*ಯುವಕರ, ಮಹಿಳೆಯರ ಸಬಲೀಕರಣಕ್ಕೆ ಕೌಶಲ್ಯಾಭಿವೃದ್ಧಿತರಬೇತಿ: ಶರಣ್ ಪ್ರಕಾಶ್ ಪಾಟೀಲ್*
*ಕಲಬುರಗಿಯಲ್ಲಿ ಜಿಟಿಟಿಸಿ- ಬಹು ಕೌಶಲ್ಯಾಭಿವೃದ್ಧಿ ಕೇಂದ್ರಸ್ಥಾಪನೆಗೆ ಗುಲ್ಬರ್ಗ ವಿವಿ ಜೊತೆ ಒಪ್ಪಂದ | ಜರ್ಮನ್, ಜಪಾನೀಸ್ ಭಾಷೆ ಕಲಿಸಲು ಕ್ರಮ*
*ಕಲಬುರಗಿ, ಡಿಸೆಂಬರ್ 3:* ಪ್ರಪಂಚ ಈಗ ಅಸಾಧಾರಣ ವೇಗದಲ್ಲಿ ವಿಕಸನಗೊಳ್ಳುತ್ತಿದ್ದು, ತಂತ್ರಜ್ಞಾನ, ಡಿಜಿಟಲೀಕರಣ ಮತ್ತುಆಧುನಿಕತೆಯು ಒಟ್ಟಾರೆ ವ್ಯವಸ್ಥೆಯನ್ನು ಬದಲಾಯಿಸಿ, ಅನೇಕ ಸವಾಲುಮತ್ತು ಅವಕಾಶಗಳನ್ನು ಸೃಷ್ಟಿಸುತ್ತಿದೆ. ಈ ನಿಟ್ಟಿನಲ್ಲಿ "ಸಾಮರ್ಥ ಮತ್ತುಹೊಸ ಕೌಶಲ್ಯವನ್ನು ಅನಾವರಣಗೊಳಿಸಲು" ಜಿಟಿಟಿಸಿ-ಬಹುಕೌಶಲ್ಯಾಭಿವೃದ್ಧಿ ಕೇಂದ್ರದ (MSDC) ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು *ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್* ತಿಳಿಸಿದರು.
ಕಲಬುರಗಿ ವಿವಿಯ ಆವರಣದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಸಚಿವರ ಸಮ್ಮುಖದಲ್ಲಿ ಜಿಟಿಟಿಸಿ ಅಧಿಕಾರಿಗಳು ಮತ್ತು ಗುಲ್ಬರ್ಗ ವಿಶ್ವವಿದ್ಯಾಲಯದ ಅಧಿಕಾರಿಗಳು ಒಡಂಬಡಿಕೆಗೆ ಸಹಿ ಹಾಕಿ ವಿನಿಮಯ ಮಾಡಿಕೊಂಡರು.
ನಂತರ ಮಾತನಾಡಿದ ಸಚಿವರು, ಸುಮಾರು 25 ಎಕರೆ ವಿಶಾಲಪ್ರದೇಶದಲ್ಲಿ 120 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕೇಂದ್ರ ತಲೆ ಎತ್ತಲಿದೆ. ಇದರಿಂದ ಪ್ರೌಢಶಾಲೆ, ಪದವೀಧರರು, ಸ್ನಾತಕೋತ್ತರ ಪದವಿವಿದ್ಯಾರ್ಥಿಗಳಿಗೆ ವಿಶ್ವ ದರ್ಜೆಯ ತರಬೇತಿ ನೀಡಲು ಸಾಧ್ಯವಾಗಲಿದೆ."ಸ್ಥಳೀಯ ಕೌಶಲ್ಯ, ಜಾಗತಿಕ ಕೆಲಸ" ಎಂಬುದು ನಮ್ಮಮೂಲಮಂತ್ರವಾಗಿದೆ ಎಂದು ತಿಳಿಸಿದರು.
ಈ ಕೇಂದ್ರದಲ್ಲಿ ಬಹು ಕೌಶಲ್ಯ ತರಬೇತಿಯನ್ನು ನೀಡುವ ಮೂಲಕವಿದ್ಯಾರ್ಥಿಗಳನ್ನು ಜಾಗತಿಕ ಮಟ್ಟಕ್ಕೆ ಕೊಡುಗೆ ನೀಡುವ ಗುರಿಹೊಂದಿದ್ದೇವೆ. ಸ್ಥಳೀಯವಾಗಿ ಕೌಶಲ್ಯ ಪಡೆದು, ಜಾಗತಿಕ ಮಟ್ಟದಲ್ಲಿ ಯಾವುದೇ ಕ್ಷೇತ್ರದಲ್ಲಿಯೂ ಕಾರ್ಯ ನಿರ್ವಹಿಸುವ ಸಾಮರ್ಥ್ಯವನ್ನು ಮೈಗೂಡಿಸಲಾಗುವುದು. ಇದರಿಂದ ಶ್ರೇಷ್ಠಮಟ್ಟದ ಮಾನವ ಸಂಪನ್ಮೂಲ ಹೊರಬರಲಿದೆ ಎಂದು ಸಚಿವರು ವಿವರಿಸಿದರು.
ಉದ್ಯಮಶೀಲತೆ ಮತ್ತು ನಾವೀನ್ಯತೆಗೆ ಹೊಸ ಮಾರ್ಗಗಳನ್ನು ಕಂಡುಕೊಳ್ಳುವುದು ಇಂದಿನ ಅಗತ್ಯವಾಗಿದೆ. ವಿದ್ಯಾರ್ಥಿಗಳು ಮಾತ್ರವಲ್ಲದೇ, ಯುವಕರು, ಮಹಿಳೆಯರ ಸಬಲೀಕರಣಕ್ಕೆ ಹಾಗೂ ಸ್ವಾವಲಂಬಿಯಾಗಲು ಕೂಡ ಕ್ರಮ ಕೈಗೊಳ್ಳಲಾಗುತ್ತದೆ. ಇದಲ್ಲದೇ ಭಾಷಾ ಪ್ರಯೋಗಾಲಯ ಸ್ಥಾಪಿಸಲಾಗುತ್ತಿದ್ದು, ಜರ್ಮನ್, ಜಪಾನೀಸ್ ಭಾಷೆ ಕಲಿಸಲಾಗುತ್ತದೆ ಎಂದು ಶರಣ್ ಪ್ರಕಾಶ್ ಪಾಟೀಲ್ ವಿವರಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೃಹತ್ ಹಾಗೂ ಬಹು ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆಯಾಗುತ್ತಿರುವುದರಿಂದ ಈ ಭಾಗದ ಜನರಿಗೆ ಉತ್ತಮತರಬೇತಿ ಹಾಗೂ ಹೆಚ್ಚಿನ ಅವಕಾಶಗಳು ಕೈಬೀಸಿ ಕರೆಯುತ್ತದೆ. ಈರೀತಿಯ ಕೇಂದ್ರಗಳನ್ನು ರಾಜ್ಯದ ಮೂರು ಕಡೆ ಸ್ಥಾಪಿಸಲಾಗುತ್ತದೆ. ಕಲಬುರಗಿ, ಕೊಪ್ಪಳ ಜಿಲ್ಲೆಯ ತಳಕಲ್ ಹಾಗೂ ಮೈಸೂರಿನ ವರುಣಾದಲ್ಲಿ ಇದು ತಲೆ ಎತ್ತಲಿವೆ ಎಂದು ಮಾಹಿತಿ ನೀಡಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಡಾ. ಅಜಯ್ ಸಿಂಗ್, ಗುಲ್ಬರ್ಗ ವಿಶ್ವವಿದ್ಯಾಲಯ ಕುಲಪತಿ ಪ್ರೊ.ದಯಾನಂದ ಅಗಸರ, ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ. ಜಿಟಿಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ವೈ.ಕೆ. ದಿನೇಶ್ ಕುಮಾರ್ ಉಪಸ್ಥಿತರಿದ್ದರು.
*Quote*
"ಬಹು ಕೌಶಲ್ಯಾಭಿವೃದ್ಧಿ ಕೇಂದ್ರಗ ಸ್ಥಾಪನೆಯಿಂದ ತರಬೇತಿ, ಯುವಕರು, ಮಹಿಳೆಯರ ಸಬಲೀಕರಣ, ವೃತ್ತಿಪರತೆ, ಪ್ರಾದೇಶಿಕ ಅಸಮತೋಲನ, ವಾಣಿಜ್ಯೋದ್ಯಮ ಅವಕಾಶಗಳು, ಉದ್ಯೋಗ ಸೃಷ್ಟಿ, ವಿದೇಶಿ ಭಾಷಾಕಲಿಕೆ, ಪ್ರೌಢಶಾಲೆ ಹಂತದಿಂದ ಕೌಶಲ್ಯ ತರಬೇತಿ, ಮೌಲ್ಯಮಾಪನ, ಪ್ರಮಾಣೀಕರಣ, ಅಂತಾರಾಷ್ಟ್ರೀಯ ಉದ್ಯೋಗ ಅವಕಾಶಗಳು ದೊರೆಯಲಿದೆ. *- ಶರಣ್ ಪ್ರಕಾಶ್ ಪಾಟೀಲ್, ಸಚಿವರು*
*BOX*
*ತರಬೇತಿಗಳು*
* ಅಡ್ವಾನ್ಸ್ಡ್ ಮ್ಯಾನ್ಯುಫ್ಯಾಕ್ಜರಿಂಗ್
* ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ತಂತ್ರಜ್ಞಾನ
* ಮೆಕಾಟ್ರಾನಿಕ್ಸ್ ಮತ್ತು ಆಟೊಮೇಷನ್
* ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲ್ ರೂಪಾಂತರ
* ನವೀಕರಿಸಬಹುದಾದ ಇಂಧನ ಮತ್ತು ಸುಸ್ಥಿರತೆ
* ಆರೋಗ್ಯ ಮತ್ತು ಸಂಬಂಧಿತ ವಲಯಗಳು
* ಆತಿಥ್ಯ ಮತ್ತು ಸೇವಾ ಉದ್ಯಮಗಳು
* ಸಾಫ್ಟ್ ಸ್ಕಿಲ್ಸ್, ಸಂವಹನ ಮತ್ತು ನಾಯಕತ್ವ
Post a Comment