮಾಡಿದಾಗ ಅಲ್ಲಿ ಅಕ್ರಮವಾಗಿ ಮಾರಾಟದ ಸಲುವಾಗಿ ಸಂಗ್ರಹಿಟ್ಟಿದ್ದ ಹೂ, ಬೀಜ ಮತ್ತು ಹಸಿರು ಎಲೆಗಳಿಂದ ಕೂಡಿದ್ದ ಒಟ್ಟು 2.664 Kg ಹಸಿ ಗಾಂಜಾವನ್ನು ಹಾಗೂ ಒಂದು ಹೀರೋ ಪಾಶನ್ ಪ್ರೊ ದ್ವಿ - ಚಕ್ರ ವಾಹನವನ್ನು ವಶಪಡಿಸಿಕೊಂಡು,ಸದರಿ ದಾಳಿಯಲ್ಲಿ 3 ಜನ ಆರೋಪಿತರನ್ನು ಸ್ಥಳದಲ್ಲಿ ಬಂದಿಸಿ ದಾಳಿಯ ಕಾಲಕ್ಕೆ ಪರಾರಿಯಾದ 4 ಜನ ಆರೋಪಿಗಳ ವಿರುದ್ಧ NDPS ಕಾಯ್ದೆ 1985 ರ ವಿವಿಧ ಕಲಂ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂದಿತ 3 ಜನ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.ಎಂಬ ಮಾಹಿತಿ ತಿಳಿದುಬಂದಿದೆ.


ದಾಳಿಯಲ್ಲಿ , ಅಬಕಾರಿ ಉಪ ನಿರೀಕ್ಷಕರಾದ ಬಸವರಾಜ ಮಾಲಗತ್ತಿ ಹಾಗೂ ಅಬಕಾರಿ ಜಂಟಿ ಆಯುಕ್ತರ ಕಛೇರಿ(ಜಾ&ತ), ಕಲಬುರಗಿ ವಿಭಾಗ ಕಛೇರಿಯ ಅಬಕಾರಿ ನಿರೀಕ್ಷಕರಾದ ಶ್ರೀ ನರೇಂದ್ರಕುಮಾರ ಹೊಸಮನಿ, ಅಬಕಾರಿ ಉಪ ನಿರೀಕ್ಷಕರಾದ ಶರಣಪ್ಪ ಹಾಗೂ ಅಬಕಾರಿ ಉಪ ಆಯುಕ್ತರ ಕಛೇರಿಯ ಅಬಕಾರಿ ನಿರೀಕ್ಷಕರಾದ ರಮೇಶ ಬಿರಾದಾರ, ಆಬಕಾರಿ ಪೇದೆ ಶಿವಶರಣ ಹಾಗೂ ಆಳಂದ ವಲಯ ಕಛೇರಿಯ ಅಬಕಾರಿ ಮುಖ್ಯ ಪೇದೆಗಳಾದ ರಾಘವೇಂದ್ರ, ಭೋಗಪ್ಪ ಹಾಜರಿದ್ದರು.


 ವರದಿ : ಯಲ್ಲಾಲಿಂಗ ಪೂಜಾರಿ 

Post a Comment

Whatsapp Button works on Mobile Device only