ಡಿವೈಎಸ್ ಪಿಯೊಬ್ಬ ದೂರು ಕೊಡಲು ಬಂದಿದ್ದ ಮಹಿಳೆ ಜೊತೆ ಕಚೇರಿಯಲ್ಲೇ ರಾಸಲೀಲೆ ನಡೆಸಿರುವ ವಿಡಿಯೋವೊಂದು ಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಧುಗಿರಿ ಡಿವೈಎಸ್ ಪಿ ರಾಮಚಂದ್ರಪ್ಪ ಕಚೇರಿಯಲ್ಲೇ ಮಹಿಳೆ ಜೊತೆ ರಾಸಲೀಲೆ ನಡೆಸಿ ಸಿಕ್ಕಿಬಿದ್ದಿದ್ದು, ದೂರು ನೀಡಲು ಪೊಲೀಸ್ ಠಾಣೆಗೆ ಬಂದ ಮಹಿಳೆಯನ್ನೇ ಪುಸಲಾಯಿಸಿ ಡಿವೈಎಸ್ ಪಿ ರಾಸಲೀಲೆ ನಡೆಸಿರುವ ಘಟನೆ ನಡೆದಿದೆ.
ಪಾವಗಡ ಮೂಲದ ಮಹಿಳೆ ಜಮೀನು ವ್ಯಾಜ್ಯದ ಬಗ್ಗೆ ದೂರು ನೀಡಲು, ಮಾತುಕತೆ ನಡೆಸಲು ಡಿವೈಎಸ್ ಪಿ ಕಚೇರಿಗೆ ಬಂದಿದ್ರು. ಈ ವೇಳೆ ಮಹಿಳೆಯನ್ನ ಪುಸಲಾಯಿಸಿರುವ ಡಿವೈಎಸ್ ಪಿ ರಾಮಚಂದ್ರಪ್ಪ, ಶೌಚಾಲಯದ ಬಳಿ ಕರೆದುಕೊಂಡು ಹೋಗಿ ರಾಸಲೀಲೆ ನಡೆಸಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ವಿಡಿಯೋ ವೈರಲ್ ಆದ ಬೆನ್ನಲ್ಲೆ ತಲೆಮರೆಸಿಕೊಂಡ ಡಿವೈಎಸ್ ಪಿ ರಾಮಚಂದ್ರಪ್ಪ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ
Post a Comment